ಫೋಟೋ ಕೃಪೆ: ಟ್ವಿಟ್ಟರ್
ಮುಂಬೈ:ಇರ್ಫಾನ್ ಖಾನ್ ನಂತರ ಬಾಲಿವುಡ್ನ ಮತ್ತೊಬ್ಬ ಸೆಲಬ್ರಟಿಗೆ ಕ್ಯಾನ್ಸರ್ ಅಟ್ಯಾಕ್ ಆಗಿದೆ. ಪ್ರಖ್ಯಾತ ಬಹುಭಾಷಾ ನಟಿ ಸೊನಾಲಿ ಬೇಂದ್ರೆ ಅವ್ರಲ್ಲಿ ಕ್ಯಾನ್ಸರ್ ರೋಗ ಕಾಣಿಸಿಕೊಂಡಿದೆ.
ನ್ಯೂಯಾರ್ಕ್ನಲ್ಲಿ ತಾನು ಕ್ಯಾನ್ಸರ್ ಚಿಕಿತ್ಸೆ ಪಡೆದುಕೊಳ್ತಿರೋದಾಗಿ ಸ್ವತಃ ಸೊನಾಲಿ ಬೇಂದ್ರ ಪ್ರಕಟಣೆ ಹೊರಡಿಸಿದ್ದಾರೆ. ಕಳೆದ ತಿಂಗಳಷ್ಟೇ ಹಿಂದುಜಾ ಸರ್ಜಿಕಲ್ ಹೆಲ್ತ್ಕೇರ್ ಆಸ್ಪತ್ರೆಗೆ ಸೊನಾಲಿ ದಾಖಲಾಗಿದ್ದರು. ಆನಂತ್ರ ಇದೀಗ ನ್ಯೂಯಾರ್ಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ತಾನು ಹೈಗ್ರೇಡ್ ಕ್ಯಾನ್ಸರ್ನಿಂದ ಬಳಲುತ್ತಿದ್ದೇನೆ. ನನ್ನ ಪೋಷಕರು ಮತ್ತು ಆಪ್ತ ಸ್ನೇಹಿತರು ನನಗೆ ಸಹಕಾರ ನೀಡ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.









