ಬೆಂಗಳೂರು:ಬಜೆಟ್ ಅರ್ಥವಾಗದವರಿಗೆ ಏನು ಹೇಳಿ ಏನು ಪ್ರಯೋಜನ ಎಂದು ಬಿಜೆಪಿ ಟೀಕೆಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು.
ವಿಧಾನಸೌಧದ ಕೆಂಗಲ್ ಗೇಟ್ ಬಳಿ ಬಾಬು ಜಗಜೀವನರಾಂ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಗಜೀವನ್ ರಾಂ ಅವರ 32 ನೇ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಸಿಎಂ ಚಾಲನೆ ನೀಡಿದ್ರು. ನಂತ್ರ ಮಾತನಾಡಿದ ಸಿಎಂ ಎಚ್ಡಿಕೆ, ಎಲ್ಲಾ ವರ್ಗ,ಪ್ರವೇಶವನ್ನು ಗಮನದಲ್ಲಿಟ್ಟುಕೊಂಡ ಮಂಡಿಸಿದ ಸಮಗ್ರ ಬಜೆಟ್ ಉದು,ಆದ್ರೆ ಇದರ ಅರ್ಥವಾಗದೆ ಬಿಜೆಪಿಯವರು ವಿರೋಧ ಮಾಡ್ತಾ ಇದ್ದಾರೆ, ಚರ್ಚೆಗೆ ಬಂದಾಗ ಅವರಿಗೆ ಉತ್ತರ ನೀಡುತ್ತೇನೆ ಎಂದರು.
ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದಾಗ ಬಿಜೆಪಿಯವರಿಗೆ ಕಾಣಿಸಲಿಲ್ಲ,ಈಗ ನಾವು ಹೆಚ್ಚಿಸಿದ್ದು ಮಾತ್ರ ಕಂಡಿದೆ.ಬಜೆಟ್ನಲ್ಲಿ ಕರಾವಳಿ ಜಿಲ್ಲೆಗಳ ಕಡೆಗಣನೆ ಆರೋಪದ ಹಿನ್ನೆಲೆಯಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಬಿಜೆಪಿ ಶಾಸಕರ ಪ್ರತಿಭಟನೆ ಮಾಡಿದ್ರು, ಅರ್ಥವಾಗದವರಿಗೆ ಏನು ಹೇಳಲು ಆಗುತ್ತೆ ಎಂದು ಟೀಕಿಸಿದ್ರು.
ಸಿದ್ದರಾಮಯ್ಯನವರ ಬಜೆಟ್ನ ಮುಂದುವರಿದ ಭಾಗ ಇದು. ಹಿಂದೆ ಬಜೆಟ್ನಲ್ಲಿ ಮೀನುಗಾರರ ಸಮಸ್ಯೆಗೆ 150 ಕೋಟಿ ಮೀಸಲಿಟ್ಟಿದ್ದರು. ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಕ್ಲಸ್ಟರ್ ನಿರ್ಮಾಣಕ್ಕೆ ಹಣ ಮೀಸಲಾಗಿದೆ. ಸಮಗ್ರ ಕರ್ನಾಟಕ ದೃಷ್ಟಿಯಲ್ಲಿಟ್ಟುಕೊಂಡು ಬಜೆಟ್ ಮಂಡನೆ ಮಾಡಲಾಗಿದೆ. ಇದು ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತವಾದ ಬಜೆಟ್ ಅಲ್ಲ. ಇದು ಅವರಿಗೆ ಅರ್ಥವಾಗಲ್ಲ ಎಂದರೆ ಏನು ಮಾಡಲು ಆಗುತ್ತೆ. ಸದನದಲ್ಲಿ ಚರ್ಚೆ ನಡೆಸಲಿ, ಅವರಿಗೆ ಉತ್ತರ ಕೊಡುತ್ತೇನೆ ಎಂದರು.









