ಕಾರು ಅಪಘಾತದಲ್ಲಿ ಕೈ ಮುರಿದುಕೊಂಡ ಚಾಲೆಂಜಿಂಗ್‌ ಸ್ಟಾರ್ ದರ್ಶನ್!

0
36

ಫೋಟೋಕೃಪೆ: ಟ್ವಿಟ್ಟರ್

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತಕ್ಕೀಡಾಗಿದ್ದು ಕುರುಕ್ಷೇತ್ರದ ದುರ್ಯೋಧನ ಪಾತ್ರಧಾರಿಯಾಗುದ್ದ ದರ್ಶನ್ ಬಲಗೈ ಮುರಿದಿದೆ.ಡೈನಮಿಕ್ ಸ್ಟಾರ್ ಫ್ಯಾಲಿಗೂ ಗಾಯಗಳಾಗಿದ್ದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರು ಬಳಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಯಾಣಿಸುತ್ತಿದ್ದ ಕಾರು ಅಪಘಾತವಾಗಿದೆ.ಅಪಘಾತದಲ್ಲಿ ದರ್ಶನ್ ಅವರ ಬಲಗೈ ಮುರಿದಿದೆ.ದರ್ಶನ್ ಜೊತೆ ಹಿರಿಯ ನಟ ಡೈನಮಿಕ್ ಸ್ಟಾರ್ ದೇವರಾಜ್ ಹಾಗೂ ಪುತ್ರ ಪ್ರಜ್ವಲ್ ದೇವರಾಜ್‌ ಕೂಡ ಗಾಯಗೊಂಡಿದ್ದಾರೆ.

ಒಂದೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ನಟರು‌ ಅಪಘಾತದಲ್ಲಿ ಗಾಯಗೊಂಡಿದ್ದಾರೆ.ಕಾರು ಚಲಾಯಿಸುತ್ತಿದ್ದ ದರ್ಶನ್ ಕೈ ಮುರಿದಿದ್ದರೆ, ದೇವರಾಜ್‌ಗೆ ಎದೆ ಭಾಗಕ್ಕೆ ಗಾಯವಾಗಿದೆ.ದೇವರಾಜ್ ಪುತ್ರ ಪ್ರಜ್ವಲ್ ದೇವರಾಜ್‌ಗೆ ಕುತ್ತಿಗೆ ಭಾಗಕ್ಕೆ ಗಾಯವಾಗಿದ್ದು,ಕಾರಿನಲ್ಲಿದ್ದ ಆಂಟೋನಿ ಎಂಬ ದರ್ಶನ್ ಗೆಳೆಯ ಕೂಡ ಗಂಭೀರವಾಗಿ ಗಾಯಗೊಂಡಿದ್ದು ನಾಲ್ವರನ್ನೂ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೈಸೂರಿನ ರಿಂಗ್ ರಸ್ತೆ ಬಳಿ ತಡರಾತ್ರಿ 3.35ರ ಸಮಯದಲ್ಲಿ ಅಪಘಾತ ನಡೆದಿದೆ.ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ನಿನ್ನೆಯಷ್ಟೆ ಇಡೀ ದಿನ ಮೈಸೂರು ಪ್ರವಾಸ ಕೈಗೊಂಡಿದ್ದ ನಟರು.ಮೃಗಾಲಯದಲ್ಲಿ ಪ್ರಾಣಿ ದತ್ತು ಹಾಗೂ ಅರಮನೆಯಲ್ಲಿ ಮಾವುತರೊಂದಿಗೆ ಪಂಕ್ತಿಭೋಜನದಲ್ಲೂ ಭಾಗಿಯಾಗಿದ್ರು.ಮೈಸೂರಿನಿಂದ ವಾಪಸ್ಸಾಗುತ್ತಿದ್ದಾಗ ಘಟನೆ ಜರುಗಿದೆ.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಮೈಸೂರಿಗೆ ಬಂದ ದರ್ಶನ್ ಪತ್ನಿ ಮತ್ತು ಮಗ ಆಸ್ಪತ್ರೆಗೆ ಆಗಮಿಸಿ ಯೋಗಕ್ಷೇಮ ವಿಚಾರಿಸಿದರು.ದರ್ಶನ್‌ಗೆ ಶಸ್ತ್ರ ಚಿಕಿತ್ಸೆ ಆಗಬೇಕಿರುವ ಹಿನ್ನೆಲೆಯಲ್ಲಿ ಕುಟುಂಬಸ್ಥರ ಜೊತೆ ವಿಜಯಲಕ್ಷ್ಮಿ ಮಾತುಕತೆ ನಡೆಸುತ್ತಿದ್ದಾರೆ.

- Call for authors -

LEAVE A REPLY

Please enter your comment!
Please enter your name here