ಬೆಂಗಳೂರು:ಸಿಲಿಕಾನ್ ಸಿಟಿಯ ಈ ಬಾರಿಯ ವೀಕೆಂಡ್ ಸ್ಪೆಷಲ್ ಆಗಿತ್ತು.ರ್ಯಾಂಪ್ ಮೇಲೆ ಬಳ್ಳಿಯಂತೆ ಬಳುಕುವ ಬೆಡಗಿಯರ ಬಿನ್ನಾಣದ ಕ್ಯಾಟ್ ವಾಕ್ ಯುವ ಸಮೂಹದ ಕಣ್ಮನ ಸೆಳೆಯಿತು.
ಯಸ್,ಯಮಹಾ ಫ್ಯಾಸಿನೋ ಮಿಸ್ ದೀವಾ2018 ಸ್ಪರ್ಧೆಯ ಬೆಂಗಳೂರು ಆಡಿಷನ್ ಪೂರ್ಣಗೊಂಡಿದ್ದು ಫೈನಲ್ ಗೆ 9 ಮಂದಿ ಆಯ್ಕೆಯಾಗಿದ್ದಾರೆ. ಅದರಲ್ಲಿ ಓರ್ವ ಸ್ಪರ್ಧಿ ಮಾತ್ರ ಚೆನ್ನೈನವರಾಗಿದ್ದು ಉಳಿದವರು ಬೆಂಗಳೂರಿನವರೇ ಎನ್ನುವುದು ವಿಶೇಷ.ಫೈನಲ್ ಗೆದ್ದ ಸ್ಪರ್ಧಿಯ ಹತ್ತು ಲಕ್ಷ ಬಹುಮಾನದೊಂದಿಗೆ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳಲಿದ್ದಾರೆ.
ಈ ಆಡಿಷನ್ಗೆ ಆಯ್ದ 80 ಸ್ಪರ್ಧಿಗಳಿಗೆ ಮಾತ್ರ ಆಹ್ವಾನಿಸಲಾಗಿತ್ತು.ರ್ಯಾಂಪ್ ವಾಕ್, ಪರ್ಫೆಕ್ಟ್ ಬಾಡಿ, ಕಮ್ಯುನಿಕೇಷನ್ ಸ್ಕಿಲ್ಸ್ ಇನ್ನೂ ಮುಂತಾದ ಸ್ಪರ್ಧೆಯ ಹಲವಾರು ಮುಖಗಳ ಹಣಾಹಣಿಯಲ್ಲಿ ವಿಭಿನ್ನ ಮಾನದಂಡಗಳ ಆಧಾರದ ಮೇಲೆ ಸ್ಪರ್ಧಿಗಳನ್ನು ತೀರ್ಮಾನಿಸಲಾಯಿತು.ಶ್ರೀನಿಧಿ ಶೆಟ್ಟಿ ಮತ್ತು ವಾಸಿಂ ಖಾನ್ ರವರೂ ಸೇರಿದಂತೆ ಬಹು ಪ್ರಮುಖ ದಿಗ್ಗಜರು ತೀರ್ಪುಗಾರರುಗಳಿಂದ ಆ ಸ್ಪರ್ಧೆಗೆ ಕಳೆಗಟ್ಟಿತ್ತು.
ಈ ಅಖಾಡದಲ್ಲಿ ಜಯಿಸಿ ಎಲ್ಲರನ್ನೂ ಸೋಲಿಸುವ ಏಕೈಕ ವಿಜೇತ ಸ್ಪರ್ಧಿಯು ಪ್ರತಿಷ್ಠಿತ ಮಿಸ್ ಯೂನಿವರ್ಸ್ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮೊದಲನೇ ರನ್ನರ್ ಅಪ್ ಸ್ಪರ್ಧಿಯು ಪ್ರತಿಷ್ಠಿತ ಮಿಸ್ ಸುಪ್ರಾ ನ್ಯಾಷನಲ್ ವೈಭವದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಮಾಜಿ ಮಿಸ್ ಯೂನಿವರ್ಸ್ ಮತ್ತು ಬಾಲಿವುಡ್ ನಟಿ ಲಾರಾದತ್ತಾ ಮೆಂಟರ್ ಆಗಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಈ ಒಂದು ಅದ್ಭುತವಾದ ಪಯಣದ ಒಂದು ಭಾಗವಾಗಲಿರುವ ದೇಶದ ಮುಂದಿನ ಯಮಾಹಾ ಫ್ಯಾಸಿನೋ ಮಿಸ್ ದೀವಾ 2018 ರವರನ್ನು ಕಾಣಲು ಬಹು ಉತ್ಸುಕಳಾಗಿದ್ದೇನೆ. ಈ ಅಗ್ರಮಾನ್ಯ ಸ್ಪರ್ಧೆಯ ಆಡಿಷನ್ಗಳು ರಾಷ್ಟ್ರವಾಪಿಯಾಗಿ 10 ನಗರಗಳಲ್ಲಿ ನಡೆಯಲಿದ್ದು, ಈ ಸ್ಪರ್ಧೆಯಲ್ಲಿ ಭಾರತೀಯ ಸೌಂದರ್ಯವನ್ನು ಪ್ರತಿನಿಧಿಸಲಿರುವ ಹಾಗೂ ಸೊಬಗು, ಆತ್ಮವಿಶ್ವಾಸ, ಸಮತೋಲನತೆ, ಗುಪ್ತಚರತೆ ಮತ್ತು ಪರಿಪೂರ್ಣ ವರ್ತನೆಗಳ ಸಂಮಿಶ್ರಣದಿಂದ ಮೇಳೈಸಿದ ಒಬ್ಬ ಪ್ರತಿಭಾನ್ವಿತ ಮಹಿಳೆಯನ್ನು ನಾವು ಆಯ್ಕೆ ಮಾಡಲಿದ್ದೇವೆ ಎಂದರು.
ಸ್ಫುರದ್ರೂಪಿಯಾದ, ಕುಶಲಮತಿ ಸ್ಪರ್ಧಾಳುಗಳನ್ನು ಮಿಸ್ ಯೂನಿವರ್ಸ್2018 ಸ್ಪರ್ಧೆಗೆ ಕರೆತರಬೇಕೆಂಬ ನಿಟ್ಟಿನಲ್ಲಿ, ಲಕ್ನೋ, ಕಲ್ಕತ್ತಾ, ಇಂದೋರ್, ಹೈದರಾಬಾದ್, ಪುಣೆ, ಅಹಮದಾಬಾದ್, ಬೆಂಗಳೂರು, ಚಂಢೀಗಡ್ ಮತ್ತು ದೆಹಲಿ ಹಾಗೂ ಅಂತಿಮವಾಗಿ ಮುಂಬೈನಂತಹ ಪ್ರಸಿದ್ಧಿಪಡೆದ ಹತ್ತು ನಗರಗಳಲ್ಲಿ ನಡೆಸಲಾಗುವುದು. ಈ ಒಂದು ಮಿಸ್ ದೀವಾ ಸ್ಪರ್ಧೆಯ ಪಯಣವು ಹೀಗೆ ನಾಲ್ಕು-ನಗರಗಳ ಪ್ರವಾಸದ ಮೂಲಕ ನಡೆಯಲಿದೆ, ಈ ವರ್ಷವೇ ಮೊಟ್ಟಮೊದಲ ಬಾರಿಗೆ ಈ ಬಗೆಯ ಸೌಂದರ್ಯ ಹಣಾಹಣಿಯ ಪಯಣವನ್ನು ಪರಿಚಯಿಸಲಾಗಿರುತ್ತದೆ. ಅನನ್ಯವಾದ ಪರಿಕಲ್ಪನೆಯ ಆಧಾರಿತವಾಗಿರುವ ಈ ಒಂದು ಸ್ಪರ್ಧೆಯಲ್ಲಿ ಕಿರೀಟವನ್ನು ಗೆಲ್ಲಲೆಂದು ಹಗಲಿರುಳು ಶ್ರಮಿಸುವ ಸ್ಪರ್ಧಾಳುಗಳನ್ನು ಕಾಣಬಹುದಾಗಿದೆ.
ಉಪ-ಸ್ಪರ್ಧೆಗಳನ್ನು ಗೋವಾ, ದೆಹಲಿ, ಚೆನ್ನೈ ಮತ್ತು ಮುಂಬೈ ನಂತಹ – ನಾಲ್ಕು ನಗರಗಳಲ್ಲಿ ಆಯೋಜಿಸಲಾಗುವುದು. ಅಂದರೆ ನಿಗದಿತ ಥೀಮ್ ಆಧಾರಿತ ಸ್ಪರ್ಧೆಯ ಸಂಜೆಗಳನ್ನು ನಡೆಸುವ ಮೂಲಕ ಸ್ಪರ್ಧಾಳುಗಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಈ ಸ್ಪರ್ಧೆಯನ್ನು ನಡೆಸಲಾಗುತ್ತದೆ.









