ಆಪರೇಷನ್ ಕಮಲ ಯತ್ನ ಫಲಿಸಲ್ಲ: ದಿನೇಶ್ ಗುಂಡೂರಾವ್

0
50

ಬೆಂಗಳೂರು: ಮೈತ್ರಿ ಸರ್ಕಾರವನ್ನು ಬೀಳಿಸಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ಶಾಸಕರನ್ನ ಸಂರ್ಪಕ ಮಾಡಿ ಆಮಿಷ ಒಡ್ಡಿ ಅನೈತಿಕತೆಯಿಂದ ಸರ್ಕಾರ ರಚನೆ ಮಾಡಲು ವಿಫಲ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಿಜೆಪಿ ವಿರುದ್ಧ ಆಪರೇಷನ್ ಕಮಲ ಯತ್ನದ ಗಂಭೀರ ಆರೋಪ ಮಾಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಹೇಗಾದರೂ ಮಾಡಿ ಸರ್ಕಾರವನ್ನ ಬೀಳಿಸಬೇಕು ಎಂದು ಬಿಜೆಪಿ ಪ್ರಯತ್ನ ನಡೆಸುತ್ತಿದೆ. ಕಾಂಗ್ರೆಸ್ ಶಾಸಕರನ್ನ ಬಿಜೆಪಿ ನಾಯಕರು ನಿರಂತರವಾಗಿ ಸಂಪರ್ಕ ಮಾಡುತ್ತಿದ್ದಾರೆ ಎಲ್ಲ ಶಾಸಕರನ್ನ ಸಂರ್ಪಕ ಮಾಡಿ ಆಮಿಷ ನೀಡುತ್ತಿದ್ದಾರೆ ಅನೈತಿಕತೆಯಿಂದ ಸರ್ಕಾರ ರಚನೆ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದ್ರು.

ದೇವರು, ಸ್ವಾಮೀಜಿಗಳ ಕಾಲಿಗೆ ಬಿಜೆಪಿ ನಾಯಕರು ಬೀಳುತ್ತಿದ್ದಾರೆ ಹೀಗಿದ್ದರೂ ಅನೈತಿಕತೆಯ ಮಾರ್ಗದಿಂದ ಸರ್ಕಾರ ರಚನೆ ಮಾಡಲು ಪ್ರಯತ್ನ ಏಕೆ? ಬಿಜೆಪಿಗೆ ಸ್ಪಷ್ಟ ಬಹುಮತ ಇಲ್ಲ ಮೂರು ದಿನ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರು.ಬಿಜೆಪಿಗೆ ಬಹುಮತ ಇಲ್ಲ ಅನ್ಯ ಮಾರ್ಗದಲ್ಲಿ ಸರ್ಕಾರ ರಚನೆ ಮಾಡೋದು ಸರಿ ಅಲ್ಲ ಎಂದ್ರು.

ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಶಾಸಕರನ್ನ ಸಂಪರ್ಕ ಮಾಡುತ್ತಿದ್ದಾರೆ. ಯಡಿಯೂರಪ್ಪ ಜೊತೆ ಕಾಂಗ್ರೆಸ್ ಶಾಸಕರು ದೆಹಲಿಗೆ ಹೋದ್ರು ಅನ್ನೋದು ಸುಳ್ಳು. ಅವರೆಲ್ಲ ನಮ್ಮ ಕಾಂಗ್ರೆಸ್ ಕಟ್ಟಾಳುಗಳು.ನಿಮಗೆ ಯಾರು ಆ ರೀತಿಯ ಸುದ್ದಿ ಹೇಳ್ತರೋ ಗೊತ್ತಿಲ್ಲ.ಯಡಿಯೂರಪ್ಪ ಆಪರೇಷನ್ ಕಮಲ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾರೆ. ಇನ್ನಾದ್ರೂ ಸುಮ್ಮನೆ ಸರ್ಕಾರ ಬೀಳಿಸುವ ಕೆಲಸ ಮಾಡದಿರುವುದು ಒಳಿತು.ನಮ್ಮ ಶಾಸಕರು ಯಾರು ಸಹ ಪಕ್ಷ ಬಿಡಲ್ಲ ಎಂದ್ರು.

ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆ ಹೊಂದಾಣಿಕೆ ವಿಚಾರಕ್ಕೆ ಸ್ಥಳೀಯ ಮಟ್ಟದಲ್ಲಿ ವಿರೋಧ ಇದೆ.ಅದ್ರೆ ಬಿಜೆಪಿ ಯನ್ನ ದೂರ ಹಿಡಲು ಮೈತ್ರಿ ಮಾಡಿಕೊಳ್ಳಬೇಕಾಗಿದೆ. ಸ್ಥಳೀಯ ಮಟ್ಟದ ನಾಯಕರಿಗೆ ಮನವರಿಕೆ ಮಾಡಿಕೊಳ್ಳುವ ಕೆಲಸ ಮಾಡಬೇಕಿದೆ ಎಂದ್ರು.

ಬ್ಯಾಕಿಂಗ್ ಪರೀಕ್ಷೆ ಗಳನ್ನ ಸ್ಥಳೀಯ ಭಾಷೆಗೆ ಆದ್ಯತೆ ಕೊಡಬೇಕು. ಇಂಗ್ಲಿಷ್ ನಲ್ಲಿ ಪರೀಕ್ಷೆ ಬರೆಯಬೇಕಾಗಿರುವುದರಿಂದ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಬರೀ ಇಂಗ್ಲಿಷ್ ಮತ್ತು ಹಿಂದಿ ಭಾಷೆ ಬರೋರಿಗೆ ಅನುಕೂಲವಾಗುತ್ತಿದೆ. ಪರೀಕ್ಷೆ ಸ್ಥಳೀಯ ಭಾಷೆಯಲ್ಲಿ ಬರೆಯಲು ಅನುಕೂಲ ಮಾಡಿಕೊಡಿ. ಹಳೆಯ ನಿಯಮದ ರೀತಿಯಲ್ಲಿ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದ್ರು.

ರೆಫಲ್ ಡೀಲ್ ನಲ್ಲಿ ಎಚ್ ಎ ಎಲ್ ಕಂಪನಿಗೆ ಅನ್ಯಾಯವಾಗಿದೆ. ರಾಜ್ಯಕ್ಕೆ ಬರಬೇಕಿದ್ದ ಸಿಆರ್ ಪಿಎಫ್ ಕೇಂದ್ರ ಉತ್ತರ ಪ್ರದೇಶಕ್ಕೆ ಶಿಫ್ಟ್ ಆಯ್ತು. ಇದರಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ರು.

- Call for authors -

LEAVE A REPLY

Please enter your comment!
Please enter your name here