ಬೆಂಗಳೂರು: ಮೈತ್ರಿ ಸರ್ಕಾರದ ದ್ರೋಹದ ಕೆಲಸವನ್ನು ಜನರಿಗೆ, ರೈತರಿಗೆ ತಿಳಿಸುತ್ತೇವೆ. ಪ್ರತಿ ಜಿಲ್ಲೆಯಲ್ಲೂ ಹೋರಾಟ ಮಾಡ್ತೇವೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತಾಡಿದ ಬಿಎಸ್ವೈ,
ಬಜೆಟ್ ಮೇಲಿನ ಚರ್ಚೆ ಕುರಿತು ಎಲ್ಲರನ್ನೂ ಗೊಂದಲದಲ್ಲಿ ಸಿಲುಕಿಸಿ ಸಿಎಂ ಉತ್ತರ ಕೊಟ್ಟಿದ್ದಾರೆ.ನಾವು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಟ್ಟಿಲ್ಲ.ಕರ್ನಾಟಕದ ಇತಿಹಾಸದಲ್ಲೇ ಈ ಸಿಎಂ ಬೇಜವಬ್ದಾರಿ ಉತ್ತರ ಕೊಟ್ಟಿದ್ದಾರೆ.ಇದನ್ನು ನಾವು ಖಂಡಿಸುತ್ತೇವೆ ಎಂದ್ರು.
ಪೆಟ್ರೋಲ್ ಡೀಸೇಲ್ ದರ ಏರಿಕೆ ಮಾಡಿ ಅಕ್ಕಿಯ ವಿತರಣೆಯಲ್ಲಿ 2 ಕೆಜೆ ಕಡಿತ ಮಾಡಿದ್ದಾರೆ.ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದ ಸಾಲ 21 ಸಾವಿರ ಕೋಟಿಯಂತೆ..
ಅದನ್ನು 6,500 ಕೋಟಿಯನ್ನು ನಾಲ್ಕು ಕಂತುಗಳಲ್ಲಿ ಕಟ್ಟುತ್ತಾರಂತೆ.ಇದರಿಂದ ರೈತನ ಖಾತೆಗೆ ಸಾಲ ಜಮಾ ಆಗದೆ ತಿಳುವಳಿಕೆ ಪತ್ರ ಕೊಡಲು ಸಾಧ್ಯಾನಾ?ಸದನದಲ್ಲಿ ಸರಿಯಾಗಿ ಸ್ಪಷ್ಟನೆ ಕೊಡದೆ ಗೊಂದಲ ಮೂಡಿಸಿ ಓಡಿ ಹೋಗಿದ್ದಾರೆ. ಸಾಲ ಮನ್ನಾದಿಂದ ಅನುಕೂಲ ಆಗಬಹುದು ಎಂದು ಕೊಂಡಿದ್ದ ರೈತರಿಗೆ ಸಿಎಂ ದ್ರೋಹ ಮಾಡಿದ್ದಾರೆ ಎಂದ್ರು.
ಎಸ್ಸಿ ಎಸ್ಟಿ ಸಾಲ, ಸ್ತ್ರೀಶಕ್ತಿ ಸಾಲ, ನೇಕಾರರು, ಮೀನುಗಾರರ ಸಾಲದ ಬಗ್ಗೆ ಚಕಾರ ಎತ್ತಿಲ್ಲ.ಚುನಾವಣೆಯಲ್ಲಿ ಕೊಟ್ಟ ಸುಳ್ಳು ಭರವಸೆಗಳು ಈಡೇರಿಲ್ಲ.ಈ ಸುಳ್ಳು ಭರವಸೆ ನಂಬಿ ಜನರು 37 ಸೀಟು ಕೊಟ್ರು.ಈ ರೀತಿಯ ಸುಳ್ಳು ಭರವಸೆ ಕೊಟ್ಟಿಲ್ಲ ಅಂದಿದ್ರೆ ಅವರು 20ಸೀಟು ಗೆಲ್ತಿರಲಿಲ್ಲ ಅಧಿವೇಶನ ಮುಗಿಸಿದ ನಂತರ ಈ ಬಗ್ಗೆ ಅಂಕಿ ಅಂಶಗಳನ್ನು ಜನರ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದ್ರು.









