ಬೆಂಗಳೂರು: ವಿಪಿಎಲ್ ಪಡಿತರ ಕಾರ್ಡುದಾರರಿಗೆ ನೀಡುತ್ತಿದ್ದ 7 ಕೆಜಿ ಅಕ್ಕಿಯಲ್ಲಿ 2 ಕೆಜಿ ಕಡಿತ ಮಾಡಿರುವುದನ್ನು ಮರು ಪರಿಶೀಲಿಸಿ ಬಜೆಟ್ ಮೇಲಿನ ಉತ್ತರದ ವೇಳೆ 7 ಕೆಜಿ ಅಕ್ಕಿ ವಿತರಣೆಯ ಮರು ಘೋಷಣೆ ಮಾಡುವಂತೆ ಆಹಾರ ಸಚಿವ ಜಮೀರ್ ಅಹ್ಮದ್ ಸಿಎಂ ಎಚ್ಡಿಕೆಗೆ ಮನವಿ ಮಾಡಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಿರುವ ಜಮೀರ್, ಪಡಿತರ ಕಾರ್ಡುದಾರರಿಗೆ ಈವರೆಗೆ 7 ಕೆಜಿ ಅಕ್ಕಿ ವಿತರಣೆ ಮಾಡಲಾಗುತ್ತಿತ್ತು.ಆದರೆ ಈಗ ಬಜೆಟ್ ನಲ್ಲಿ ಈ ಅಕ್ಕಿ ಪ್ರಮಾಣವನ್ನು 5 ಕೆಜಿಗೆ ಇಳಿಕೆ ಮಾಡಿದೆ.ಇದು ಬಡ ಪಡಿತರ ಕಾರ್ಡುದಾರಲ್ಲಿ ಆಕ್ರೋಶ ಸೃಷ್ಠಿಸಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಯೋಜನೆಗಳನ್ನು ಮುಂದುವರೆಸಿಕೊಂಡು ಹೋಗೋ ಹೇಳಿಕೆ ಬಜೆಟ್ ನಲ್ಲಿ ನೀಡಿ ಅಕ್ಕಿ ವಿತರಣೆ ಪ್ರಮಾಣದಲ್ಲಿ ಮಾತ್ರ ಕಡಿತ ಮಾಡಿರುವುದು ಸರಿಯಲ್ಲ.ಹಾಗಾಗಿ ಬಜೆಡ್ ಮೇಲಿನ ಚರ್ಚೆಗೆ ಉತ್ತರ ನೀಡುವ ವೇಳೆ 7 ಕೆಜೆ ಅಕ್ಕಿ ವಿತರಿಸುವ ಹೇಳಿಕೆ ನೀಡಿ ಸಮ್ಮಿಶ್ರ ಸರ್ಕಾರ ಬಡವರ ಸರ್ಕಾರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.









