ಬೆಂಗಳೂರು: ಎಚ್ ಎ ಎಲ್ ಆವರಣದೊಳಗೆ ಅನುಮಾಸ್ಪದ ರೀತಿಯಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು, ಸ್ಪೋಟದಿಂದ ಒಂದು ಕಿ.ಮೀ ವರೆಗೂ ಭೂಮಿ ಕಂಪಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಇಂದು ಸಂಜೆ ೪:೩೦ ರ ಸುಮಾರಿಗೆ ಶಾಸ್ತ್ರಿ ನಗರದಲ್ಲಿರುವ ಎಚ್ ಎ ಎಲ್ ಆವರಣದೊಳಗೆ ಘಟನೆ ನಡೆದಿದೆ. ಜಿಲೆಟಿನ್ ಮದ್ದು ಬಳಸಿ ಸ್ಪೋಟಿಸಲಾಗಿದ್ದು, ಸ್ಪೋಟದಿಂದ ಒಂದು ಕಿ.ಮೀ ವರೆಗೂ ಭೂಮಿ ಕಂಪಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಹೆಚ್ ಎಎಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿರ್ಮಾಣ ಹಂತದ ಕಟ್ಟಡದ ಬಳಿ ಸ್ಪೋಟ ಸಂಭವಿಸಿದ್ದು, ಎರಡು ವರ್ಷದ ಹಿಂದೆ ಬಂಡೆ ಸೀಳಲು ಜಿಲೆಟಿನ್ ತಂದಿದ್ರು, ಅದರಲ್ಲಿ ಒಂದು ಜಿಲೆಟಿನ್ ಉಳಿದಿರುತ್ತೆ. ಆ ಕಸವನ್ನು ಸೆಕ್ಯೂರಿಟಿ ಗಾರ್ಡ್ ಕಸದ ಜಾಗಕ್ಕೆ ಎಸೆದು ಬೆಂಕಿ ಇಟ್ಟಿರಬಹುದು. ಹೀಗಾಗಿ ಅದು ಬ್ಲಾಸ್ಟ್ ಆಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ. ಸದ್ಯ ಈ ಕುರಿತು ಪ್ರಕರಣ ಹೆಚ್ ಎಲ್ ಠಾಣೆಯಲ್ಲಿ ದಾಖಲಾಗಿದ್ದು ತನಿಖೆ ಮಾಡಲಾಗುತ್ತಿದೆ ಎಂದು ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹಮದ್ ಮಾಹಿತಿ ನೀಡಿದ್ದಾರೆ.









