ನನಗೆ ಯಾರೂ ಗಾಡ್ ಫಾದರ್ ಇಲ್ಲ,ಹೋರಾಟದಿಂದ ಮೇಲೆ ಬಂದೆ:ಡಿಕೆಶಿ

0
26

ಬೆಂಗಳೂರು:ರಾಮನಿಗಿಂತಲೂ ಹೆಚ್ಚು ಗೌರವ ಸಿಗೋದು ಆಂಜನೇಯನಿಗೆ.ಎಲ್ಲ ಊರುಗಳಲ್ಲಿ ಆಂಜನೇಯನ ದೇವಸ್ಥಾನವಿದೆ.ರಾಮನ ದೇವಸ್ಥಾನ ಎಲ್ಲ ಕಡೆ ಇಲ್ಲ.ಜನ ಆಂಜನೇಯನಿಗೆ ಗೌರವ ಕೊಟ್ಟಿರೋದು ಆಂಜನೇಯನ ಸೇವೆ ಭಕ್ತಿಯ ಕಾರಣಕ್ಕೆ.ಕಾಂಗ್ರೆಸ್ ನಲ್ಲೂ ಹಾಗೆಯೇ ಶ್ರಮ ವಹಿಸಿದವರಿಗೆ ಫಲ ಸಿಕ್ಕೇ ಸಿಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಯುವ ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ಶ್ರೀನಿವಾಸ್ ಅವರನ್ನು ಸನ್ಮಾನಿಸಿ ಮಾತನಾಡಿದ ಡಿಕೆಶಿ,ಬಿ.ಕೆ.ಹರಿಪ್ರಸಾದ್ ರನ್ನು ಹೊರತು ಪಡಿಸಿದ್ರೆ ರಾಷ್ಟ್ರೀಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸ್ಥಾನ ಅಲಂಕರಿಸಿರೋದು ಶ್ರೀನಿವಾಸ್ ಮಾತ್ರ.ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇರುತ್ತಾನೆ.ಎಲ್ಲಿ ಶ್ರಮ‌ ಇರುತ್ತೋ ಅಲ್ಲಿ ಫಲ ಇದ್ದೇ ಇರುತ್ತೆ ಅದಕ್ಕೆ ಶ್ರೀನಿವಾಸ್ ಸಾಕ್ಷಿ ಎಂದರು.

ಎನ್ ಎಸ್ ಯು ಐ ನಿಂದ ತರಬೇತುಗೊಂಡು ಬ್ಲಾಕ್ ಕಾಂಗ್ರೆಸ್ ಮಟ್ಟದಿಂದ ಯಾರು ಕಾಂಗ್ರೆಸ್ ನಲ್ಲಿ ಬೆಳೆದಿದ್ದಾರೋ ಅಂತಹವರು ಯಾರೂ ಕೂಡ ಪಕ್ಷಾಂತರ ಮಾಡಲ್ಲ.ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದರು.

ಪ್ರೇಮಿಗಳ ದಿನ ವಿರೋಧಿಸಿದ ಪ್ರಮೋದ್ ಮುತಾಲಿಕ್ ಮುಖಕ್ಕೆ ಮಸಿ ಬಳಿದಿದ್ದು ಶ್ರೀನಿವಾಸ್.ಆಗ ಬಂಧಿತನಾಗಿದ್ದ ಶ್ರೀನಿವಾಸ್ ಬೆಂಬಲಕ್ಕೆ ಯಾವ ನಾಯಕರೂ ಹೋಗಲಿಲ್ಲ. ನಾನು ಅವರಿಗೆ ಜಾಮೀನು ಕೊಡಿಸಿ ಬಿಡಿಸುವ ಪ್ರಯತ್ನ ಮಾಡಿದೆ.ಯಾರು ಹೆಚ್ಚು ಶ್ರಮ ಹಾಕ್ತಾರೋ,ಯಾರು ಹೆಚ್ಚು ಹೋರಾಟ ಮಾಡ್ತಾರೋ ಯಾರು ಹೆಚ್ಚು ವಿವಾದಕ್ಕೆ ಗುರಿಯಾಗ್ತಾರೋ ಅವರೇ ನಾಯಕರಾಗಿ ಬೆಳೆಯೋದು.ಆರ್.ಸಿ.ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಾಗ ನಾನು ರಾಜಕೀಯ ಪ್ರವೇಶಿಸಿದೆ.ಎನ್ ಎಸ್ ಯುಐ ಮೂಲಕ ರಾಜಕೀಯ ಪ್ರವೇಶ ಮಾಡಿದೆ.ನನಗೆ ಯಾವ ಗಾಡ್ ಫಾದರ್ ಗಳೂ ಇಲ್ಲ.ಶ್ರಮ ಹೋರಾಟವೇ ನನ್ನ ಮೇಲೆ ತಂದಿದೆ ಎಂದರು.

ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದವರನ್ನು ಗುರುತಿಸಿ ರಾಹುಲ್ ಗಾಂಧಿಯವರು ರಾಜ್ಯಸಭಾ ಸದಸ್ಯರಾಗಿ ಮಾಡಿದ್ದಾರೆ.ಚಂದ್ರಶೇಖರ್ ರಾಜ್ಯಸಭಾ ಸದಸ್ಯರಾಗ್ತಾರೆ ಅಂತಾ ಯಾರೂ ನಿರೀಕ್ಷಿಸಿರಲಿಲ್ಲ.ದೊಡ್ಡ ದೊಡ್ಡ ಲೀಡರ್ ಗಳೆಲ್ಲಾ ಪ್ರಯತ್ನಿಸ್ತಾ ಇದ್ದರು.ಆದರೆ ರಾಹುಲ್ ಗಾಂಧಿಯವರು ಮೂವರು ಯುವಕರ ಸೇವೆ ಗುರ್ತಿಸಿ ರಾಜ್ಯಸಭಾ ಸದಸ್ಯರಾಗಿ ಮಾಡಿದ್ರು ಎಂದ್ರು.

- Call for authors -

LEAVE A REPLY

Please enter your comment!
Please enter your name here