ಪ್ಲಾಸ್ಟಿಕ್ ಅಕ್ಕಿ ಆಯ್ತು ಈಗ ರಬ್ಬರ್ ಅಕ್ಕಿ ಕಾಟ: ಮಂಡ್ಯ ಜನ ಕಂಗಾಲು

0
144

ಮಂಡ್ಯ:ಪ್ಲಾಸ್ಟಿಕ್ ಅಕ್ಕಿ ಆಯ್ತು ಇದೀಗ ರಬ್ಬರ್ ಅಕ್ಕಿಯ ಕಾಟ ಆರಂಭಗೊಂಡಿದೆ. ಮಂಡ್ಯ ಜಿಲ್ಲೆಯಲ್ಲಿ ರಬ್ಬರ್ ಅಕ್ಕಿಯ ಭೀತಿ ಶುರುವಾಗಿದ್ದು ಜನ ಕಂಗಾಲಾಗಿದ್ದಾರೆ.

ರಬ್ಬರ್ ರೀತಿಯಲ್ಲಿ ಧಗಧಗನೆ ಹೊತ್ತಿ ಉರಿಯತ್ತಿರೋ ಅನ್ನಭಾಗ್ಯದ ಅಕ್ಕಿ ಗ್ರಾಮಸ್ತರಲ್ಲಿ ಆತಂಕ ಸೃಷ್ಠಿಸಿದೆ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ರಬ್ಬರ್ ಅಕ್ಕಿ ಪತ್ತೆಯಾಗಿದೆ.ಗ್ರಾಮದ ಪಡಿತರ ಅಂಗಡಿಯಿಂದ ಕೊಡಲಾಗಿದ್ದ ಅನ್ನಭಾಗ್ಯದ ಅಕ್ಕಿಯನ್ನು ನೀರಿನಲ್ಲಿ ನೆನೆಸಿಟ್ಟ ಅಕ್ಕಿಯನ್ನು ರುಬ್ಬಿದಾಗ ರಬ್ಬರ್ ರೀತಿಯ ತುಣುಕುಗಳಾಗಿ ಮಾರ್ಪಾಟಾಗಿ ಆತಂಕಕ್ಕೆ ಕಾರಣವಾಗಿದೆ.

ಜೂನ್ ತಿಂಗಳಿನಲ್ಲಿ ಪಡಿತರ ಅಂಗಡಿಯಲ್ಲಿ ವಿತರಿಸಲಾಗಿರೋ ಅನ್ನಭಾಗ್ಯದ ಅಕ್ಕಿ ರಬ್ಬರ್ ರೀತಿ ಹೊತ್ತಿ ಉರಿಯುತ್ತಿರೋ ಕಂಡು‌ ಗ್ರಾಮಸ್ಥರಲ್ಲಿ ಆತಂಕ ಸೃಷಿಯಾಗಿದೆ.ಪಡಿತರ ಅಂಗಡಿಯಲ್ಲಿ ರಬ್ಬರ್ ಅಕ್ಕಿ ವಿತರಿಸಲಾಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು,ರಬ್ಬರ್ ಅಕ್ಕಿ ವಿತರಿಸಿದ ಸರ್ಕಾರದ ಕ್ರಮಕ್ಕೆ ಚೊಟ್ಟನಹಳ್ಳಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆದರೆ ವಾಸ್ತವವಾಗಿ ಈ ಅಕ್ಕಿ ಏಕೆ ರಬ್ಬರ್ ರೀತಿ ಆಗಿದೆ ಅಥವಾ ರಬ್ಬರ್ ರೀತಿಯ ಸ್ಥಿತಿಗೆ ಮಾರ್ಪಾಡಿಗೆ ಕಾರಣವೇನು ಎನ್ನುವುದು ನಿಗೂಢವಾಗಿದ್ದು ಆಹಾರ ಇಲಾಖೆ ಈ ಸಂಬಂಧ ತನಿಖೆ ನಡೆಸಿ ಸ್ಪಷ್ಟೀಕರಣ ನೀಡಬೇಕಿದೆ.

- Call for authors -

LEAVE A REPLY

Please enter your comment!
Please enter your name here