ತುಮಕೂರು: ದೇಶದ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿ ಬಾಯಿ ಪೂಲೆ ಅವರ ಹೆಸರಿನಲ್ಲಿ ತುಮಕೂರಿನ ಪ್ರತಿ ತಾಲೂಕಿನಲ್ಲಿ ಉತ್ತಮ ಶಿಕ್ಷಕಿಗೆ ೨೫ ಸಾವಿರ ರು. ಚೆಕ್ ನೀಡಲಾಗುತ್ತೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಘೋಷಿಸಿದರು.
ಕೊರಟಗೆರೆ ಮಾರುತಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ತುಮಕೂರಿನ ಆಯಾ ತಾಲೂಕಿನ ಬಿಇಒ ಅಧಿಕಾರಿಗಳಿಗೆ ಈ ಚೆಕ್ ನೀಡಲಿದ್ದೇನೆ. ಅವರು ತಮ್ಮ ವ್ಯಾಪ್ತಿಯಲ್ಲಿನ ಉತ್ತಮ ಶಿಕ್ಷಕಿಯನ್ನು ಗುರುತಿಸಿ ನೀಡಲಿದ್ದಾರೆ. ನನ್ನ ವತಿಯಿಂದ ಪ್ರತಿ ವರ್ಷ ಉತ್ತಮ ಶಿಕ್ಷಕಿ ಒಬ್ಬರಿಗೆ ನೀಡಲಾಗುವುದು ಎಂದು ಹೇಳಿದರು.
ಬೆಂಗಳೂರಿನ ಕೆಲ ಸರಕಾರಿ ಶಾಲೆಗಳನ್ನು ದತ್ತು ಪಡೆದು ಖಾಸಗಿ ಶಾಲೆ ಮಟ್ಟಕ್ಕೆ ಅಭಿವೃದ್ಧಿ ಪಡಿಸಿದ್ದಾರೆ. ತುಮಕೂರಿನಲ್ಲಿನ ಐದು ಸರಕಾರಿ ಶಾಲೆಯನ್ನು ಸಹ ದತ್ತು ಪಡೆಯಲು ಕೆಲವರು ಮುಂದೆ ಬಂದಿದ್ದಾರೆ. ಇನ್ನು ಇಂಥ ಜನರು ಮುಂದೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಲಾಯಿತು. ಜೊತೆಗೆ ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು
ಈ ವೇಳೆ ಸಂಸದ ಮುದ್ದಹನುಮೇಗೌಡ, ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ಇದ್ದರು.









