ಸಿದ್ಧರಾಮಯ್ಯ ಜೊತೆ ಸೆಲ್ಫಿಗೆ ಮುಗಿಬಿದ್ದ ಮಹಿಳಾಮಣಿಗಳು!

0
41

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು‌ ಮಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಹಿಳೆಯರ ಪ್ರೊಗ್ರಾಂ ಎಂದ ತಕ್ಷಣ ನೆನಪಾಗೋದು ಸಿದ್ಧರಾಮಯ್ಯ ಸುತ್ತ ಸುತ್ತಿಕೊಳ್ಳುವ ಮಹಿಳಾ ಮಣಿಗಳು. ಹೌದು ಇವತ್ತು ಕೂಡ ಸಿದ್ಧರಾಮಯ್ಯ ಜೊತೆ ಸೆಲ್ಫಿಗೆ ಮಹಿಳೆಯರು ಮುಗಿಬಿದ್ದರು. ಅಷ್ಟೇ ಅಲ್ಲ, ಮಾಜಿ ಸಿಎಂ ಕೂಡ ಮಹಿಳೆಯರ ಕಾಲು ಎಳೆಯುತ್ತಲೇ ಅವರಿಗೆ ಉತ್ತಮ ಮೆಸೇಜ್ ನೀಡಿದರು.

ರಾಜ್ಯ ಪ್ರದೇಶ ಕುರುಬ ಸಂಘ ಮತ್ತು ಅಹಲ್ಯಾ ಹೊಳ್ಕರ್ ಮಹಿಳಾ ಸಂಘ ಹಮ್ಮಿಕೊಂಡಿದ್ದ ಮಾಹಿಳಾ ಜಾಗೃತಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಸಿದ್ಧರಾಮಯ್ಯ ಕಾರ್ಯಕ್ರಮದ ಸ್ಥಳಕ್ಕೆ ಬಂದ ತಕ್ಷಣ, ಸಿದ್ಧು ಜೊತೆ ಸೆಲ್ಫಿಗೆ ಮಹಿಳೆಯರು ನಾ ಮುಂದು, ತಾಮುಂದು ಎಂದು ಮುಗಿಬಿದ್ದರು. ಸಿದ್ಧು ಕಾರ್ಯಕ್ರಮಕ್ಕೆ ಎಂಟ್ರಿಯಾದಾಗಿನಿಂದ, ಮುಗಿಯುವವರೆಗೆ ನಿಂತಲ್ಲಿ , ಕೂತಲ್ಲಿ ಸೆಲ್ಫಿಗಾಗಿ ಮಹಿಳೆಯರು ಗುಂಪುಗಟ್ಟಿ ಮುಗಿಬಿದ್ದಿದರು. ವೇದಿಕೆ ಸನ್ಮಾನದಲ್ಲೂ ಸೆಲ್ಫಿಯದೇ ಸದ್ದು ಕಾಣುತ್ತಿತ್ತು.

ಸಿದ್ದರಾಮಯ್ಯ ಭಾಷಣ ಆರಂಭಿಸುತ್ತಲೇ ಸಾಮಾಜಿಕ ನ್ಯಾಯದ ಬಗ್ಗೆ ಪಾಠ ಶುರು ಮಾಡಿದರು. ಈ ಪಾಠದಲ್ಲೇ ನಗೆಯ ಅಲೆಯನ್ನು ಸೃಷ್ಟಿಸಿದರು. ವರದಕ್ಷಿಣೆ ಕಿರುಕುಳ ಬಂದಿದ್ದು ಬರೀ ಗಂಡಸರಿಂದಲ್ಲ, ಹೆಂಗಸರಿಂದಲೂ ವರದಕ್ಷಿಣೆ ಕಿರುಕುಳ ಬಂದಿದೆ.
ಸೊಸೆಗೆ ಅತ್ತೆಯಿಂದ ಕಿರುಕುಳ- ಹೌದೋ ಅಲ್ವೋ?? ಎಲ್ಲೂ ಮಾವನಿಂದ ಸೊಸೆಗೆ ಕಿರುಕುಳ ಅಂತ ಕೇಳೊ ಪ್ರಮಾಣ ಕಡಿಮೆ ಅಲ್ವಾ ? ಸತ್ಯ ಒಪ್ಪಿಕೊಳ್ಳೋಣ, ಜಾಗೃತಿ ಬರಬೇಕಲ್ಲ- ಏನಂತೀರಿ? ಮಹಿಳಾ ಗ್ರಾಮ ಪಂಚಾಯತ್ ಸದಸ್ಯೆಯರ ಹಿಂದೆ ಗಂಡ ಕೂತಿರ್ತಾನೆ ಅವನಿಗೇನು ಕೆಲಸ ಅಲ್ಲಿ? ಜಾಗೃತಿ ಬಂದ ಹೆಣ್ಣು ಮಕ್ಕಳು ಗಂಡನಿಗೆ ಮನೆಯಲ್ಲಿ ಕೂರು, ನನ್ನ ಜೊತೆ ಬರಬೇಡ ಅಂತ ಹೇಳಬೇಕು ಎಂದರು.

ಇಷ್ಟೆಲ್ಲ ಕ್ರೇಜ್ ಮಧ್ಯೆಯೂ ಮಾಜಿ ಸಿಎಂ ಸಿದ್ದರಾಮಯ್ಯ ರಾಜಕೀಯ ಮರೆಯಲಿಲ್ಲ. ಹಲವು ಯಶಸ್ವಿ ಭಾಗ್ಯ ನೀಡಿದ್ರು, ಯಾವ್ದೇ ಪ್ರಯೋಜನವಾಗಲಿಲ್ಲ. ಮತ್ತೆ ಸಿಎಂ ಆಗೋ ವಿಚಾರಕ್ಕೆ ಮಾತನಾಡಿದ ಸಿದ್ದರಾಮಯ್ಯ. ಹೊಟ್ಟೆ ಕಿಚ್ಚಿಗೆ ಮದ್ದು ಎಲ್ಲಿದೆ..?ನಾನು ಐದು ವರ್ಷ ಪೂರೈಸಿದ ನಂತರ ಮತ್ತೆ ಸಿಎಂ ಆಗ್ತೀನಿ ಅಂತ ಬಹಳ ಜನ ಹೊಟ್ಟೆ ಕಿಚ್ಚು ಪಟ್ಟಿದ್ರು. ಅದೆಲ್ಲ‌ ಇರಲಿ ಬಿಡಿ. ಯಾರ್ ಏನಾದ್ರೂ ಹೊಟ್ಟೆ ಕಿಚ್ಚು ಪಟ್ಟುಕೊಳ್ಳಲಿ, ನನಗಂತೂ ಆತ್ಮ ತೃಪ್ತಿಯಾಗೋ ರೀತಿ ಕೆಲಸ ಮಾಡಿದ್ದೇನೆ. ದೇವರಾಜು ಅರಸು ನಂತರ ನನಗೆ ಈ ಅವಕಾಶ ಸಿಕ್ಕಿದ್ದು ಎಂದು ಚುನಾವಣೆ ವೇಳೆ ಆದ ಬೆಳವಣಿಗೆ ಬಗ್ಗೆ ಬಿಚ್ಚಿಟ್ಟರು.

- Call for authors -

LEAVE A REPLY

Please enter your comment!
Please enter your name here