ಬೆಂಗಳೂರು: ಕುರುಬ ಸಂಘಟನೆಗಳು,ಕನಕ ಗುರುಪೀಠದ ಶ್ರೀಗಳು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರವೇ? ನನಗೆ ಅನ್ಯಾಯವಾದಾಗ ಶ್ರೀಗಳು ಎಲ್ಲಿದ್ದರು, ಸಂಘಟನೆಗಳು ಎಲ್ಲಿಹೋಗಿದ್ದವು ಎಂದು ಶಾಸಕ ಎಚ್.ವಿಶ್ವಾನಾಥ್ ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯರನ್ನು ರಾಜಕೀಯವಾಗಿ ಕಡೆಗಣಿಸಿದರೆ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕಾಗಲಿದೆ ಎನ್ನುವ ಕನಕ ಗುರುಪೀಠದ ನಿರಂಜನಾನಂದಪುರಿ ಶ್ರೀಗಳ ಹೇಳಿಕೆ ಕುರಿತು ಮೈಸೂರಿನಲ್ಲಿ ಮಾತನಾಡಿದ ವಿಶ್ವನಾಥ್, ಶ್ರೀಗಳು ಮತ್ತು ಕುರುಬ ಸಂಘಟನೆಗಳ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ನಾನು ಕೂಡ ಕುರುಬ ಸಮುದಾಯದವನೇ,ನಾನು ಪಕ್ಷಕ್ಕೆ ಕರೆತಂದವರೇ ನನ್ನನ್ನು ಪಕ್ಷದಲ್ಲಿ ಕಡೆಗಣಿಸುವಂತೆ ಮಾಡಿದರು,ಮೂಲೆಗುಂಪು ಮಾಡಿದರು.ವಿನಾಕಾರಣ ನನಗೆ ತೊಂದರೆ ಕೊಟ್ಟರು.ಆಗ ನಿರಂಜನಾನಂದಪುರಿ ಶ್ರೀಗಳು ಎಲ್ಲಿದ್ದರು.ನಿಮ್ಮನ್ನು ಸ್ವಾಮೀಜಿ ಮಾಡಿದ್ದು ಯಾರು?ಕುರುಬ ಸಂಘಟನೆಗಳು ಎಲ್ಲಿ ಹೋಗುದ್ದವು ಎಂದು ಗರಂ ಆದರು.









