ಫಿನ್ಲ್ಯಾಂಡ್: ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನ ಮಹಿಳೆಯರ 400 ಮೀಟರ್ ಓಟದಲ್ಲಿ ಸ್ವರ್ಣ ಪದಕ ಗೆಲ್ಲುವ ಮೂಲಕ ಹಿಮಾ ದಾಸ್ ಹೊಸ ಇತಿಹಾಸ ಬರೆದರು.ಐಎಎಎಫ್ ವಿಶ್ವ ಅಥ್ಲೀಟ್ ಚಾಂಪಿಯನ್ ಶಿಪ್ ನಓಟದ ಸ್ಪರ್ಧೆಯಲ್ಲಿ ಸ್ವರ್ಣಗೆದ್ದ ಮೊದಲ ಭಾರತೀಯ ಮಹಿಳೆ ಎನ್ನುವ ಕೀರ್ತಿಗೆ ಪಾತ್ರರಾದರು.
ಫಿನ್ ಲ್ಯಾಂಡ್ ನಲ್ಲಿನ ನಡೆದ ಐಎಎಎಫ್ ವಿಶ್ವ 20 ವಯೋಮಿತಿ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ಮಹಿಳೆಯರ 400 ಮೀ. ಓಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಹಿಮಾದಾಸ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶಕ್ಕೆ ಹಿರಿಮೆ ತಂದುಕೊಟ್ಟಿದ್ದಾರೆ.
ಮೊದಲ 350 ಮೀಟರ್ವರೆಗೂ 4-5ನೇ ಸ್ಥಾನದಲ್ಲಿ ಇದ್ದ ಹಿಮಾದಾಸ್ ಓಟ ಮುಕ್ತಾಯಕ್ಕೆ 50 ಮೀಟರ್ ನಲ್ಲಿ ಎಲ್ಲರನ್ನೂ ಮೀರಿ ಓಡಿ 51.46 ಸೆಕೆಂಡ್ಗಳಲ್ಲಿ 400 ಮೀಟರ್ ದೂರದ ಗುರಿಯನ್ನು ಪೂರೈಸಿದರು. ಆ ಮೂಲಕ 18 ವರ್ಷದ ಹಿಮಾ ಚಿನ್ನದ ಪದಕದ ಗರಿಮೆಯನ್ನು ಮುಡಿಗೇರಿಸಿಕೊಂಡರು.
ರೊಮೇನಿಯಾದ ಆಂಡ್ರೆಸ್ ಮಿಲ್ಕೊಸ್,52.07ಸೆ ಹಾಗೂ ಅಮೆರಿಕದ ಟೇಲರ್ ಮಾನ್ಸನ್ 52.28ಸೆ.ಗಳಲ್ಲಿ ಗುರಿ ತಲುಪಿ ನಂತರದ ಸ್ಥಾನಗಳನ್ನು ಪಡೆದುಕೊಂಡರು.
ಅಭಿನಂದನೆಗಳ ಮಹಾಪೂರ:
ಚಿನ್ನದ ಪದಕ್ಕೆಗೆದ್ದ ಹಿಮಾದಾಸ್ಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ,ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಗಣ್ಯರು, ಸಚಿನ್ ತೆಂಡೂಲ್ಕರ್ ಸರಿದಂತೆ ಕ್ರೀಡಾಕ್ಷೇತ್ರದ ಸಾಧಕರು,ಅಮಿಯ್ ಬಚ್ಚನ್ ಸೇರಿದಂತೆ ಚಿತ್ರರಂಗದ ಗಣ್ಯರು ಟ್ವೀಟ್ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿಯೂ ಲಕ್ಷಾಂತರ ಮಂದಿ ಅಭಿನಂದನಾ ಸಂದೇಶಗಳನ್ನು ಪೋಸ್ಟ್ ಮಾಡಿದ್ದಾರೆ.









