ಬೆಂಗಳೂರು: ಸರಕಾರದಲ್ಲಿ ಸಾಕಷ್ಟು ಸಮಸ್ಯೆಗಳಿರಬಹುದು. ಆದರೆ ಈ ಸರ್ಕಾರ ಎಷ್ಟು ದಿನ ಇರುತ್ತೆ ಎಂಬ ಭಾವನೆ ಬೇಡ. ಎಲ್ಲ ಅಧಿಕಾರಿಗಳಿಗೆ ಆ ಭಾವನೆ ಇದೆ ಅಂತ ಹೇಳೊಲ್ಲ. ಮಾಧ್ಯಮಗಳಲ್ಲಿ ಅಂತ ಸುದ್ದಿ ಬಿತ್ತರ ಆಗ್ತಿದೆಯಷ್ಟೇ ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳದೇ ಕೆಲಸ ಮಾಡಿ ಎಂದು ಅಧಿಕಾರಿ ವರ್ಗಕ್ಕೆ ಸಿಎಂ ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಸಿಇಓಗಳ ಸಭೆ ನಡೆಸಿ ಮಾತನಾಡಿದ ಸಿಎಂ,ಸರ್ಕಾರ ಸುಭದ್ರವಾಗಿರುತ್ತೆ, ಅದರ ಬಗ್ಗೆ ವರಿ ಮಾಡಬೇಡಿ ಸರ್ಕಾರ ಎಷ್ಟು ದಿನ ಇರುತ್ತೋ? ಸುಮ್ನೆ ಆಟ ಆಡ್ಕೊಂಡು ಹೋಗೋಣ ಅಂತಾ ಕೆಲ ಅಧಿಕಾರಿಗಳಿಗೆ ಭಾವನೆ ಇದೆ ಆ ಭಾವನೆ ಬೇಡ, ಜನಪರ ಕೆಲಸಗಳತ್ತ ಗಮನ ಕೊಡಿ ಮಾಧ್ಯಮಗಳಲ್ಲಿ ಬರೋದಕ್ಕೆ ತಲೆಕೆಡಿಸಿಕೊಳ್ಳಬೇಡಿ ನೀವು ಕೆಲಸ ಮಾಡುವ ಅಧಿಕಾರ ಸ್ಥಳ ದೇವಸ್ಥಾನ ಇದ್ದಂಗೆ ಜನರು, ಅಧಿಕಾರ ವರ್ಗದ ನಡುವೆ ಕಂದಕ ಸೃಷ್ಟಿ ಮಾಡಬೇಡಿ ಜಿಲ್ಲಾಧಿಕಾರಿಗಳು ಜಿಲ್ಲಾ ಕಚೇರಿಗಳಲ್ಲೇ ಕುಳಿತರೇ ಆಗಲ್ಲ ತಿಂಗಳಿಗೆ ಒಂದು ಬಾರಿಯಾದರೂ ತಾಲ್ಲೂಕುಗಳಿಗೆ ತೆರಳಿ ಸಭೆ ನಡೆಸಿ ಎಂದರು.
ಚುನಾವಣೆಯಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತ ಆಗಿದೆ. ನಮಗಿರುವ ಸಮಯದಲ್ಲಿ ರಾಜ್ಯ ಸರ್ಕಾರದ ಪೂರ್ಣ ಬಜೆಟ್ ಮಂಡನೆಯಾಗಿದೆ. ಈ ಸರ್ಕಾರದ ಯೋಜನೆಗಳ ಅನುಷ್ಟಾನ ಅಗತ್ಯವಿದೆ. ನಿರುದ್ಯೋಗ ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕೊಡಲು ಸಾಧ್ಯವಿಲ್ಲ ಕೌಶಲ್ಯಾಭಿವೃದ್ದಿ ಅಡಿಯಲ್ಲಿ ಜಿಲ್ಲಾಧಿಕಾರಿಗಳು ಒಂದು ಟೀಂ ಮಾಡಿಕೊಂಡು ನಿರುದ್ಯೋಗಿಗಳಿಗೆ ಕೆಲಸ ಕೊಡಿಸಬೇಕು. ಮೂವತ್ತೂ ಜಿಲ್ಲಾಧಿಕಾರಿಗಳು ಜನ ಸಂಪರ್ಕ ಕಾರ್ಯಕ್ರಮಗಳನ್ನ ಮಾಡಬೇಕು ಸರ್ಕಾರ ಕಾರ್ಯಕ್ರಮಗಳು ಫಲಾನುಭವಿಗಳಿಗೆ ತಲುಪಬೇಕ ಯಾವುದೇ ಕಾರ್ಯಕ್ರಮಗಳಲ್ಲಿ ರಾಜಕೀಯ ಇರಬಾರದು, ಪಕ್ಷಕ್ಕೆ ಸೀಮಿತವಾಗಬಾರದು ಜನರ ವರಮಾನವನ್ನ ದ್ವಿಗುಣಗೊಳಿಸಬೇಕು ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಕಾರ್ಯಕ್ರಮ ತಲುಪಬೇಕು ವಸತಿ ಶಾಲೆಗಳಲ್ಲಿ ಮಕ್ಕಳಿಗೆ ಸೌಕರ್ಯಗಳು, ಸ್ವಚ್ಚತೆ ಕಾಪಾಡುವ ಬಗ್ಗೆ ಜಿಲ್ಲಾಧಿಕಾರಿಗಳು ಸರ್ಪ್ರೈಸ್ ಪರಿಶೀಲನೆ ಮಾಡಬೇಕು. ಆರೋಗ್ಯ ಕೇಂದ್ರಗಳಿಗೂ ಭೇಟಿ ನೀಡಿ ಪರಿಶೀಲನೆ ಮಾಡಬೇಕು ನಮ್ಮಿಂದ ನಿಮಗೆ ಯಾವುದೇ ಅನಾನುಕೂಲವಾಗಲ್ಲ ನಿಮಗೆ ರಕ್ಷಣೆ ಕೊಡೋದು ನಮ್ಮ ಜವಾಬ್ದಾರಿ ಹಲವಾರು ಜಿಲ್ಲೆಗಳಲ್ಲಿ ಬರಗಾಲ ಇದೆ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ ಯಾದಗಿರಿ, ಕೊಪ್ಪಳ, ಬಾಗಲಕೋಟೆ, ಚಿತ್ರದುರ್ಗ ರೈತರಿಗೆ ಸಮಸ್ಯೆಗೊಳಗಾಗಿದ್ದಾರೆ
ನಾಲ್ಕು ಜಿಲ್ಲೆಗಳಿಗೆ ಮಾತ್ರ ಸಿಎಂ ಅಂತ ಕೆಲವು ಮಾಧ್ಯಮದವರು ಹೇಳ್ತಾರೆ ಇದು ಸಣ್ಣ ತನ, ನೀವು ದಾರಿ ತಪ್ಪಬೇಡಿ. ಉತ್ತರ ಕರ್ನಾಟಕದ ವಿರೋಧಿ ಸರಕಾರ ಉತ್ತರ ಕರ್ನಾಟಕಕ್ಕೆ ಏನೂ ಮಾಡಿಲ್ಲ ಅಂತಾರೆ ಬಂಡವಾಳ ಹೂಡಿಕೆದಾರರಿಗೆ ಮುಕ್ತವಾದ ಅವಕಾಶ ಕಲ್ಪಿಸಿಕೊಟ್ಟಿದ್ದೀವಿ, ಬಳ್ಳಾರಿ, ಯಾದಗಿರಿಗೆ ವಿಶೇಷ ಆಧ್ಯತೆ ಕೊಟ್ಟಿದ್ದೀವಿ ಅಲ್ಲೇ ಉದ್ಯೋಗ ಸೃಷ್ಠಿಗೆದಾಗಿದ್ದೇವೆ.
ಎಂಟತ್ತು ದಿನಗಳ ನಂತರ ಪ್ರತೀ ಜಿಲ್ಲೆ ಪ್ರವಾಸ ಮಾಡುತ್ತೇವೆ ಎರಡು ದಿನ ಆಯಾ ಜಿಲ್ಲೇಗಳಲ್ಲೇ ಇರ್ತೀನಿ ಅಷ್ಟರೊಳಗೆ ಜಿಲ್ಲಾಧಿಕಾರಿಗಳು ಸಮಸ್ಯೆಗಳನ್ನ ಬಗೆ ಹರಿಸಬೇಕು. ತೆರಿಗೆ ಸಂಗ್ರಹದಲ್ಲಿ ಸರಕಾರ ವಿಫಲವಾಗಿದೆ ಅಂತಾರೆ ಮಾಧ್ಯಮಗಳು ಮಿಸ್ ಗೈಡ್ ಮಾಡ್ತಿವೆ ಇಂಥ ಮಾಹಿತಿ ಮಾಧ್ಯಮದವರಿಗೆ ಯಾರು ಕೊಡ್ತಾರೋ ಗೊತ್ತಿಲ್ಲ ಹಣದ ಕೊರತೆ ನಮ್ಮ ಸರ್ಕಾರದಲ್ಲಿಲ್ಲ ಒಂದು ಸಾವಿರ ಕೋಟಿ ವೆಚ್ಚದಲ್ಲಿ ಶಾಲಾ ಕಾಲೇಜುಗಳ ಕಟ್ಟಡಗಳು, ಲ್ಯಾಬ್ ಗಳ ನಿರ್ಮಾಣ ಮಾಡ್ತಿದ್ದೇವೆ ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳುತ್ತಿದ್ದೇವೆ ನೀರಾವರಿ ಯೋಜನೆಗಳ ಜಾರಿಗೆ ತರ್ತಿದ್ದೇವೆ ಸರ್ಕಾರದಿಂದ ನಿಮಗೇನು ಸವಲತ್ತು ಬೇಕೋ ಕೊಡ್ತೀವಿ ಒಳ್ಳೆಯ ಟೀಂ ಲೀಡರ್ (ವಿಜಯ್ ಭಾಸ್ಕರ್) ನಿಮಗೆ ಸಿಕ್ಕಿದ್ದಾರೆ ಕೃಷಿ, ಕಾರ್ಮಿಕ, ತೋಟಗಾರಿಕೆ, ಕಂದಾಯ ಒಂದು ಸಾವಿರ ಕಿ.ಲೋ ಮೀಟರ್ ರಸ್ತೆಯನ್ನ ಪೂರ್ಣ ಮಾಡಬೇಕಿದೆ ಭೂಸ್ವಾಧೀನ ಇಲಾಖೆಯಲ್ಲಿ ಸ್ವಲ್ಪ ಅನಾನುಕೂಲವಾಗಿದೆ ಏನೇ ಕೊರತೆ ಇದ್ರೂ ನಮ್ಮ ಗಮನಕ್ಕೆ ತನ್ನಿ ಇಲಾಖೆಗಳಲ್ಲಿ ಅಧಿಕಾರಿಗಳ ಕೊರತೆ ಇದ್ರೆ ಸರಿಪಡಿಸೋಣ ಒಳ್ಳೆಯ ರೀತಿಯಲ್ಲಿ ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡದೇ, ಪ್ರಾಮಾಣಿಕವಾಗಿ ಕೆಲಸ ಮಾಡಿ. ವಸತಿ ಸೌಲಭ್ಯ ಕಲ್ಪಿಸಿಕೊಡುವ ದೊಡ್ಡ ಯೋಜನೆ ಹಾಕಿಕೊಂಡಿದ್ದೇವೆ ಸರ್ಕಾರಿ ಭೂಮಿ ಲಭ್ಯತೆ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಆದ್ಯತೆ ಮೇರೆಗೆ ಭೂಮಿ ಲಭ್ಯತೆ ಇದೆ. ರಸ್ತೆ, ವಿದ್ಯಾರ್ಥಿನಿಲಯ, ಆಸ್ಪತ್ರೆ, ಶಾಲಾ ಕಾಲೇಜು ನಿರ್ಮಾಣ ಮಾಡೋದಕ್ಕೆ ಆಧ್ಯತೆ ಕೊಡಬೇಕಾಗಿದೆ ಎಂದ ಸಭೆಯಲ್ಲಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು.









