ಬೆಂಗಳೂರು:ಸೋಲೇ ಗೆಲುವಿನ ಸೋಪಾನ. ಎದೆಗುಂದಬೇಡಿ, ನಾನು ಮತ್ತೆ ಹೋರಾಟಕ್ಕೆ ಇಳಿಯುತ್ತೇನೆ. ಮೈತ್ರಿ ಸರ್ಕಾರಕ್ಕೆ ಅಪಾಯ ಬರದ ರೀತಿ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಗುಡುಗಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮುಖ್ಯಮಂತ್ರಿ, ನೂತನ ಶಾಸಕ ಮತ್ತು ಸಚಿವರಿಗೆ ಅಭಿನಂದೆ ಸಲ್ಲಿಕೆ ಮಾಡಲಾಯಿತು.ಎಚ್ಡಿಕೆ ಹಾಗೂ ಸಚಿವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,ರಾಜ್ಯದ ಜನತೆ ನಮ್ಮನ್ನು ಗುರುತಿಸಲಿಲ್ಲ.ನಾವು ನೂರಕ್ಕೂ ಹೆಚ್ಚು ಸ್ಥಾನ ಗಳಿಸುವ ಉದ್ದೇಶ ಇತ್ತು ಎಲ್ಲೋ ಒಂದು ಕಡೆ ನಮ್ಮ ಕಾರ್ಯಕರ್ತರ ದೋಷ ಇದೆ. ನಾವು ಹಿಂದೆ ಅಧಿಕಾರದಲ್ಲಿ ಇದ್ದಾಗ ಕೊಟ್ಟ ಕಾರ್ಯಕ್ರಮ ಗಳನ್ನು ಜನರಿಗೆ ತಲುಪುಸುವಲ್ಲಿ ವಿಫಲವಾಗಿದ್ದೇವೆ.ಹಾಗಾಗಿ ಈ ಫಲಿತಾಂಶ ಬರುವಂತಾಯಿತು ಎಂದರು.
ನಾವು ಕಾಂಗ್ರೆಸ್ ಅನ್ನು ಕಡೆಗಣಿಸುವಂತಿಲ್ಲ.ಅವರ ಜೊತೆ ಸೇರಿ ಸರ್ಕಾರ ಮಾಡಿದ್ದೇವೆ.ಕುಮಾರಸ್ವಾಮಿ ಮೇಲೆ ದೊಡ್ಡದಾದ ಜವಾಬ್ದಾರಿ ಇದೆ.ನೂರ ನಾಲ್ಕು ಸ್ಥಾನ ಇರುವ ವಿರೋಧ ಪಕ್ಷ ವನ್ನು ಎದುರಿಸಬೇಕಿದೆ.ಮೈತ್ರಿ ಸರ್ಕಾರ ಇದೆ ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವುದು ಕಷ್ಟ ಇದೆ.ಜನ ಕೈ ಹಿಡಿಯದಿದ್ರೂ ಪರವಾಗಿಲ್ಲ ಅಂತಾ ಕುಮಾರಸ್ವಾಮಿ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಯತ್ನಿಸಿದ್ದಾರೆ.ಮಾದ್ಯಮಗಳೂ ಅಸಹಕಾರ ತೋರುತ್ತಿವೆ.ಮಾದ್ಯಮಗಳ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ.ಮಾಧ್ಯಮಗಳು ಮಗನ ಬಗ್ಗೆ ಹೊಂದಿರುವ ಧೋರಣೆ ತಪ್ಪು ಎಂದು ಪರೋಕ್ಷವಾಗಿ ಸೂಚಿಸಿದರು.
ಅಣ್ಣತಮ್ಮಂದಿರ ಬಜೆಟ್ ಅಂದ್ರು ಅಪ್ಪಮಗನ ಬಜೆಟ್ ಅಂದ್ರು ಎನ್ನತ್ತಲೇ ಭಾವುಕರಾದ ದೇವೇಗೌಡ ಇದೆಲ್ಲದರ ಬಗ್ಗೆ ಕಾರ್ಯಕರ್ತರು ಮಾತಾಡಬೇಕು ಜನತೆಗೆ ತಿಳಿಸಬೇಕು
ಕುಮಾರಸ್ವಾಮಿ ಒಬ್ಬರೇ ಎಲ್ಲ ಜವಾಬ್ದಾರಿ ನಿಭಾಯಿಸಲು ಆಗುವುದಿಲ್ಲ ಒಂದೇ ಬಾರಿ ಎಲ್ಲಾ ಸಾಲ ಮನ್ನಾ ಮಾಡಲು ಆಗುವುದಿಲ್ಲ.ಮುಂದಿನ ದಿನಗಳಲ್ಲಿ ಎಲ್ಲ ಸಾಲ ಮನ್ನಾ ಮಾಡುತ್ತಾರೆ. ಪೆಟ್ರೋಲ್, ಡೀಸಲ್ ಬೆಲೆ ಒಂದು ರೂಪಾಯಿ ಜಾಸ್ತಿ ಮಾಡಿದ್ದಕ್ಕೆ ಎಷ್ಟು ಟೀಕೆ ಮಾಡಿದರು.ಕುಮಾರಸ್ವಾಮಿ ದಿನಕ್ಕೆ ಹದಿನೆಂಟು ಗಂಟೆ ಕೆಲಸ ಮಾಡಿದರೂ ಸಾಕಾಗುತ್ತಿಲ್ಲ ಇದರ ನಡುವೆ ಗ್ರಾಮವಾಸ್ತವ್ಯಕ್ಕೆ ಸಮಯ ಎಲ್ಲಿದೆ
ಅವರ ಆರೋಗ್ಯದ ಕಡೆ ಕೂಡಾ ಗಮನ ಕೊಡಬೇಕಿದೆ ಎಂದು ಮಗನ ಪರಿಸ್ಥಿತಿಯನ್ನು ವಿವರಿಸಿದರು.
ಚುನಾವಣಾ ಸಂದರ್ಭದಲ್ಲಿ ಕೆಲ ಕಾರ್ಯಕರ್ತರ ಮೇಲೆ ಕೇಸುಗಳು ದಾಖಲಾಗಿವೆ ರೌಡಿಶೀಟರ್ ಕೇಸ್ ಗಳನ್ನೂ ಹಾಕಿದ್ದಾರೆ ಮುಖ್ಯಮಂತ್ರಿಗಳು ಉಪ ಮುಖ್ಯಮಂತ್ರಿಗಳು ಜೊತೆ ಕೂಡಿ ಮಾತಾಡಿಕೊಂಡು ನಮ್ಮ ಕಾರ್ಯಕರ್ತರ ಮೇಲಿರೋ ಕೇಸ್ ಗಳನ್ನ ಹಿಂಪಡೆಯಬೇಕು ಎಂದು ಸಿಎಂ ಗೆ ಮನವಿ ಮಾಡಿದ ಗೌಡರು ನಮ್ಮ ಕಾರ್ಯಕರ್ತರು ಕೋರ್ಟ್ ಮೆಟ್ಟಿಲೇರಬಾರದು ಹೀಗಾಗಿ ಎಲ್ಲಾ ಕೇಸ್ ಗಳನ್ನ ಹಿಂಪಡೆಯಬೇಕೆಂದು ಎಂದರು.
ನಿಗಮ ಮಂಡಳಿಗಳಲ್ಲಿ ನಮ್ಮ ಪಕ್ಷದ ಪಾಲಿಗೆ 30-35 ಸ್ಥಾನಗಳು ಸಿಗಬಹುದು ಎಲ್ಲರಿಗೂ ನಿಗಮ ಮಂಡಲಿ ಸ್ಥಾನ ಕೊಡಲು ಆಗುವುದಿಲ್ಲ.ಮೊದಲು ಶಾಸಕರಿಗೆ ಆಧ್ಯತೆ ನೀಡಬೇಕಾಗುತ್ತದೆ.ಇದು ನಿಮ್ಮ ಪಕ್ಷ, ನಿಮಗೂ ಮುಂದೆ ಅವಕಾಶ ಸಿಗಬಹುದು ಎಂದು ಅತೃಪ್ತರಿಗೆ ವೇದಿಕೆಯಲ್ಲೇ ಉತ್ತರಿಸಿದರು.
ಸ್ತ್ರೀಶಕ್ತಿ ಗುಂಪುಗಳ ಸಾಲಮನ್ನಾ ಮಾಡಿ ಅಂತ ಪ್ರತಿಪಕ್ಷ ಬಿಜೆಪಿ ಆಗ್ರಹಿಸುತ್ತಿದೆ.ಕುಮಾರಸ್ವಾಮಿಯವರು ಸ್ತ್ರೀಶಕ್ತಿ ಗುಂಪುಗಳ ಸಾಲಮನ್ನಾ ಕೂಡಾ ಮಾಡ್ತಾರೆ.ಮಾಡಲ್ಲ ಅಂತ ಅವರು ಹೇಳಿಲ್ಲ.ಇದಕ್ಕೆಲ್ಲ ಮೂರ್ನಾಲ್ಕು ತಿಂಗಳು ಸಮಯವಾದರೂ ಬೇಡವೇ?ಬಿಜೆಪಿಯವರ ರಾಜಕೀಯ ಆಟಗಳು ನನಗೆ ಗೊತ್ತಿವೆ.ಎಲ್ಲವನ್ನೂ ಗಮನಿಸುತ್ತಿದ್ದೇನೆ ಎಂದು ತಿರುಗೇಟು ನೀಡಿದರು.









