ಬೆಂಗಳೂರು: ರಾಜ್ಯದಲ್ಲಿ ನೀವು ಅಧಿಕಾರದಲ್ಲಿದ್ದರೆ, ಕೇಂದ್ರದಲ್ಲಿ ನಾವು ಅಧಿಕಾರದಲ್ಲಿದ್ದೇವೆ. ನಿಮ್ಮ ಧಮಕಿಗೆ ಹೆದರುವವನು ನಾನಲ್ಲ. ನೀವು ಏನೇ ಮಾಡಿದರು ಅದಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂಬುದು ನಮಗೆ ಗೊತ್ತಿದೆ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಯಡಿಯೂರಪ್ಪ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು. ಯಡಿಯೂರಪ್ಪ ಹದ್ದು ಮೀರಿ ಮಾತಾಡ್ತಾರೆ ಅಂತ ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ನನ್ನ ಇತಿ ಮಿತಿ ನನಗೆ ಗೊತ್ತಿದೆ. ನನಗೆ ಹೇಗೆ ಮಾತಾಡಬೇಕು ಅಂತ ಗೊತ್ತು. ಹದ್ದು ಮೀರಿ ಮಾತಾಡೋರು ನೀವು ಎಂದು ತಿರುಗೇಟು ನೀಡಿದರು.
ನಿಮಗೆ ರಾಜ್ಯದಲ್ಲಿ ಅಧಿಕಾರ ಇರಬಹುದು, ಕೇಂದ್ರದಲ್ಲಿ ನಮ್ಮ ಅಧಿಕಾರ ಇದೆ. ನೀವು ಏನು ಮಾಡಿದ್ರು ಅದಕ್ಕೆ ಪ್ರತಿಯಾಗಿ ಏನು ಮಾಡಬೇಕು ಎಂದು ನಮಗೂ ಗೊತ್ತಿದೆ. ಇಂಥ ಧಮಕಿಗೆಲ್ಲ ನಾನು ಹೆದರೊಲ್ಲ, ಬಗ್ಗೊಲ್ಲ. ಶಿವರಾಮ್ ಕಾರಂತ ಬಡಾವಣೆ ಬಗ್ಗೆ ತನಿಖೆ ಮಾಡಿ, ಸತ್ಯ ಜನತೆಗೆ ಗೊತ್ತಾಗಲಿ. ಅದು ಬಿಟ್ಟು ಧಮಕಿ ಹಾಕಿದ್ರೆ ನಡೆಯಲ್ಲ ದೇವೇಗೌಡ, ಕುಮಾರಸ್ವಾಮಿ ಕುಟುಂಬ ಮೈಸೂರಿನಲ್ಲಿ ಎಷ್ಟು ಸೈಟ್ ಮಾಡಿಕೊಂಡ್ರಿ ಗೊತ್ತಿದೆ. ಇಂದು ಸಂಜೆ ನಮ್ಮ ಶಾಸಕರು ಸುದ್ದಿಗೋಷ್ಟಿ ಕರೆದು ಎಲ್ಲ ದಾಖಲೆ ಬಿಡುಗಡೆ ಮಾಡ್ತಾರೆ. ಎಲ್ಲವನ್ನೂ ದಾಖಲೆ ಸಮೇತ ಹೊರ ಹಾಕ್ತೀನಿ ಟಾಂಗ್ ನೀಡಿದರು.
ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್ ಯಡಿಯೂರಪ್ಪ, ಅವರು ಅವರದೇ ಆದ ಕಾರಣಕ್ಕೆ ಬಹಳಷ್ಟು ನೊಂದು ನನ್ನ ಬಗ್ಗೆ ಮಾತನಾಡಿದ್ದಾರೆ. ನಾನು ಅವರ ಕುರಿತು ಏನು ಮಾತಾಡಿಲ್ಲ. ಏನ್ಪೋಸ್ಮೆಂಟ್ ಡೈರೆಕ್ಟರ್ ಅವರು ಏನು ಒಂದು ಕೇಸ್ ನ್ನು ಮಾಡಿದ್ದಾರೋ ಅದನ್ನು ಸಾಭೀತು ಮಾಡೋ ಅಂತದ್ದು ಅವರಿಗೆ ಕಷ್ಟದ ಕೆಲಸವೆನಲ್ಲ ಎಂದರು.








