ರಾಜ್ಯಪಾಲರ ಭಾಷಣ ನೀರಸ, ನಿರರ್ಥಕ: ಬಿಎಸ್ವೈ ವ್ಯಂಗ್ಯ

0
303

ಬೆಂಗಳೂರು: ಸರ್ಕಾರ ಟೇಕಾಫ್ ಆಗುವ ಯಾವುದೇ ಲಕ್ಷಣ ಇಂದಿನ‌ ರಾಜ್ಯಪಾಲರ ಭಾಷಣದಲ್ಲಿ ಕಾಣಿಸುತ್ತಿಲ್ಲ. ಎರಡೂ ಪಕ್ಷಗಳ ನಡುವೆ ಹೊಂದಾಣಿಕೆಯೂ ಕಂಡು ಬರುತ್ತಿಲ್ಲ. ಇಂದಿನ ರಾಜ್ಯಪಾಲರ ಭಾಷಣ ನೀರಸ ಮತ್ತು ನಿರರ್ಥಕ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಇಂದಿನ ರಾಜ್ಯಪಾಲರ ಭಾಷಣದಲ್ಲಿ ರೈತರ ಸಾಲ ಮನ್ನಾ ಸೇರಿದಂತೆ ರೈತರ ಯಾವುದೇ ಸಮಸ್ಯೆಗಳ ಬಗ್ಗೆ ಉಲ್ಲೇಖಿಸಿಲ್ಲ. ಕೇಂದ್ರ ಸರ್ಕಾರದ ಉಜ್ವಲ‌ ಯೋಜನೆಯನ್ನು ತಮ್ಮದೇ ಯೋಜನೆ ಎಂಬಂತೆ ಬಿಂಬಿಸಿದ್ದಾರೆ‌ ಎಂದರು.

ಬೆಂಗಳೂರು ಸೇರಿದಂತೆ ರಾಜ್ಯದ ಮೂಲಭೂತ ಸೌಲಭ್ಯದ ಬಗ್ಗೆಯೂ ಭಾಷಣದಲ್ಲಿ ಪ್ರಸ್ತಾಪವಾಗಿಲ್ಲ. ದೂಧ್ ಗಂಗಾ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ಅದು ಯಾವುದಕ್ಕೂ ಉಪಯೋಗವಿಲ್ಲ. ರಾಜ್ಯಪಾಲರ ಭಾಷಣ ನೀರಸ, ನಿರರ್ಥಕವಾದುದು ಎಂದು ಭಾಷಣದ ಬಗ್ಗೆ ಬಿಎಸ್ವೈ ವ್ಯಂಗ್ಯವಾಡಿದರು.

- Call for authors -

LEAVE A REPLY

Please enter your comment!
Please enter your name here