ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿಯವರ ದಂಗೆ ಹೇಳಿಕೆ ಹಾಗೂ ಯಡಿಯೂರಪ್ಪ ನಿವಾಸದ ಮೇಲೆ ಕಾಂಗ್ರೆಸ್ ಕಾರ್ಯಕರ್ತರ ದಾಳಿ ವಿರೋಧಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.ಮೈಸೂರು ಬ್ಯಾಂಕ್ ವೃತ್ತದಲ್ಲಿ ಬಿಜೆಪಿ ನಗರ ಘಟಕದ ಕಾರ್ಯಕರ್ತರಿಂದ ನಡೆದ ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್,ಶೋಭಾ ಕರಂದ್ಲಾಜೆ,ಬಿಜೆಪಿ ಕಾರ್ಯದರ್ಶಿ ಜಯದೇವ,ಬೆಂಗಳೂರು ಬಿಜೆಪಿ ಅಧ್ಯಕ್ಷ ಸದಾಶಿವ ಸೇರಿ ಹಲವರು ಭಾಗಿಯಾಗಿದ್ರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಡಿಸಿಎಂ ಆರ್.ಅಶೋಕ್,ದಂಗೆ ಏಳಿ ಎಂದು ಕರೆ ಕೊಡೋರು ನಕ್ಸಲರು.ಆದರೆ ಯಾರನ್ನು ಕಾಪಾಡಿ ಎಂದು ಹೇಳಿ ಅಧಿಕಾರ ಕೊಟ್ಟೆವೋ ಅವರೇ ಇಂದು ಸಮಾಜ ಕಂಟಕರಾಗಿದ್ದಾರೆ. ಅವರಿಗೆ ದಿಕ್ಕು ದೆಸೆ ಏನಿಲ್ಲ.ಸರ್ಕಾರ ಉಳಿಯುತ್ತೋ ಇಲ್ವೋ ಅವರಿಗೇ ಗೊತ್ತಿಲ್ಲ.18ಜನ ಹೋಗ್ತಾರೆ 20 ಜನ ಹೋಗ್ತಾರೆ ಎಂದು ಇವರೇ ಹೇಳಿಕೆ ಕೊಡ್ತಾರೆ.ಮಂತ್ರಿಗಳೇ ದಮಕಿ ಹಾಕುತ್ತಾರೆ.ಮಂತ್ರಿ ಸ್ಥಾನ ಕೊಡಲಿಲ್ಲ ಎಂದು ಶಾಸಕರು ಪಕ್ಷ ಬಿಟ್ಟು ಹೋಗ್ತೀವಿ ಎನ್ನುತ್ತಾರೆ.ನಿಮಗೆ ತಾಕತ್ತಿದ್ರೆ ಭಿನ್ನಮತೀಯ ಚಟುವಟಿಕೆ ಮಾಡಿದ್ರಲ್ಲಾ ಅವರ ಮೇಲೆ ಕ್ರಮಕೈಗೊಳ್ಳಬೇಕಿತ್ತು. ಅದು ಬಿಟ್ಟು ಬಿಜೆಪಿ ಮೇಲೆ ಗೂಬೆ ಕೂರಿಸ್ತಾರೆ.ಸರ್ಕಾರ ಬಿದ್ರೆ ಅದು ಅವರ ದುರಾಡಳಿತದಿಂದ. ಎರಡು ದಿನದಲ್ಲೋ,ಐದು ದಿನದೊಳಗೋ ವಾರದೊಳಗೋ ಈ ಸರ್ಕಾರ ಬಿದ್ದು ಹೋಗುತ್ತೆ.ಈ ರೀತಿ ಹೇಳಿಕೆ ಕೊಟ್ಟ ಮೇಲೆ ಈ ಸರ್ಕಾರ ಇರೋದಕ್ಕೂ ಸಾಧ್ಯವಿಲ್ಲ ಎಂದ್ರು.
ಈ ಸರ್ಕಾರವನ್ನು ತೊಲಗಿಸಲು ನಾವು ಪಣತೊಟ್ಟು ಕೆಲಸ ಮಾಡುತ್ತಿದ್ದೇವೆ.ನೂರು ದಿನಗಳಲ್ಲಿ ಈ ಸರ್ಕಾರ ನೂರು ತಪ್ಪು ಮಾಡಿದೆ.ಇದರ ಪಾಪದ ಕೊಡ ತುಂಬಿದೆ.ಹಾಗಾಗಿ ಇದು ತೊಲಗಲೇ ಬೇಕು ಎಂದ್ರು.
ಸಂಸದೆ ಶೋಭಾಕರಂದ್ಲಾಜೆ ಮಾತನಾಡಿ, ಈ ಸರ್ಕಾರದ ಮೇಲೆ ಕಾಂಗ್ರೆಸ್ ಶಾಸಕರಿಗೆ ವಿಶ್ವಾಸವಿಲ್ಲ.ಈ ಸರ್ಕಾರ ಬೇಡ ಎಂದು ಎಂಟಿಬಿ ನಾಗರಾಜ್ ಹೇಳಿದ್ರು.ಈ ಅವಿಶ್ವಾಸಕ್ಕೆ ಮೈತ್ರಿ ಸರ್ಕಾರದ ಸಚಿವರ ನಡವಳಿಕೆ ಕಾರಣ.ಈ ಅವಿಶ್ವಾಸ ತಮ್್ಮ ಸರ್ಕಾರದ ಬುಡಕ್ಕೆ ಬರುತ್ತದೆ ಎಂದು ಗೊತ್ತಾದ ತಕ್ಷಣ ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡಿದ್ದಾರೆ ಎಂದ್ರು.
ಮೂರುವರೆ ತಿಂಗಳಲ್ಲಿಕುಮಾರಸ್ವಾಮಿ ದೇವಸ್ಥಾನ ಸುತ್ತಿರೋದು ಬಿಟ್ಟು ಬೇರೆ ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ.ಶಾಸಕರ ಅಭಿವೃದ್ದಿ ಅನುದಾನ ಕೂಡ ಕೊಟ್ಟಿಲ್ಲ.ಶಾಸಕರಿಗೆ ಒಂದೇ ಒಂದು ಪೈಸೆ ಬಂದಿಲ್ಲ. ನಾವೇನು ತಪ್ಪು ಮಾಡಿದ್ದೇವೆ.ಯಡಿಯೂರಪ್ಪ ಏನು ತಪ್ಪು ಮಾಡಿದ್ದಾರೆ.ವಿಧಾನಸೌಧದಲ್ಲಿ ಶಾಸಕರಿಗೆ ಹೊಡೆಯುವ ಗೂಂಡಾಗಿರಿ ಇತಿಹಾಸ ಜನತಾದಳಕ್ಕಿದೆ.ಈಗ ಮತ್ತೆ ಸಿಎಂ ಅದೇ ಭಾಷೆ ಪ್ರಯೋಗ ಮಾಡುತ್ತಿದ್ದಾರೆ.ಕಾಂಗ್ರೆಸ್ ಮತ್ತು ಜೆಡಿಎಸ್ ಗೂಂಡಾಗಳನ್ನು ಯಡಿಯೂರಪ್ಪ ನವರ ಮನೆ ಮೇಲೆ ಛೂ ಬಿಟ್ಟಿದ್ದೀರಿ.ಎರಡು ದಿನಗಳ ಹಿಂದೇಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಮುಖರ ವಾಟ್ಸಪ್ ಗಳಲ್ಲಿ ಪ್ರತಿಭಟನೆ ಮಾಡುವ ಮೆಸೇಜ್ ಪಾಸ್ ಆಗಿದೆ.ಆದರೂ ಪೊಲೀಸ್ ರಕ್ಷಣೆ ಯಾಕೆ ಕೊಟ್ಟಿಲ್ಲ.ಈ ಪ್ರತಿಭಟನೆ ಮಾಡಿದ ಮನೋಹರ್ ಕೊಲೆ ಅಪರಾಧಿ.ಅವನನ್ನು ಏಕೆ ಬಂಧಿಸಲಿಲ್ಲ.ಅದೇ ಪ್ರತಿಭಟನೆಗೆ ಕರೆ ಕೊಟ್ಟ ಶಶಿಧರ್ ನನ್ನು ಬಂಧಿಸಿ ಜೈಲಿಗೆ ಹಾಕಿದ್ರು.ಅದಕ್ಕೆ ಈಗ ಕುಮಾರಸ್ವಾಮಿ ಮೇಲೆ ಕೇಸ್ ಹಾಕಿ ಎಂದು ಡಿಜಿಪಿಗೆ ದೂರು ಕೊಟ್ಟು ಬಂದಿದ್ದೇವೆ ಎಂದ್ರು.
ಸಿಎಂ ಕುಮಾರಸ್ವಾಮಿ ಯವರಿಗೆ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ಪಂಚ ಪ್ರಶ್ನೆಗಳು. ದಂಗೆ ಎಂದ್ರೆ ಪ್ರತಿಭಟನೆ ಎಂದು ಕುಮಾರಸ್ವಾಮಿ ಯವರು ಹೊಸ ನಿಘಂಟು ಬರೆಯಲು ಹೋಗಿದ್ದಾರೆ.
*ಯಡಿಯೂರಪ್ಪ ನವರು ಏನು.ಅವರ ವಿರುದ್ದ ಏಕೆ ದಂಗೆ ಏಳಬೇಕು.?
*ನಿಮಗೆ ಆಡಳಿತ ನಡೆಸಲು ಕಚೇರಿ,ವಾಸಕ್ಕೆ ಮನೆ ಕೊಟ್ಟಿದೆ ಸರ್ಕಾರ.ಆದರೆ ನೀವು ವರ್ಷಕ್ಕೆ ಮೂರು ಕೋಟಿ ರೂ.ಕೊಟ್ಟು ತಾಜ್ ವೆಸ್ಟ್ ಎಂಡ್ ನಲ್ಲಿ ರೂಂ ಲೀಸ್ ಗೆ ತೆಗೆದುಕೊಂಡಿದ್ದೀರಲ್ಲ.ಯಾಕೆ ಬ್ಯುಸಿನೆಸ್ ಮಾಡಲು ನೀವು ಮತ್ತು ನಿಮ್ಮ ಪತ್ನಿ ಅಲ್ಲಿ ರೂಮ್ ಪಡೆದಿದ್ದೀರಾ..
*ಕರ್ನಾಟಕದಲ್ಲಿ ಹಾಸನ ಮಾತ್ರ ಪುಣ್ಯಭೂಮಿಯಾ..ಕರ್ನಾಟಕದ ಜನ ನಿಮ್ಮ ಬಾಡಿಗೆ ಆಳುಗಳಾ..ನಿಮ್ಮ ಮಾತು ಯಾಕೆ ಕೇಳಬೇಕು.
*ಕುಮಾರಸ್ವಾಮಿ ಮತ್ತು ದೇವೇಗೌಡರ ಕುಟುಂಬ ವರ್ಗದವರು ಸಾವಿರಾರು ಕೋಟಿ ರೂ.ಬಾಳುತ್ತಾರೆ.ನೀವು ತುಂಬಾ ಪಾರದರ್ಶಕವಾದರೆ ನಿಮ್ಮ ಆಸ್ತಿ ಬಗ್ಗೆ ತನಿಖೆಗೆ ಆದೇಶ ಮಾಡ್ತೀರಾ?









