ಬೆಂಗಳೂರು: ಟ್ರಾಫಿಕ್ ರೂಲ್ಸ್ ಇರೋದೇ ಬ್ರೇಕ್ ಮಾಡೋಕೆ ಅನ್ನೋ ಮನೋಭಾವ ವಾಹನ ಸವಾರರಲ್ಲಿ ಹೆಚ್ಚಾಗುತ್ತಿದೆ. ಹೇರ್ ಸ್ಟೈಲ್ ಹಾಳಾಗುತ್ತೆ,ಕೂದಲು ಉದುರುತ್ತೆ ಅನ್ನೋ ಕಾರಣಕ್ಕೆ ಹೆಲ್ಮೆಟ್ ಹಾಕದೇ ದ್ವಿಚಕ್ರ ವಾಹನ ಚಲಾಯಿಸುತ್ತಾರೆ.ಇಂತವರಿಗೆ ಪಾಠ ಮಾಡಲು ಇಂದು ಪೊಲೀಸರು ಯಮನನ್ನೇ ಕರೆತಂದಿದ್ರು.
ಪೊಲೀಸ್ರು ಏನೇ ಸರ್ಕಸ್ ಮಾಡಿದ್ರೂ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರು ಮಾತ್ರ ಸಂಚಾರ ನಿಯಮ ಉಲ್ಲಂಘನೆ ಮಾಡ್ತಾನೆ ಇರ್ತಾರೆ. ವಾಹನ ಚಾಲನೆ ಮಾಡುವವರೊಂದಿಗೆ ಹಿಂಬದಿ ಸವಾರ ಕೂಡ ಹೆಲ್ಮೆಟ್ ಧರಿಸೋದು ಕಡ್ಡಾಯ ಮಾಡಿದ್ದರೂ ಕೂಡ ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗ್ತಾ ಇದೆ.
ಬಹುತೇಕ ಅಪಘಾತ ಪ್ರಕರಣಗಳಲ್ಲಿ ಬೈಕ್ ಸವಾರ ಹಾಗು ಹಿಂಬದಿ ಸವಾರರು ಹೆಲ್ಮೆಟ್ ಧರಿಸದೇ ಇರೋದೇ ಅವರ ಸಾವಿಗೆ ಕಾರಣವಾಗುತ್ತಿದೆ.ಇದನ್ನು ಗಂಭೀರವಾಗಿ ಪರಿಗಣಿಸಿದ ಸಂಚಾರಿ ಪೋಲೀಸ್ರು. ದುಬಾರಿ ಫೈನ್ ಹಾಕೋ ಬದಲು ಜಾಗೃತಿ ಮೂಡಿಸುವ ಪ್ರಯತ್ನ ನಡೆಸ್ತಿದ್ದಾರೆ.
ನಗರದ ಟೌನ್ ಹಾಲ್ ಎದುರು ಹಲಸೂರು ಗೇಟ್ ಪೊಲೀಸ್ರು ಯಮನ ವೇಷಧಾರಿ ವ್ಯಕ್ತಿಯಿಂದ ಹೆಲ್ಮೆಟ್ ಧರಿಸದೇ ಇರೋ ಸವಾರರಿಗೆ ವಾರ್ನಿಂಗ್ ಕೊಡಿಸಿದ್ರು.ಗುಲಾಬಿ ಹೂವು ಕೊಡಿಸಿ ಜಾಗೃತಿ ಮೂಡಿಸಿದ್ರು. ಬೀದಿ ನಾಟಕದ ರೀತಿಯಲ್ಲಿ ಕಿರುನಾಟಕ ಪ್ರದರ್ಶಿಸಿ ಹೆಲ್ಮೆಟ್ ಧರಿಸುವ ಅಗತ್ಯತೆ ಕುರಿತು ಮಾಹಿತಿ ನೀಡಿದ್ರು.ಪೊಲೀಸರ ಈ ಜಾಗೃತಿ ಅಭಿಯಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ರು.









