ಬೆಂಗಳೂರು:ದೇವೇಗೌಡ್ರ ಜಾತಕ ಮತ್ತು ರೇವಣ್ಣರ ಜಾತಕ ಒಟ್ಟಿಗೆ ಕೂಡಿದೆ.ಆದ್ರೆ ಕುಮಾರಸ್ವಾಮಿ ಜಾತಕನೇ ಬೇರೆ. ಅದೊಂದು ಬೇರೆ ಜಾತಕ.ಹೀಗಾಗಿಯೇ ದೇವೇಗೌಡ್ರ ಜಾತಕದ ಜೊತೆಗೆ ರೇವಣ್ಣರ ಜಾತಕ ಕೂಡಿದೆ ಎಂದು ಸದನದಲ್ಲಿ ಜಾತಕ ಪುರಾಣದ ಕುರಿತು ಸ್ವಾರಸ್ಯಕರ ಚರ್ಚೆ ನಡೆಯಿತು.
ವಿಧಾನಸಭೆ ಕಲಾಪದ ವೇಳೆ ಸದನದಲ್ಲಿ ಜಾತಕ ವಿಚಾರವನ್ನು ಬಸವರಾಜ ಬೊಮ್ಮಾಯಿ ಪ್ರಸ್ತಾಪಿಸಿದರು.ಮಾನ್ಯ ಸಭಾಧ್ಯಕ್ಷರೇ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ್ರು ಜಾತಕ ತುಂಬಾ ನಂಬ್ತಾರೆ.ಎಲ್ಲದಕ್ಕೂ ಜಾತಕವೇ ಮುಖ್ಯ ಅಂತಾರೆ.ಒಂದು ಸಾರಿ ನನಗೆ ದೇವೇಗೌಡ್ರು ಹೇಳಿದ್ರು. ನಿನಗೆ ಜಾತಕದ ಬಗ್ಗೆ ಗೊತ್ತಿಲ್ಲ. ನಿಮ್ಮ ಅಪ್ಪನಿಗೆ ಜಾತಕದ ಬಗ್ಗೆ ಗೊತ್ತಿಲ್ಲ ಸುಮ್ಮನಿರು ಅಂದಿದ್ರು.ದೇವೇಗೌಡ್ರ ಜಾತಕ ಮತ್ತು ರೇವಣ್ಣರ ಜಾತಕ ಒಟ್ಟಿಗೆ ಕೂಡಿದೆ.ಆದ್ರೆ ಕುಮಾರಸ್ವಾಮಿ ಜಾತಕನೇ ಬೇರೆ. ಅದೊಂದು ಬೇರೆ ಜಾತಕ.ಹೀಗಾಗಿಯೇ ದೇವೇಗೌಡ್ರ ಜಾತಕದ ಜೊತೆಗೆ ರೇವಣ್ಣರ ಜಾತಕ ಕೂಡಿದೆ.ಈಗ ಮತ್ತೊಂದು ವಿಚಾರ ಅಂದ್ರೆ, ಸಿದ್ಧರಾಮಯ್ಯರ ಜಾತಕ ಕೂಡ ದೇವೇಗೌಡರ ಜಾತಕದ ಜೊತೆಗೆ ಕೂಡಿತ್ತು ಅಂದುಕೊಂಡಿದ್ದೆ.ಬಳಿಕ ಸಿದ್ಧರಾಮಯ್ಯ ಪಕ್ಷದಿಂದ ಹೊರಗೆ ಬಂದಾಗ ಅಂದುಕೊಂಡೆ, ಏನಪ್ಪಾ ಜಾತಕ ಕೈ ಕೊಡ್ತಾಲ್ಲ ಅಂತಾ.ಈಗ ಮತ್ತೆ ಅದು ಸಾಬೀತಾಗಿದೆ.ಸಿದ್ಧರಾಮಯ್ಯ ಮತ್ತು ದೇವೇಗೌಡರ ಜಾತಕವು ಒಂದೇ ಎಂದು ಸಿದ್ದರಾಮಯ್ಯ ಅವರ ಕಾಲೆಳೆದರು.
ಬಸವರಾಜ ಬೊಮ್ಮಾಯಿ ಮಾತಿನ ಮಧ್ಯೆ ಪ್ರವೇಶಿಸಿದ ಚಿಕ್ಕಮಗಳೂರು ಕ್ಷೇತ್ರದ ಬಿಜೆಪಿ ಶಾಸಕ ಸಿ.ಟಿ ರವಿ
ಬೊಮ್ಮಾಯಿ ಮಾತಿನ ಮಧ್ಯೆ ಡಿ.ಕೆ.ಶಿವಕುಮಾರ್ ಹೆಸರು ಎಳೆದು ತಂದ್ರು.ಅಲ್ಲಾ, ಬಸವರಾಜ ಬೊಮ್ಮಾಯಿ ಅವರೇ, ಒಂದೇ ಬೋನಿನಲ್ಲಿ ಎರಡು ಹುಲಿಗಳು ಇರಲು ಸಾಧ್ಯವೇ? ಈ ಎರಡು ಮದಗಜಗಳು ಒಂದೇ ಕಡೆ ಇರೋದು ಹೇಗೆ? ಎಂಬುದನ್ನು ಸ್ವಲ್ಪ ತಿಳಿಸಿ ಎಂದರು.
ಈ ವೇಳೆ ಅಕ್ಕಪಕ್ಕ ಕುಳಿತಿದ್ದ ಎಚ್.ಡಿ ಕುಮಾರಸ್ವಾಮಿ ಹಾಗು ಡಿ.ಕೆ.ಶಿವಕುಮಾರ್ ಸಿಟಿ.ರವಿ ಮಾತಿಗೆ ನಕ್ಕು ಸುಮ್ಮನಾದ್ರು. ಮತ್ತೆ ಮಾತು ಆರಂಭಿಸಿದ ಬಸವರಾಜ ಬೊಮ್ಮಾಯಿ ರವಿ ಸುಮ್ಮನಿರಪ್ಪಾ. ಡಿ.ಕೆ.ಶಿವಕುಮಾರ್ ದು ದೊಡ್ಡ ಜಾತಕದ ವಿಚಾರವಿದೆ. ತಮಿಳುನಾಡಿನ ಬಾಲಾಜಿಯಿಂದ ಹಿಡಿದು ತುಮಕೂರಿನ ನೊಣವಿನಕೆರೆಯವರೆಗೂ ಇದೆ.ಅಂದು ಬಾಲಾಜಿ, ಇಂದು ನೊಣವಿನಕೆರೆ ಎಂದು ಜಾತಕ ಪುರಾಣಕ್ಕೆ ವಿರಾಮ ಹಾಡಿದ್ರು.









