ಮೋದಿಗೆ ಡಾ.ರಾಜ್ ಕಾಫಿ ಟೇಬಲ್ ನೀಡಿದ ಪುನೀತ್ ದಂಪತಿ

2
32

ಬೆಂಗಳೂರು: ವಿಧಾನಸಭಾ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿಗೆ ವರನಟ ಡಾ.ರಾಜ್ ಕುಮಾರ್ ಕುರಿತ‌ ಕಾಫಿ ಟೇಬಲ್ ಬುಕ್ ಆಫ್ ರಾಜ್ ಕುಮಾರ್ ಕೃತಿಯನ್ನು ನೀಡಲಾಯಿತು.

ನಗರದ ಹೆಚ್.ಎ.ಎಲ್ ವಿಮಾನ ನಿಲ್ದಾಣಕ್ಕೆ ಡಾ.ರಾಜ್ ಕುಮಾರ್ ಪುತ್ರ ಪುನೀತ್ ರಾಜ್ ಕುಮಾರ್ ಭೇಟಿ ನೀಡಿದರು. ದೆಹಲಿಗೆ ತೆರಳಲು ವಾಯುಸೇನೆ ವಿಮಾನ ಹತ್ತಲು ಮುಂದಾಗಿದ್ದ ಮೋದಿ ಅವರನ್ನು ಭೇಟಿಯಾಗಿ ಡಾ.ರಾಜ್ ಕುರಿತ ಕಾಫಿ ಟೇಬಲ್ ಬುಕ್ ಅನ್ನು ನೀಡಿದರು. ಈ ವೇಳೆ ಪುನೀತ್ ಗೆ ಪತ್ನಿ ಅಶ್ವಿನಿ ಸಾತ್ ನೀಡಿದರು.

 


 

ಡಾ.ರಾಜ್ ಕಾಫಿ ಟೇಬಲ್ ಬುಕ್ ಸ್ವೀಕರಿಸಿದ ಮೋದಿ ಸಂತಸ ವ್ಯಕ್ತಪಡಿಸಿದರು.

ಕನ್ನಡದ ಮೇರುನಟನ ಪುಸ್ತಕವನ್ನು ನೀಡಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ನಿರ್ಗಮಿಸಿದರು.

 

— source:

Prashanth

- Call for authors -

2 COMMENTS

LEAVE A REPLY

Please enter your comment!
Please enter your name here