ರಾಜ್ಯಕ್ಕೆ ಕಾವೇರಿ ಶಾಕ್:31.24 ಟಿಎಂಸಿ ನೀರು ಬಿಡಬೇಕಾ ರಾಜ್ಯ?

0
212

ನವದೆಹಲಿ : ಉತ್ತಮ ಮುಂಗಾರು ಮಳೆಯಿಂದ ಕಾವೇರಿ ಕೊಳ್ಳದ ಬಹುತೇಕ ಜಲಾಶಯಗಳು ಭರ್ತಿಯಾಗುವ ಹಂತಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಜುಲೈನಲ್ಲಿ ತಮಿಳುನಾಡಿಗೆ ಹರಿಸಬೇಕಾದ 34 ಟಿಎಂಸಿ ನೀರು ಹರಿಸುವ ಸಲಹೆಯನ್ನು ಕಾವೇರಿ ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ ಎನ್ನಲಾಗಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ದೆಹಲಿಯ ಶಕ್ತಿ ಭವನದಲ್ಲಿ ಇಂದು ನಡೆಯಿತು.
ಕೇಂದ್ರ ಜಲ ಮಂಡಳಿ ಮತ್ತು ಪ್ರಾಧಿಕಾರದ ಮುಖ್ಯಸ್ಥ ಮಸೂದ್ ಹುಸೇನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಸರ್ಕಾರದ ಐವರು, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿ ರಾಜ್ಯಗಳ ತಲಾ ಒಬ್ಬ ಪ್ರತಿನಿಧಿಗಳು ಭಾಗವಹಿಸಿದ್ದರು.ರಾಜ್ಯದ ಪರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಹಾಜರಿದ್ದರು.

ಕಾವೇರಿ ಕೊಳ್ಳದ ಡ್ಯಾಂಗಳಲ್ಲಿರುವ ನೀರಿನ ಸಂಗ್ರಹ, ಒಳ ಹರಿವಿನ ಪ್ರಮಾಣದ ಮಾಹಿತಿಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಪ್ರತಿ ಹತ್ತು ದಿನಕ್ಕೊಮ್ಮೆಯಂತೆ ತಿಂಗಳಲ್ಲಿ 3 ಬಾರಿ ಕರ್ನಾಟಕದಿಂದ ಹರಿಸಬೇಕಿರುವ ನೀರಿನ ಪ್ರಮಾಣ ಕುರಿತು ಮಾರ್ಗ ಸೂಚಿ, ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಜುಲೈನಲ್ಲಿ ಹರಿಸಬೇಕಿರುವ ನೀರು ಪ್ರಮಾಣದ ಕುರಿತು ಹಾಗೂ ಗೃಹ ಬಳಕೆ ಮತ್ತು ಕೈಗಾರಿಕಾ ಬಳಕೆ ನೀರಿನ ಪ್ರಮಾಣದ ಮಾಹಿತಿ ಸಂಗ್ರಹ, ಜಲಾಶಯಗಳಿಂದ ನಾಲೆಗಳಿಗೆ ಎಷ್ಟು ನೀರು ಬಿಡಬೇಕು. ಪ್ರಾಧಿಕಾರ ರಚನೆಯಲ್ಲಿನ ಲೋಪ ಮತ್ತಿತರ ವಿಷಯಗಳು ಸಭೆಯಲ್ಲಿ ವ್ಯಕ್ತವಾಗಿವೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಉತ್ತಮ ಮಳೆಯಾಗುತ್ತಿರುವ ಕಾರಣ ಜುಲೈ ತಿಂಗಳ ಕೋಟಾದ ಅಡಿ 34 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಬಿಡಬೇಕು ಈಗಾಗಲೇ ತಮಿಳುನಾಡಿಗೆ ಹರಿಸಿರುವ ನೀರು ಕಳೆದು ಉಳಿದ ನೀರನ್ನು ರಾಜ್ಯ ಬಿಡಬೇಕಾಗಲಿದೆ ಅಂದಾಜು 31.24 ಟಿಎಂಸಿ ನೀರು ಬಿಡಬೇಕು ಎನ್ನುವ ಮಾಹಿತಿ ತಿಳಿದುಬಂದಿದೆ.

- Call for authors -

LEAVE A REPLY

Please enter your comment!
Please enter your name here