ಬೆಂಗಳೂರು: ಬೆಂಗಳೂರಿಗೆ ವಿಮಾನದ ಮೂಲಕ ಬರುವ ಪ್ರಯಾಣಿಕರು ತಿರುಪತಿಗೆ ತೆರಳಲು ನೇರ ಬಸ್ ಸಂಪರ್ಕವನ್ನು ಕೆಎಸ್ಆರ್ಟಿಸಿ ಕಲ್ಪಿಸಿದೆ.ಪ್ರತಿದಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುಪತಿ ಮಾರ್ಗದಲ್ಲಿ ಹೊಸದಾಗಿ ಕೆಎಸ್ಆರ್ಟಿಸಿ ಫ್ಲೈಬಸ್ ಸೇವೆಯನ್ನು ಪರಿಚಯಿಸಿದೆ.
ಪ್ರತಿದಿನ ಬೆಳಗ್ಗೆ 10 ಗಂಟೆಗೆ ಕೆಂಪೇಗೌಡ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿಂದ ಹೊರಡುವ ಫ್ಲೈ ಬಸ್ ಮಧ್ಯಾಹ್ನ 3 ಗಂಟೆಗೆ ತಿರುಪತಿ ತಲುಪಲಿದೆ.ಎರಡನೇ ಬಸ್ ರಾತ್ರಿ 10 ಗಂಟೆಗೆ ಹೊರಟು ತಡರಾತ್ರಿ 03 ಗಂಟೆಗೆ ತಲುಪಲಿದೆ.ಅದೇ ರೀತಿ ರಾತ್ರಿ 9 ಗಂಟೆಗೆ ತಿರುಪತಿಯಿಂದ ಹೊರಡುವ ಫ್ಲೈ ಬಸ್ ಮಧ್ಯರಾತ್ರಿ 02 ಗಂಟೆಗೆ ಬೆಂಗಳೂರು ತಲುಪಲಿದೆ.ಎರಡನೇ ಬಸ್ ಬೆಳಗ್ಗಿನ 11 ಗಂಟೆಗೆ ಹೊರಡು ಸಂಜೆ 6 ಗಂಟೆಗೆ ಬೆಂಗಳೂರು ತಲುಪಲಿದ.
ಈಗಾಗಲೇ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೈಸೂರಿಗೆ ಏಳು ಫ್ಲೈ ಬಸ್ ಸೇವೆ ನೀಡುತ್ತಿದ್ದು ಎರಡು ಫ್ಲೈ ಬಸ್ ಸೇವೆಯನ್ನು ಮಡಿಕೇರಿಗೆ ಹಾಗು ಒಂದು ಫೈ ಬಸ್ ಕುಂದಾಪುರಕ್ಕೆ ಮತ್ತು ಒಂದು ಫ್ಲೈ ಬಸ್ ಸಾರಿಗೆಯನ್ನು ಕೊಯಮತ್ತೂರಿಗೆ ಕಾರ್ಯಾಚರಣೆ ಮಾಡಲಾಗುತ್ತಿದೆ.ಇದೀಗ ಮುಂದುವರೆದ ಭಾಗವಾಗಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತಿರುಪತಿ ಮಾರ್ಗದಲ್ಲಿ ಹೊಸದಾಗಿ ಫ್ಲೈಬಸ್ ಆರಂಭಿಸಿದೆ.









