ಮಂಡ್ಯ:ನಾಳೆ ಬೆಂಗಳೂರಿನಿಂದ ಮೈಸೂರು ಕಡೆ ಹೋಗೋ ಪ್ಲಾನ್ ಮಾಡಿದಿರಾ ಹಾಗಾದ್ರೆ ಮಂಡ್ಯ ಮಾರ್ಗವಾಗಿ ಹೋಗೋ ರೂಟ್ ಅನ್ನು ಬದಲು ಮಾಡಿಕೊಳ್ಳಿ ಇಲ್ಲಾಂದ್ರೆ ಪರದಾಡಬೇಕಾಗುತ್ತೆ.
ಸಕ್ಕರೆನಗರಿ ಮಂಡ್ಯದಲ್ಲಿ ನಾಳೆ ಸಿ.ಎಂ. ಕುಮಾರಸ್ವಾಮಿ ಕಾರ್ಯಕ್ರಮ ಹಿನ್ನೆಲೆ ಮಂಡ್ಯದ ಮೂಲಕ ಹಾದು ಹೋಗಿರೋ ರಾಷ್ಟ್ರೀಯ ಹೆದ್ದಾರಿ 275 ನಾಳೆ ಮಧ್ಯಾಹ್ನ 2ರಿಂದ ರಾತ್ರಿ 9 ರವರೆಗೆ ಬಂದ್ ಮಾಡಲಾಗುತ್ತಿದೆ.ಮೈಸೂರು ಬೆಂಗಳೂರು ಸಂಪರ್ಕ ಕಲ್ಪಿಸೋ ನಂ. 275 ರಾಷ್ಟ್ರೀಯ ಹೆದ್ದಾರಿಯಲ್ಲಿ ಮದ್ದೂರಿನಿಂದ ಶ್ರೀರಂಗಪಟ್ಟಣದವರೆಗೂ ರಸ್ತೆ ಸಂಚಾರ ನಿಷೇಧಿಸಿ ಮಂಡ್ಯ ಜಿಲ್ಲಾಧಿಕಾರಿ ಎನ್. ಮಂಜುಶ್ರೀ ಆದೇಶ ಹೊರಡಿಸಿದ್ದಾರೆ.
ಮಂಡ್ಯದಲ್ಲಿ ಸಿ.ಎಂ.ಕಾರ್ಯಕ್ರಮದಿಂದ ವಾಹನ ದಟ್ಟಣೆ ಹೆಚ್ಚಾಗಿ ಸಂಚಾರ ಅಸ್ತವ್ಯಸ್ತಗೊಳ್ಳೊ ಹಿನ್ನಲೆಯಲ್ಲಿ ನಿಷೇದ ಆದೇಶ ಹೊರಡಿಸಲಾಗಿದೆ.ಬೆಂಗಳೂರಿನಿಂದ ಮೈಸೂರಿಗೆ ತೆರಳೋ ವಾಹನಗಳಿಗೆ ಮತ್ತು ಮೈಸೂರಿನಿಂದ ಬೆಂಗಳೂರಿಗೆ ತೆರಳೋ ವಾಹನಗಳಿಗೆ ಪರ್ಯಾಯ ಮಾರ್ಗ ಸೂಚಿಸಿದ್ದು,ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳೋ ವಾಹನಗಳು ಮದ್ದೂರು ಟಿ.ಬಿ ವೃತ್ತದ ಮೂಲಕ ಮಳವಳ್ಳಿ ಮಾರ್ಗವಾಗಿ ಮೈಸೂರಿಗೆ ತೆರಳಬೇಕು,ಮೈಸೂರಿನಿಂದ ಬೆಂಗಳೂರಿಗೆ ತೆರಳೂ ವಾಹನಗಳು ಶ್ರೀರಂಗಪಟ್ಟಣದ ಕರಿಘಟ್ಟದ ಮೂಲಕ ಬನ್ನೂರು ಮಾರ್ಗವಾಗಿ ಬೆಂಗಳೂರಿಗೆ ತೆರಳಲು ಸೂಚನೆ ನೀಡಲಾಗಿದೆ.
ಮಂಡ್ಯ ನಗರದ ವಾಹನ ಸಂಚಾರ ದಟ್ಟಣೆ ನಿಯಂತ್ರಿಸಿಲು ಆರ್.ಪಿ. ರಸ್ತೆಯಲ್ಲಿ ಏಕಮುಖ ಸಂಚಾರ ರದ್ದುಗೊಳಿಸಿ ದ್ವಿಮುಖ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ









