ಬೆಂಗಳೂರು: 2006ರ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ದಿನಗಳ ಬಗ್ಗೆ ಇಂದು ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ ನಡೆಯಿತು. ಒಬ್ಬರು ಧರಂಸಿಂಗ್ ಬೆನ್ನಿಗೆ ನೀವು ಚೂರಿ ಹಾಕಿದ್ರಿ ಅಂದ್ರೆ ಇನ್ನೊಬ್ಬರು ಅದಕ್ಕೆ ನೀವು ಕಾರಣ ಅಂದ್ರು ಹಾಗಾದ್ರೆ ವಿಧಾನಸಭೆಯಲ್ಲಿ ಇವತ್ತು ಏನ್ ನಡೀತು ತಿಳ್ಕೊಬೇಕಾ ಹಾಗಾದ್ರೆ ಈ ಸ್ಟೋರಿ ಓದಿ!
ವಿಧಾನಸಭೆಯಲ್ಲಿ ಸಿಎಂ ಕುಮಾರಸ್ವಾಮಿ ಮತ್ತು ವಿರೋಧ ಪಕ್ಷದ ನಾಯಕ ಬಿಎಸ್ ಯಡಿಯೂರಪ್ಪ ನಡುವೆ 2006 ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರದ ಕುರಿತು ವಾಗ್ಯುದ್ದವೇ ನಡೆಯಿತು. ನೀವು ಧರ್ಮಸಿಂಗ್ ಅವರಿಗೆ ನಂಬಿಕೆ ದ್ರೋಹ ಮಾಡಿದ್ರಿ, ಅವರ ಬೆನ್ನಿಗೆ ಚೂರಿ ಹಾಕಿ ನಮ್ಮ ಜತೆ ಕೈ ಜೋಡಿಸಿದ್ರಿ. ಅದೇ ಅವರ ಸಾವಿಗೆ ಕಾರಣವಾಯ್ತು ಎಂದು ಯಡಿಯೂರಪ್ಪ ಆರೋಪಿಸಿದರು. ಇದಕ್ಕೆ ಜೆಡಿಎಸ್ ಕಾಂಗ್ರೆಸ್ ಶಾಸಕರ ವಿರೋಧ ವ್ಯಕ್ತಪಡಿಸಿ ಸದನದಲ್ಲಿ ಗದ್ದಲ ಎಬ್ಬಿಸಿದರು.
ಸದನದಲ್ಲಿ ಬಿಎಸ್ವೈ ಮಾಡಿದ ಆರೋಪವನ್ನು ಒಪ್ಪದ ಸ್ಪೀಕರ್ ರಮೇಶ್ ಕುಮಾರ್, ಧರ್ಮಸಿಂಗ್ ಸ್ವರ್ಗಸ್ತರಾಗಿರೋದು ಇತ್ತೀಚೆಗೆ ಬಿಜೆಪಿ ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆದಮೇಲೂ ಧರ್ಮಸಿಂಗ್ ಬದುಕಿದ್ದರು ಎಂದು ಹೇಳಿದರು.
ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಕುಮಾರಸ್ವಾಮಿ, ನಾನು ಧರ್ಮಸಿಂಗ್ ಬೆನ್ನಿಗೆ ಚೂರಿ ಹಾಕಿದ್ದಿದ್ರೆ ಅದ್ರಲ್ಲಿ ನೀವೂ ಸಹಾ ಪಾಲುದಾರರೇ. ಇಷ್ಟು ಸಣ್ಣತನದ ಹೇಳಿಕೆ ಯಡಿಯುರಪ್ಪನವರಿಗೆ ಶೋಭೆ ತರಲ್ಲ. ನಾನು ಸಿಎಂ ಆಗ್ತೀನಿ ಅಂತ ಯಡಿಯೂರಪ್ಪ ಮನೆಗೆ ಹೋಗಿರ್ಲಿಲ್ಲ. ಅವರೇ ಬೆಂಬಲ ಕೊಡ್ತೀವಿ ಅಂತ ನಮ್ಮ ಬಳಿ ಬಂದ್ರು.
ಎಂ.ಪಿ.ಪ್ರಕಾಶ್ ಇವತ್ತು ನಮ್ಮ ಜೊತೆ ಇಲ್ಲ. ನಾನು ಮುಖ್ಯಮಂತ್ರಿಯಾಗಲು ಆಗಲೂ ಆಸೆ ಪಟ್ಟವನಲ್ಲ, ಈಗಲೂ ಆಸೆ ಪಟ್ಟವನಲ್ಲ. ಎಂ.ಪಿ.ಪ್ರಕಾಶ್ ರನ್ನು ಮುಖ್ಯಮಂತ್ರಿಯಾಗುವಂತೆ ಮನವಿ ಮಾಡಿದ್ದೆ. ಆದರೆ, ಮುಖ್ಯಮಂತ್ರಿಯಾಗಲು ಎಂ.ಪಿ.ಪ್ರಕಾಶ್ ನಿರಾಕರಿಸಿದ್ರು. ಎ..ಪಿ.ಪ್ರಕಾಶ್ ಆಶೀರ್ವಾದ ಮಾಡಿ ನೀವೇ ಮೈತ್ರಿ ಸರಕಾರ ಮುನ್ನಡೆಸು ಎಂದಿದ್ದರು ಎಂದು ಸಿಎಂ ವಿಧಾನಸಭೆಯಲ್ಲಿ ತಿಳಿಸಿದರು.
20ತಿಂಗಳಾದ ಮೇಲೆ ನನಗೆ ಮುಖ್ಯಮಂತ್ರಿ ಸ್ಥಾನ ಕೊಡದೆ ಮೋಸ ಮಾಡಿದ್ರು. ದೇವರು ದೊಡ್ಡವನು. ನಂತರ ಚುನಾವಣೆಯಲ್ಲಿ 110 ಸ್ಥಾನ ಗೆದ್ದು, ಐದು ವರ್ಷ ಆಡಳಿತ ಮಾಡಿದೆವು. ನಿಜ ಮೂರು ಮುಖ್ಯಮಂತ್ರಿ ಗಳಾದೆವು. ಆದರೆ ಆಗ ಮಾಡಿದ ಒಳ್ಳೆಯ ಆಡಳಿತದ ಪರಿಣಾಮವೇ ಈ ಬಾರಿ ಮತ್ತೆ ಜನ ನಮಗೆ 104 ಸ್ಥಾನ ಕೊಟ್ಟಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಯಡಿಯೂರಪ್ಪ ಬಿಜೆಪಿ ಆಡಳಿತದ ವೈಖರಿಯನ್ನು ಸಮರ್ಥಿಸಿಕೊಳ್ಳುತ್ತಾ ಜಿಡಿಎಸ್ ಪಕ್ಷವನ್ನು ದೂರಿದರು.









