ಬೆಂಗಳೂರು: ಏರ್ ಶೋ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಸ್ಥಳಾಂತರ ವಿವಾದ ಇದೀಗ ರಾಜಕೀಯ ನಾಯಕರ ದಾಳವಾಗಿ ಪರಿಣಮಿಸಿದೆ. ಕೇಂದ್ರದ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ರೆ, ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಏರ್ ಶೋ ಶಿಫ್ಟ್ ಆಗಲು ಬಿಡುವುದಿಲ್ಲ ಎಂದಿದ್ದಾರೆ.
ಲೋಹಗಳ ಹಕ್ಕಿಗಳ ಹಾರಾಟ ಉದ್ಯಾನನಗರಿ ಬೆಂಗಳೂರಿನ ಒಂದು ಗರಿಮೆ. ಕಳೆದ 22 ವರ್ಷಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್ ಶೋ ಇದೀಗ ಉತ್ತರ ಪ್ರದೇಶಕ್ಕೆ ಸ್ಥಳಾಂತರವಾಗೊ ಸಾಧ್ಯತೆ ಇದೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಬೆಂಗಳೂರಿಗರಿಗೆ ವಿಮಾನಗಳ ಹಾರಾಟ ಪ್ರದರ್ಶನ ಮಿಸ್ ಆಗೊ ಸಾದ್ಯತೆ ದಟ್ಡವಾಗುತ್ತಲೇ, ರಾಜಕೀಯ ನಾಯಕರು ತಮ್ಮ ಬೆಳೆ ಬೇಳಿಸಲು ಮುಂದಾಗಿದ್ದಾರೆ. ಎನ್ ಡಿಎ ಅಧಿಕಾರದಿಂದಾಗಿ ಏರ್ ಶೋ, ರಕ್ಷಣಾ ಕಾರ್ಯಕ್ರಮ, ಯೋಜನೆಗಳು ಕೈ ತಪ್ಪುತ್ತಿದೆ ಎಂದು ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಪರಮೇಶ್ವರ್, ಬೆಂಗಳೂರಿನಿಂದ ವಿಮಾನ ಹಾರಾಟ ಪ್ರದರ್ಶನ ಲಖನೌ ಗೆ ಶಿಫ್ಟ್ ಆಗಿದೆ ಎಂಬ ಸುದ್ದಿ ಇದೆ. ಬಿಜೆಪಿಯ ಈ ನಿರ್ಧಾರ ಬೆಂಗಳೂರಿಗರಿಗೆ ಮಾಡಿರೊ ಅವಮಾನ. ಯಾವ್ದೇ ಕಾರಣಕ್ಕೂ ಈ ಏರ್ ಶೋ ಸ್ಥಳಾಂತರ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ಹೊರಹಾಕಿದರು..
ಏರೋ ಇಂಡಿಯಾ ಶೋ ಲಖನೌಗೆ ಶಿಫ್ಟ್ ಆಗಿದೆ ಎಂಬ ಮಾಹಿತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟ್ವೀಟರ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಲು ಕರ್ನಾಟಕ ಬೇಕಿತ್ತು, ವೆಲ್ ಡನ್ ಒಳ್ಳೆ ಕೆಲಸ ಮಾಡಿದ್ರಿ ಇದನ್ನೇ ಮುಂದುವರೆಸಿ ಎಂದು ಟ್ವೀಟರ್ ಮೂಲಕ ಕಾಲೆಳೆದಿದ್ದಾರೆ.
ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಗದಗದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಏರ್ ಶೋ ಸ್ಥಳಾಂತರ ಮಾಡಲು ಬಿಡುವುದಿಲ್ಲ ಎಂದರು.
ಮತ್ತೊಂದೆಡೆ ಏರ್ ಶೋ ಸ್ಥಳಾಂತರ ಮಾಡದಂತೆ ವಿದ್ಯಾರ್ಥಿಗಳು ಸಹಿ ಸಂಗ್ರಹಕ್ಕೆ ಮುಂದಾಗಿದ್ದಾರೆ.
ಒಟ್ಟಾರೆಯಾಗಿ ಏರ್ ಶೋ ಸ್ಥಳಾಂತರ ವಿಚಾರ ಇದೀಗ ರಾಜ್ಯದಲ್ಲಿ ಹೊಸ ಸಂಚಲನ ಮೂಡಿಸಿದೆ.









