ಬೆಂಗಳೂರು: ನಿಫಾ ವೈರಸ್ ಭೀತಿಗೆ ಸಿಲುಕಿ ಬೆಲೆ ಕಳದುಕೊಂಡ ಮಾವು ಬೆಳೆಗೆ ಇದೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ.ಪ್ರತಿ ಟನ್ ಮನವಿಗೆ 2500 ರೂ.ಗೆ ಖರೀದಿಸಲು ಸೂಚನೆ ನೀಡಿದೆ.
ವಿಧಾನಸಭೆಯ ಆರನೇ ದಿನದ ಕಲಾಪದಲ್ಲಿ ಮಾವಿನ ಘಮಲು ಪಸರಿಸಿತು. ಮಾವಿನ ಬೆಲೆ ಕುಸಿತದಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ವಿಷಯ ಪ್ರಸ್ತಾಪವಾಯಿತು. ನಿಫಾ ವೈರಸ್ ವದಂತಿ ಹಿನ್ನೆಲೆಯಲ್ಲಿ ಮಾವು ಬೆಳೆಯನ್ನು ರೈತರು ರಸ್ತೆಗೆ ಸುರಿಯುತ್ತಿರುವ ಬಗ್ಗೆ ಕೃಷಿ ಸಚಿವ ಶಿವಶಂಕರರೆಡ್ಡಿ ಉಲ್ಲೇಖಿಸಿದರು.ಹೊರ ರಾಜ್ಯದಲ್ಲಿನ ಸಂಸ್ಕರಣಾ ಘಟಕಗಳಲ್ಲೂ ಸಹ ರಾಜ್ಯ ಮಾವನ್ಮು ನಿಷೇಧಿಸಲಾಗಿದೆ ಎನ್ನುವ ಮಾಹಿತಿ ನೀಡಿದರು.
ಈ ವೇಳೆ ಸದನದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಹಾರಾಷ್ಟ್ರದಲ್ಲಿನ ಮಾವು ಸಂಸ್ಕರಣಾ ಘಟಕಕ್ಕೆ ಮಾವು ಸರಬರಾಜು ಮಾಡಲು ಪ್ರಯತ್ನಿಸಿದೆ.ಆದರೆ ಮಹಾರಾಷ್ಟ್ರದಲ್ಲೂ ಹೆಚ್ಚಿನ ಬೆಳೆ ಬಂದಿದೆ.ಆಂಧ್ರ ಪ್ರದೇಶ ಸಿಎಂ ಜತೆ ಮಾತನಾಡಲು ಪ್ರಯತ್ನಿಸಿದೆ ಅವರು ವಿದೇಶ ಪ್ರವಾಸದಲ್ಲಿದ್ದಾರೆ.ಅಮೇರಿಕಾದಲ್ಲೂ ಬೆಳೆ ಇಳುವರಿ ಹೆಚ್ಚಾಗಿದೆ.ಪ್ರತಿಬಾರಿ ಕೋಲಾರ ಶ್ರೀನಿವಾಸಪುರದಿಂದ ಚಿತ್ತೂರಿಗೆ ಮಾವು ರವಾನೆಯಾಗುತ್ತಿತ್ತು.ಆದರೆ ಈ ಬಾರಿ ಅಲ್ಲಿಯೇ ಹೆಚ್ಚು ಬೆಳೆ ಬಂದ ಕಾರಣ ಚಿತ್ತೂರಿಗೆ ರಾಜ್ಯದ ಮಾವು ತರಿಸುವುದನ್ನು ಸ್ಥಗಿತಮಾಡಿದೆ ಎನ್ನುವ ಮಾಹಿತಿ ನೀಡಿದರು.
ಆದರೂ ರೈತರಿಗೆ ಸಾಂತ್ವನ ಹೇಳಲು ಸರ್ಕಾರವೇ ಮಾರುಕಟ್ಟೆ ಪ್ರವೇಶಿಸಿ ಬೆಂಬಲ ಬೆಲೆ ಕೊಟ್ಟು ಮಾವು ಖರೀದಿಗೆ ಆದೇಶಿಸಲಾಗಿದೆ.ಪ್ರತಿ ಟನ್ ಗ 2500 ರೂ.ಬೆಲೆ ಘೋಷಿಸಿದ್ದು ಇದರಿಂದ ಸರ್ಕಾರಕ್ಕೆ 15-20ಕೋಟಿ ಹೆಚ್ಚಿನಹೊರೆಯಾಗುತ್ತದೆ.ವಿಧಾನಸಭೆ ಕಲಾಪ ಮುಗಿದ ಬಳಿಕ ರಾಜ್ಯದಲ್ಲಿ ಮಾವು ಸಂಸ್ಕರಣ ಘಟಕಗಳ ಸಂಖ್ಯೆ ಹೆಚ್ಚಿಸಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ವೇಳ ಸರ್ಕಾರದ ತ್ವರಿತ ಸ್ಪಂಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್ ಕುಮಾರ್, ಎಪಿಎಂಸಿ ಮೂಲಕ ಪ್ರಮಾಣಪತ್ರ ಪಡೆದ ಬಳಿಕವೇ ಮಾವು ಖರೀದಿಗೆ ಸೂಚನೆ ಕೊಡಿ.ಇಲ್ಲವಾದರೆ ದುರುಪಯೋಗ ಹೆಚ್ಚಾಗುತ್ತದೆ ಎಂದು ಸಲಹೆ ನೀಡಿದರು.









