ನವದೆಹಲಿ: ಆದಾಯ ತೆರಿಗೆ ಪಾವತಿಗೆ ಐದೇ ದಿನ ಬಾಕಿ ಇದೆ ಅಂತಾ ಚಿಂತಿಸಬೇಕಿಲ್ಲ.ಯಾಕಂದ್ರೆ ಆದಾಯ ತೆರಿಗೆ ಪಾವತಿ ಮಾಡಲು ಒಂದು ತಿಂಗಳ ಹೆಚ್ಚುವರಿ ಕಾಲಾವಕಾಶ ಕಲ್ಪಿಸಿ ಕೇಂದ್ರ ಹಣಕಾಸು ಸಚಿವಾಲಯ ಸುತ್ತೋಲೆ ಹೊರಡಿಸಿದೆ.
ಇನ್ ಕಂ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡೋಕೆ ಜುಲೈ 31 ರವರೆಗೆ ನೀಡಿದ್ದ ಕಾಲಾವಕಾಶವನ್ನು ಆಗಸ್ಟ್ 31 ರವರೆಗೆ ವಿಸ್ತರಿಸಲಾಗಿದೆ. ಕೇಂದ್ರೀಯ ನೇರ ತೆರಿಗೆ ಮಂಡಳಿ ದಿನಾಂಕ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ.ಇದರಿಂದಾಗಿ ಆದಾಯ ತೆರಿಗೆ ಪಾವತಿ ಮಾಡದ ಜನರಿಗೆ ಮತ್ತಷ್ಟು ಕಲಾವಕಾಶ ಸಿಕ್ಕಂತಾಗಿದ್ದು ದಂಡ ಕಟ್ಟುವುದರಿಂದ ಪಾರಾಗಬಹುದಾಗಿದೆ.
ಜುಲೈ 31 ರ ನಂತರ ಆದಾಯ ತೆರಿಗೆ ಪಾವತಿ ಮಾಡುವವರಿಗೆ 5 ಸಾವಿರ ರೂ.ಗಳ ದಂಡವನ್ನು ವಿಧಿಸಲಾಗುತ್ತಿತ್ತು.ಇದೀಗ ಒಂದು ತಿಂಗಳ ಹೆಚ್ಚುವರಿ ಸಮಯ ಸಿಕ್ಕಿರುವುದು ದಂಡ ಕಟ್ಟುವುದರಿಂದ ಪಾರಾಗುವಂತೆ ಮಾಡಲಿದೆ. ಅಲ್ಲದೆ ಕೊನೆಯ ದಿನ ಹತ್ತಿತವಾದಂತೆ ಸಾಕಷ್ಟು ಜನರು ಒಟ್ಟಿಗೆ ಆದಾಯ ತೆರಿಗೆ ಪಾವತಿ ಮಾಡಲು ಹೋಗುತ್ತಾರೆ.ಇದರಿಂದ ಕೆಲಸಲ ತಂತ್ರಿಕ ತೊಂದರೆಯೂ ಎದುರಾಗುತ್ತೆ.ಇದರಿಂದಲೂ ಪಾರಾಗಲು ಐಟಿ ಇಲಾಖೆ ಮತ್ತೊಂದು ಅವಕಾಶ ನೀಡಿದೆ.









