ಬೆಂಗಳೂರು: ನಾಯಿಗಳ ಕಳ್ಳತನದ ಬಗ್ಗೆ ಆಗಾಗ ಸುದ್ಧಿಗಳನ್ನು ನಾವು ಕೇಳಿದ್ದೇವೆ. ಆದ್ರೆ, ಪಕ್ಷಿಗಳನ್ನು ಕದಿಯುತ್ತಾರಾ? ಹೌದು ಎಚ್ಎಎಲ್ ಮಾರುಕಟ್ಟೆಯಲ್ಲಿ ಪಕ್ಷಗಳ ಕಳ್ಳತನವಾಗಿದೆ.
ಭಾರೀ ಬೆಲೆ ಬಾಳುವ ಅಮೇರಿಕನ್ ಹಾಗೂ ಆಫ್ರಿಕನ್ ಪಕ್ಷಿಗಳನ್ನು ಎಚ್ಎಎಲ್ ಮಾರುಕಟ್ಟೆಯಲ್ಲಿ ಅಪಹರಿಸಲಾಗಿದೆ. ಹಕ್ಕಿ ವ್ಯಾಪಾರಿ ಪ್ರದೀಪ್ ಯಾದವ್ ಎಂಬುವವರ ಅಂಗಡಿಯಿಂದ ಸುಮಾರು ಆರು ಲಕ್ಷ ಮೌಲ್ಯದ ವಿದೇಶಿ ಹಕ್ಕಿಗಳನ್ನು ಕದ್ದೊಯ್ಯಲಾಗಿದೆ. ಇದರಲ್ಲಿ ಒಂದು ಮಾತನಾಡುವ ಗಿಳಿಯೂ ಸಹ ಇತ್ತು ಎನ್ನಲಾಗಿದೆ. ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವನೇ ಹಕ್ಕಿಗಳನ್ನು ಅಪಹರಿಸಿದ್ದಾನೆ ಎಂದು ಶಂಕಿಸಲಾಗಿದೆ.
ಆಪ್ರೀನ್ ಗ್ರೇ ಪ್ಯಾರೋಟ್, 2 ಟ್ಯಾಮ್ಡ್ ಆಲ್ಬಿನೋ ಕಾಕ್ ಟೈಲ್, ಆಪ್ರಿಕನ್ ಲವ್ ಬರ್ಡ್ಸ್, ಎಯ್ಟ್ ಫಿಂಚಸ್ ಪಕ್ಷಿಗಳು ಕಳ್ಳತನವಾಗಿದ್ದು, ಆಪ್ರೀನ್ ಗ್ರೇ ಪ್ಯಾರೋಟ್ ಮಾತನಾಡುತ್ತಿತ್ತು ಎಂದು ತಿಳಿದುಬಂದಿದೆ. ಹೆಚ್ .ಎ. ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









