ಚಾಮರಾಜನಗರ: ಬಿಜೆಪಿ ಹೈಕಮಾಂಡ್ ಒಪ್ಪಿದರೇ ಕಾಂಗ್ರೇಸ್ ನ ಐವರು ಶಾಸಕರಿಂದ ರಾಜೀನಾಮೆ ಕೊಡಿಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಚಾಮರಾಜನಗರದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.
ಕೊಳ್ಳೇಗಾಲದಲ್ಲಿ ನೀರಾವರಿ ಯೋಜನೆ ಪರಿಶೀಲನೆಗೆ ಆಗಮಿಸಿದ್ದ ವೇಳೆ ಮಾತನಾಡಿದ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿ ಹೊಳಿ, ನನ್ನ ಸಂಪರ್ಕದಲ್ಲಿ ಕಾಂಗ್ರೇಸ್ ನ 22 ಶಾಸಕರಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. ಕಾಂಗ್ರೇಸ್ ಮುಳುಗುತ್ತಿರುವ ಹಡಗು ಅಲ್ಲಿಗೆ ಹೋಗುತ್ತೇನೆ ಎನ್ನುವವರು ಮೂರ್ಖರು,
ಉಮೇಶ್ ಕತ್ತಿ ಮನೆಯಲ್ಲಿ ಪೂಜೆ ಇತ್ತು ಎರಡು ತಿಂಗಳಿನಿಂದ ದೂರವಿದ್ದವರು ಹೋಗಿದ್ದರು, ಉಮೇಶ್ ಕತ್ತಿ ಮನೆಯಲ್ಲಿ ಯಾವುದೇ ಸಭೆ ನಡೆದಿಲ್ಲ ಬಿಜೆಪಿ ಸರ್ಕಾರ 100% ಸೇಫ್ ಆಗಿದೆ ಎಂದು ತಿಳಿಸಿದರು.
ಬಿಜೆಪಿ ಸರ್ಕಾರ ಮೂರು ವರ್ಷವೂ ಪೂರೈಸಿ ಮುಂದಿನ ಐದು ವರ್ಷ ಆಡಳಿತ ನಡೆಸಲಿದೆ. ನಾನು ಯಡಿಯೂರಪ್ಪ ಪರ, ನನ್ನ ರಾಜಕೀಯ ಅಂತ್ಯ ಬಿಜೆಪಿಯಲ್ಲಿಯೇ ಆಗಲಿದೆ ಎಂದು ತಿಳಿಸಿದರು.
ರಮೇಶ್ ಜಾರಕಿಹೊಳಿ ಹೇಳಿಕೆಗೆ ಹನೂರು ಕಾಂಗ್ರೇಸ್ ಶಾಸಕ ಆರ್.ನರೇಂದ್ರ ತಿರುಗೇಟು ನೀಡಿದ್ದು, ಕಾಂಗ್ರೇಸ್ ಪಕ್ಷ ಸಮುದ್ರವಿದ್ದಂತೆ, ನೂರಾರು ಜನ ಬರ್ತಾರೆ ಹೋಗ್ತಾರೆ, ಕಾಂಗ್ರೆಸ್ ಗೆ ಇತಿಹಾಸವಿದೆ.
ರಮೇಶ್ ಜಾರಕಿ ಹೊಳಿ ಅವರ ಹಿನ್ನಲೆ ನೋಡಲಿ. ಯಾವ ಪಕ್ಷದಲ್ಲಿದ್ದರು, ಯಾವ ಪಕ್ಷದಿಂದ ಬಂದವರು, ಯಾವ ಪಕ್ಷದಿಂದ ಅಧಿಕಾರಕ್ಕೆ ಬಂದರು? ನಮ್ಮವರನ್ನೆಲ್ಲಾ ಕರೆದುಕೊಂಡು ಹೋಗಿ ಪಕ್ಷಾಂತರ ಮಾಡಿ ಬಿಜೆಪಿಯಲ್ಲಿ ಪವರ್ ಫುಲ್ ಆಗಿದ್ದಾರೆ , ಯಾವ ಪಕ್ಷ ಮುಳುಗುತ್ತದೆ, ತೇಲುತ್ತದೆ ಎನ್ನುವುದು ಚುನಾವಣೆ ಬಂದಾಗ ಗೊತ್ತಾಗುತ್ತಾದೆ ಎಂದು ಚಾಲೆಂಜ್ ಮಾಡಿದರು.
ಕಾಂಗ್ರೆಸ್ ಪಕ್ಷವನ್ನ ಮುಳುಗಿಸುವುದು ಯಾರ ಕೈಯಲ್ಲಿಯೂ ಇಲ್ಲ, ಹಲವಾರು ಜನ ಬಿಜೆಪಿ ಆಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಹನೂರು ಶಾಸಕ ನರೇಂದ್ರ ಟಾಂಗ್ ನೀಡಿದ್ದಾರೆ.









