ಬೆಂಗಳೂರು: ರೈತರ ಸಾಲ ಮನ್ನಾ ಘೋಷಿಸಿದ್ರು ಆದೇಶ ಹೊರಡಿಸಿಲ್ಲ ಎಂದು ಟೀಕಿಸುತ್ತಾರೆ. ಆದರೆ ತಕ್ಷಣ ಹಣ ಕೊಡೋದಕ್ಕೆ ನಾನೇನು ದುಡ್ಡಿನಗಿಡ ಹಾಕಿದ್ದೀನಾ? ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾಡಬೇಕು. ಅದಕ್ಕೆ ಸ್ವಲ್ಪ ವಿಳಂಬವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
24ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮ ನಡೆಯಿತು. ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿಎಂ ಬಾರದ ಕಾರಣಕ್ಕೆ ಉದ್ಘಾಟನೆಯೇ ಇಲ್ಲದೆ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಕಾರ್ಯಕ್ರಮ ನಡೆಸಿತು.ಅಂತಿಮವಾಗಿ ಬೆಳಗ್ಗೆ 11:30ಕ್ಕೆ ಬರಬೇಕಿದ್ದ ಕಾರ್ಯಕ್ರಮಕ್ಕೆ ಮಧ್ಯಾಹ್ನ 2 ಗಂಟೆಗೆ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮಿಸಿದ್ರು.
ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರುತ್ತೇನೆ ಎನ್ನುತ್ತಾ ಮಾತು ಆರಂಭಿಸಿದ ಸಿಎಂ,ಬೇರೆ ಬೇರೆ ಕಾರ್ಯಕ್ರಮಗಳಿಗೆ ಹೋಗುವುದರ ಜತೆಗೆ ವೈಯಕ್ತಿಕ ಕಾರ್ಯಕ್ರಮಕ್ಕೂ ಹೋಗಲೇಬೇಕಿತ್ತು.ಇದಕ್ಕೆ ಬರಲು ಸಮಯ ಹೊಂದಾಣಿಕೆ ಕಷ್ಟವಾಗಿತ್ತು.ಸಚಿವರಿಗೆ ಹೋಗಿ ಬರಲು ತಿಳಿಸಿದ್ದೆ.ಆದರೆ ಎಲ್ಲಿ ಅಲೆಮಾರಿ ಬುಡಕಟ್ಟು ಜನರಿಗೆ ಮುಖ್ಯಮಂತ್ರಿಗಳು ಅಪಮಾನ ಮಾಡಿದ್ರು ಎಂದು ಕೆಲವರು ಪ್ರಚಾರ ಮಾಡಿ ಯಶಸ್ವಿಯಾಗುತ್ತಾರೆ ಎಂಬ ಆತಂಕದಿಂದ ನಾನೇ ಓಡಿ ಬಂದೆ ಎಂದು ಸಮಜಾಯಿಷಿ ನೀಡಿದ್ರು.
ಆದಿವಾಸಿ ಅಲಮಾರಿ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯಗಳು ಸಿಗದೇ ಇರುವುದಕ್ಕೆ ನಮ್ಮೆಲ್ಕರ ತಪ್ಪುಗಳೂ ಕಾರಣವಾಗಿವೆ. ನೀವು ನಿಖರವಾದ ಸ್ಥಳವಿಲ್ಲ,ನೆಲೆ ಇಲ್ಲ ಊರೂರು ಅಲೆಯುತ್ತೀರಿ.ನೀವು ಒಂದು ಕಡೆ ನೆಲೆಯೂರಲು ಬೇಕಾದ ಮೀಸಲಾತಿ ಸೇರಿದಂತೆ ಯಾವುದೇ ಸೌಲಭ್ಯ ಸಿಕ್ಕಿಲ್ಲ.ನಿಮಗೆ ಅನ್ಯಾಯವಾಗಿದೆ.ಮೊದಲು ಊರೂರು ಅಲೆಯುವುದನ್ನು ನಿಲ್ಲಿಸಿ, ನೀವು ಒಗ್ಗಟ್ಟಾಗಿ.ಆಗ ನಿಮಗೆ ಮೀಸಲು ಸೌಲಭ್ಯ,ಶೈಕ್ಷಣಿಕ ಸೌಲಭ್ಯ ಕೊಡಲು ನಾವು ಸಿದ್ದ.ನಿಮ್ಮ ಮಕ್ಕಳಿಗೆ ವಸತಿ ಶಾಲೆಗಳನ್ನು ತೆರೆಯಲು ನಾವು ಸಿದ್ದ.ಇದುವರಗೆ ಯಾವುದೇ ಸೌಲಭ್ಯ ಶೇ.10ರಷ್ಟೂ ನಿಮಗೆ ತಲುಪಿಲ್ಲ ಎಂದ್ರು.
ಸಾಲಮನ್ನಾ ಮಾಡಿದ್ದೇನೆ,ಇದರ ಜಾರಿ ಪ್ರಕ್ರಿಯೆಯೂ ನಡೆಯುತ್ತಿದೆ ಆದರೂ ಮಾಧ್ಯಮಗಳಲ್ಲಿ ಯಾಕೆ ನನ್ನ ವಿರುದ್ದ ಪ್ರಚಾರ ಮಾಡುತ್ತಿದ್ದಾರೋ ತಿಳಿಯದು.ಅದೇನು ಅಪ ಪ್ರಚಾರ ಮಾಡುತ್ತಾರೋ ಮಾಡಿಕೊಳ್ಳಲಿ ಎರಡು ದಿನ ಆದ್ರೆ ಜನ ಮರೆತು ಹೋಗುತ್ತಾರೆ ಎಂದ್ರು.
ಶಾದಿ ಭಾಗ್ಯ ಯೋಜನೆಗೆ ಕುಮಾರಸ್ವಾಮಿ ಅನುದಾನ ಕಡಿತ ಮಾಡಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಿಂಬಿಸಿದ್ದಾರೆ.ನನಗೆ ಅದರ ಬಗ್ಗೆ ಗೊತ್ತೇ ಇಲ್ಲ.ಸಿದ್ದರಾಮಯ್ಯ ಸರ್ಕಾರ ಘೋಷಿಸಿದ್ದ ಯಾವುದೇ ಯೋಜನೆಗೆ ಹಣಕಾಸು ಕಡಿತ ಮಾಡಿಲ್ಲ.ನಾನು ತಪ್ಪೇ ಮಾಡದೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ.ಬಡವರಿಗಾಗಿ ನಾನು ಮುಖ್ಯಮಂತ್ರಿ ಯಾಗಿದ್ದೇನೆ ಎಂದ್ರು.
ಬಡವರ ಮಕ್ಕಳಿಗೆ ಈ ರಾಜ್ಯದಲ್ಲಿ ಯಾವುದಾದರೂ ಒಂದು ಬ್ಯಾಂಕ್ ವಿದ್ಯಾಭ್ಯಾಸಕ್ಕೆ ಸಾಲ ಕೊಟ್ಟ ಉದಾಹರಣೆಗೆ ಇಲ್ಲ.
ಜನತಾದಳದ ಕಾರ್ಯಕರ್ತರಿಗೆ ವಿಧಾನಸೌಧ ಪ್ರವೇಶ ನಿಷೇಧ ಎಂದು ಟಿವಿ ಚಾನಲ್ ಒಂದು ಪ್ರಸಾರ ಮಾಡುತ್ತಿತ್ತು.ನಾನು ಯಾರನ್ನೂ ನಿಷೇಧಿಸಿಲ್ಲ.ಕೃಷ್ಣಾದಲ್ಲಾಗಲಿ,ವಿಧಾನಸೌಧಕ್ಕಾಗಲಿ ಜನ ನನ್ನ ಬಳಿಗೆ ಯಾಕೆ ಬರುತ್ತಾರೆ.ನೀವು ಅಷ್ಟೇ ನನ್ನ ಉಪಯೋಗ ಮಾಡಿಕೊಳ್ಳಿ.ನಿಮ್ಮ ಜತೆ ಮಾತನಾಡುತ್ತೇನೆ. ಒಬ್ಬ ತಂದೆಯಾಗಿ ಮಗನ ಜೀವನ ರೂಪಿಸಬೇಕಾದ ಕರ್ತವ್ಯವೂ ನಮ್ಮ ಮೇಲಿದೆ.ದಿನದ 24 ಗಂಟೆಯಲ್ಲಿ ಮಗನ ಮುಖ ನೋಡಲೂ ಆಗುತ್ತಿಲ್ಲ.ನನ್ನ ಕಷ್ಟ ನನಗೆ ಗೊತ್ತು ಎಂದ್ರು.









