ಬೆಂಗಳೂರು: ಒಬ್ಬೊಬ್ಬರಿಗೆ ಒಂದೊಂದು ಹವ್ಯಾಸ ವಿರುತ್ತದೆ.ಒಕ್ಕಲುತನದ ಹಿನ್ನೆಲೆಯ ಕುಮಾರಸ್ವಾಮಿ ಯವರು ರೈತರ ಜತೆಗೂಡಿ ನಾಟಿ ಮಾಡಿದ್ರೆ ತಪ್ಪೇನು.ನನ್ನನ್ನು ಕರೆದಿದ್ರೆ ನಾನೂ ಹೋಗುತ್ತಿದ್ದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಗದ್ದೆ ನಾಟಿ ಮಾಡಿದ್ದನ್ನು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ.
ಮಂಡ್ಯದಲ್ಲಿ ಹೆಚ್ಚಿನ ಜೆಡಿಎಸ್ ಶಾಸಕರು ಗೆದ್ದಿದ್ದಾರೆ ಹಾಗಾಗಿ ಆ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಜತೆಗೆ ಹಲವಾರು ವರ್ಷಗಳಿಂದ ಮಳೆ ಕೊರತೆಯಾಗಿದ್ದ ಪರಿಣಾಮ ಬೆಳೆ ಪದ್ದತಿ ಬದಲಾಯಿಸಿಕೊಳ್ಳುವಂತೆ,ಭತ್ತದ ಬದಲು ಬೇರೆ ಬೆಳೆ ಬೆಳೆಯುವಂತೆ ಸರ್ಕಾರವೇ ರೈತರಿಗೆ ಸೂಚಿಸಿತ್ತು.ಈಗ ಮಳೆ ಸಂವೃದ್ದವಾಗಿ ಆಗಿದೆ.ರೈತರು ಇಚ್ಚಿಸಿದ ಬೆಳೆ ಬೆಳೆಯಬಹುದು.ಅದಕ್ಕೆ ಭತ್ತವನ್ನು ಪ್ರೋತ್ಸಾಹಿಸಲು ಕುಮಾರಸ್ವಾಮಿ ನಾಟಿ ಮಾಡಿದ್ದಾರೆ.ಇದರಲ್ಲಿ ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದ್ರು.
ಹಿಂದೆ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದಾಗ ತಾವೇ ಈಜುವ ಮೂಲಕ ಈಜುಕೊಳ ಉದ್ಘಾಟಿಸಿದ್ದರು,ನಾನೂ ಕೂಡ ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿ ಪಡಿಸಿದ ಕೆರೆಯಲ್ಲಿ ,ಪತ್ನಿ ಸಮೇತನಾಗಿ ಬೋಟ್ ನಲ್ಲಿ ಪ್ರಯಾಣಿಸಿ ಉದ್ಘಾಟನೆ ಮಾಡಿದ್ದೆ ಇದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ರು.
ಸಹಕಾರ ಸಂಘಗಗಳಲ್ಲಿನ ರೈತರ ಸಾಲ ಮನ್ನಾ ಮಾಡಲು ಕುಮಾರಸ್ವಾಮಿಯವರಿಗೆ ನಾವು ಸಂಪೂರ್ಣ ಸಹಕಾರ ನೀಡಿದ್ದೇವೆ.ಅಂದು ಕ್ಯಾಬಿನೆಟ್ ನಲ್ಲಿ ಚರ್ಚಿಸುವಾಗ ಕುಟುಂಬದಲ್ಲಿ ಒಬ್ಬರ ಸಾಲ ಮಾತ್ರ ಮನ್ನಾ ಮಾಡುವ ನಿಯಮಾವಳಿಯನ್ನು ತೆಗೆಯುವಂತೆ ಸಲಹೆ ಮಾಡಿದ್ದೇ ನಾವು.ಜತೆಗೆ ಅಂದು ಸಚಿವ ಕೃಷ್ಣಬೈರೇಗೌಡರು ಊರಲ್ಲಿ ಇರಲಿಲ್ಲ.ಹಾಗಾಗಿ ವಾರ್ತಾ ಸಚಿವರಾಗಿ ಸ್ವತಃ ಮುಖ್ಯಮಂತ್ರಿ ಯವರೇ ಮೀಡಿಯಾ ಬ್ರೀಫಿಂಗ್ ಮಾಡಿದ್ರು.ಸರ್ಕಾರದ ಮುಖ್ಯಸ್ಥರೇ ವಿವರಣೆ ನೀಡುವಾಗ ನಾವು ಉಪಸ್ಥಿತಿತರಿರಲಿಲ್ಲ ಎಂದು ದೋಷ ಹುಡುಕುವುದು ಸರಿಯಲ್ಲ ಎಂದ್ರು.
ಕೇರಳ ಮತ್ತು ದಕ್ಷಿಣ ಕನ್ನಡದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕಾವೇರಿ ಕಣಿವೆಯ ಜಲಾಶಯಗಳಲ್ಲೂ ಒಳಹರಿವು ಹೆಚ್ಚಾಗಿದೆ.ಅಣೆಕಟ್ಟುಗಳಿಂದ ಹೆಚ್ಚಿನ ಪ್ರಮಾಣದ ನೀರನ್ನು ಹೊರಬಿಡಲಾಗುತ್ತಿದೆ.ನದಿ ಪಾತ್ರದ ಕೆಳಗಿನ ಪ್ರದೇಶದ ಜನರನ್ನು ಸ್ಥಳಾಂತರ ಮಾಡುವಂತೆ ಆದೇಶಿಸಲಾಗಿದೆ.ಹಾಗೂ ಇದೇ ಸಮಯದಲ್ಲಿ ಜಲಾಶಯಗಳ ಹೆಚ್ಚುವರಿ ನೀರನ್ನು ಕೆರೆ ತುಂಬಿಸಲು ಸಹ ಸೂಚನೆ ನೀಡಲಾಗಿದೆ.ಇಂತಹಾ ಸಂದರ್ಭದಲ್ಲಿ ಕರ್ನಾಟಕ ಮತ್ತು ತಮಿಳುನಾಡಿಗೆ ಉಪಯೋಗವಾಗಲಿ ಎಂದೇ ನಾವು ಈಗ ಮೇಕೆದಾಟು ಅಣೆಕಟ್ಟು ನಿರ್ಮಾಣ ಪ್ರಸ್ತಾಪವನ್ನು ಮುಂದಿಟ್ಟಿರೋದು ಎಂದ್ರು.









