ಬೆಂಗಳೂರು:ಮೊದಲ ಹಂತದಲ್ಲಿ ಐದು ಸಾವಿರ ನಿವೇಶನಗಳನ್ನು ಕೆಂಪೇಗೌಡ ಬಡಾವಣೆಯಲ್ಲಿ ಹಂಚಿಕೆ ಮಾಡಲಾಗಿದೆ ಭೂಮಾಲೀಕರಿಗೆ 2165 ನಿವೇಶನಗಳನ್ನ ನೀಡಲಾಗಿದೆ.869 ನಿವೇಶನಗಳನ್ನ ಅರ್ಕಾವತಿ ಲೇಔಟ್ ನಿವೇಶನದಾರರಿಗೆ ಹಂಚಿಕೆ ಮಾಡಲಾಗಿದೆ ಹಂಚಿಕೆದಾರರ ಹೆಸರುಗಳನ್ನ ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದಲ್ಲಿ ಐದು ಸಾವಿರ ಸೈಟ್ ಹಂಚಿಕೆ ರ್ಯಾಂಡಮೈಸೇಶನ್ ಮೂಲಕ ಸಿಎಂ ಸೈಟ್ ಹಂಚಿಕೆ ಮಾಡಿದ್ರು. ಗೃಹ ಕಚೇರಿ ಕೃಷ್ಣಾದಲ್ಲಿ 20*30, 30*40, 40*60*, 60*80 ಅಳತೆಯ ಸೈಟ್ ಗಳು ಹಂಚಿಕೆಗೆ ಚಾಲನೆ ನೀಡಿದ್ರು.ನಂತರ ಮಾತನಾಡಿದ ಕುಮಾರಸ್ವಾಮಿ, ಮೂಲಭೂತ ಸೌಕರ್ಯಗಳ ಕೆಸಲ ನಡೀತಿದೆ ನಿವೇಶನ ಪಡೆದವರು ಮನೆ ಕಟ್ಟಲು ಸಮಸ್ಯೆ ಇಲ್ಲ ರಸ್ತೆ, ಚರಂಡಿ ಕೆಲಸ ನಡೀತಿದೆ ಎಲ್ಲಾ ಸೌಕರ್ಯಗಳನ್ನ ಸಂಪೂರ್ಣವಾಗಿ ಒದಗಿಸಿಕೊಡ್ತೀವಿ ಮೂರು ಸಾವಿರ ಕೋಟಿ ವೆಚ್ಚದಲ್ಲಿ ಕೆಲಸ ನಡೀತಿದೆ ಎಂದ್ರು.
ಮಾನವೀಯತೆಯನ್ನ ನೋಡಬೇಕು ಒತ್ತುವರಿದಾರರನ್ನ ಸಡನ್ನಾಗಿ ಆಚೆ ಹಾಕಿದ್ರೆ ತೊಂದ್ರೆಯಾಗುತ್ತೆ ಕೆಲವು ತಪ್ಪುಗಳು ಆಗಿರೋದು ನಿಜ ಪ್ರತಿಯೊಬ್ಬ ನಾಗರೀಕನಿಗೆ ಉತ್ತಮ ಬದುಕು ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಸಿಎಸ್ ತಕ್ಷಣ ಸಭೆ ಮಾಡುವಂತೆ ಸೂಚನೆ ಕೊಟ್ಟಿದ್ದೇವೆ 28 ರಂದು ಸಭೆ ಕರೆದಿದ್ದೇನೆ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡ್ತೀವ ಶಾಶ್ವತವಾಗಿ ಪರಿಹಾರ ನೀಡೋದಕ್ಕೆ ಯೋಜನೆ ಜಾರಿ ಮಾಡ್ತೀವಿ ಸರ್ವೇ ರಿಪೋರ್ಟ್ ಬಂದ ನಂತರ ಒತ್ತುವರಿ ತೆರವು ಸದ್ಯಕ್ಕೆ ತೆರವು ಕಾರ್ಯಾಚರಣೆ ನಿಲ್ಲಿಸಿದ್ದೇವೆ ಎಂದ್ರು.
ಬಿಬಿಎಂಪಿ ಕಮಿಶನರ್ ಗೆ ಸೂಚನೆ ಕೊಟ್ಟಿದ್ದೇವೆ ಮೂರ್ನಾಲ್ಕು ದಿನ ಮಳೆ ಹೆಚ್ಚಾಗುತ್ತೆ ಅಂತ ಹವಾಮಾನ ಇಲಾಖೆ ಹೇಳಿಕೆ ನೀಡಿದೆ.ಡಿಸಿಎಂ ಕೂಡ ಸಭೆ ಮಾಡಿದ್ದಾರೆ.ಅಧಿಕಾರಿಗಳನ್ನ ಅಲರ್ಟ್ ಮಾಡುವಂತೆ ಸೂಚನೆ ನೀಡಿದ್ದೇನೆ.ಬೆಳಿಗ್ಗೆ ನಾಲ್ಕು ಗಂಟೆ ತನಕ ಅಧಿಕಾರಿಗಳು ಫೀಲ್ಡ್ ನಲ್ಲಿದ್ರು.ಮನೆಗಳಿಗೆ ನುಗ್ಗಿದ ನೀರನ್ನ ಹೊರ ಹಾಕುವಂತೆ ಸೂಚನೆ ನೀಡಿದ್ದೇನೆ.ಮರಗಳು ಬಿದ್ದಿದ್ದರಿಂದ ಸಂಚಾರಕ್ಕೆ ತೊಂದ್ರೆಯಾಯ್ತು.ಸಿಎಸ್ ಬಳಿಯೂ ಕೂಡ ಚರ್ಚೆ ಮಾಡಿದ್ದೇವೆ.ಮಾಧ್ಯಮಗಳ ಸಲಹೆಗಳನ್ನೂ ಸ್ವೀಕರಿಸುತ್ತೇವೆ ಹಳ್ಳ ಪ್ರದೇಶಗಳಲ್ಲಿ ಕ್ರಮ ತೆಗೆದುಕೊಂಡಿರುವ ಬಗ್ಗೆ ಮಾಹಿತಿ ತೆಗೆದುಕೊಳ್ಳುವಂತೆ ಸಿಎಸ್ ಗೆ ಸೂಚನೆ ನೀಡಿದ್ದು ಅನಾನುಕೂಲವಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು,ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ರೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದ್ರು.









