ನೀರಾವರಿ ಇಲಾಖೆಗಳನ್ನು ಉತ್ತರ ಕರ್ನಾಟಕಕ್ಕೆ ಶಿಫ್ಟ್ ಮಾಡಿ: ಎಸ್.ಆರ್ ಪಾಟೀಲ್

0
61

ಬೆಂಗಳೂರು:ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ‌ ನೀರಾವರಿ ಇಲಾಖೆಗಳನ್ನು ಉತ್ತರ ಕರ್ನಾಟಕ ಭಾಗಕ್ಕೆ ಶೀಪ್ಟ್ ಮಾಡಬೇಕು, ಸಮಸ್ಯೆ ಬಗೆಹರಿಯುವರೆಗೂ ಕೆಲವು ಇಲಾಖೆಗಳು ನಮ್ಮ ಭಾಗದಲ್ಲಿ ಆಡಳಿತ ನಡೆಸಲಿ ಎಂದು ಕಾಂಗ್ರೆಸ್ ಸದಸ್ಯ ಎಸ್.ಆರ್ ಪಾಟೀಲ್ ಸಲಹೆ ನೀಡಿದ್ದಾರೆ.

ಪರಿಷತ್ ಕಲಾಪದಲ್ಲಿ ಬಜೆಟ್ ಮೇಲೆ ಸಿಎಂ ಕುಮಾರಸ್ವಾಮಿ ಉತ್ತರದ ಬಳಿಕ ಕಾಂಗ್ರೆಸ್ ನ ಎಸ್.ಆರ್.ಪಾಟೀಲ್ ಮಾತನಾಡಿದ್ರು.ಉತ್ತರ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಯುವ ಸಿಎಂ ಶ್ರಮಿಸಬೇಕು.ಬೆಳಗಾವಿಯಲ್ಲಿ ಹೆಚ್ಚು ದಿನ ಅಧಿವೇಶನ ನಡೆಸಬೇಕು.ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕು.ಉತ್ತರ ಕರ್ನಾಟಕ ಭಾಗ ದಕ್ಷಿಣ ಕರ್ನಾಟಕ ಭಾಗದಷ್ಟೇ ಅಭಿವೃದ್ಧಿಯಾಗಬೇಕಿದೆ ಎಂದ್ರು.

ಸ್ವಾತಂತ್ರ ಪೂರ್ವಕ್ಕೂ ಮುನ್ನ ದಕ್ಷಿಣ ಕರ್ನಾಟಕದಲ್ಲಿ ನೀರಾವರಿ ಅಭಿವೃದ್ಧಿಯಾಗಿದೆ.ಕನ್ನಂಬಾಡಿ ಅಣೆಕಟ್ಟು ನಿರ್ಮಾಣವಾಗಿದೆ.ಆದರೆ ನಮ್ಮ‌ಭಾಗದಲ್ಲಿ ಯಾವುದೇ ಅಣೆಕಟ್ಟು ನಿರ್ಮಾಣ ಆಗಲಿಲ್ಲ.ನೀರಾವರಿ ಇಲಾಖೆಗಳನ್ನು ನಮ್ಮ ಭಾಗಕ್ಕೆ ಶೀಪ್ಟ್ ಮಾಡಿ ಸಮಸ್ಯೆ ಬಗೆಹರಿಯುವರೆಗೂ ಕೆಲವು ಇಲಾಖೆಗಳು ಉತ್ತರ ಕರ್ನಾಟಕದಲ್ಲಿ ಆಡಳಿತ ನಡೆಸಲಿ.ಈ ದಿಟ್ಟ ನಿರ್ಧಾರ ಯುವ ಸಿಎಂ ಕುಮಾರಸ್ವಾಮಿ ಕೈಗೊಳ್ಳಲಿ.ಈ ಮೂಲಕ ಇತಿಹಾಸ ಸೃಷ್ಟಿಸಲಿ.
ದಯವಿಟ್ಟು ನಮ್ಮ ಮನವಿ ಪರಿಗಣಿಸಿ ಎಂದು ಕಳಕಳಿಯವಾಗಿ ಮನವಿ ಮಾಡಿಕೊಂಡರು.

ಎಸ್.ಆರ್.ಪಾಟೀಲ್ ಮಾತಿಗೆ ಬಿಜೆಪಿಯ ಮಹಾಂತೇಶ್ ಕವಟಗಿಮಠ ಬೆಂಬಲ ನೀಡಿದ್ರು.ಕಾವೇರಿ ಸಮಸ್ಯೆ ಬಗೆಹರಿದಿದೆ.ಕೃಷ್ಣೆಯ ಸಮಸ್ಯೆಯೂ ಬಗೆಹರಿಸಿ.ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಂಡರೆ ಉತ್ತರ ಕರ್ನಾಟಕ ಅಭಿವೃದ್ಧಿಯಾಗುತ್ತೆ ಎಂದ್ರು.

- Call for authors -

LEAVE A REPLY

Please enter your comment!
Please enter your name here