ಬೆಂಗಳೂರು:ರಫೇಲ್ ಡೀಲ್ ಮುಂದಿಟ್ಟುಕೊಂಡು ರಾಹುಲ್ ಗಾಂಧಿ ಬೆಂಗಳೂರಲ್ಲಿ ಸಭೆ ನಡೆಸ್ತಿದ್ದಾರೆ ಯಾವ ಪುರುಷಾರ್ಥಕ್ಕಾಗಿ ಈ ಸಂವಾದ ನಡೆಸ್ತಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ರಾಹುಲ್ ಗಾಂಧಿ ರಫೇಲ್ ಡೀಲ್ ಬಗ್ಗೆ ಮಾತಾಡ್ತಾ ಇದ್ದಾರೆ
ಸೈನ್ಯಕ್ಕೆ ಬೇಕಾದ ಅಗತ್ಯ ವಸ್ತುಗಳು ನಮ್ಮಲ್ಲಿ ಇರಲಿಲ್ಲ ಕಳೆದ 70 ವರ್ಷಗಳಲ್ಲಿ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿಲ್ಲ ಸೈನ್ಯಕ್ಕೆ ಬೇಕಾದ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಯಾರು ತಡೆದರು ಈಗ ನಾವು ರಫೆಲ್ ಯುದ್ಧ ವಿಮಾನ ಖರೀದಿಸಿದರೆ ಸಂಶಯ ಹುಟ್ಟು ಹಾಕುವ ಪ್ರಯತ್ನ ಮಾಡ್ತಿದ್ದಾರೆ ಸೈನ್ಯದ ಮಾನಸಿಕತೆಯನ್ನು ಖುಗ್ಗಿಸುವ ಪ್ರಯತ್ನ ರಾಹುಲ್ ಗಾಂಧಿ ಪ್ರಯತ್ನ ಮಾಡ್ತಿದ್ದಾರೆ ಎಂದ್ರು.
ಎಚ್ಎಎಲ್ ಜೊತೆ ರಾಹುಲ್ ಸಭೆ ನಡೆಸುವ ಅಧಿಕಾರ ಇಲ್ಲ
ನೀವು ಒಬ್ಬ ಪಕ್ಷದ ನಾಯಕ ಮಾತ್ರ ನಿಷೇದಿತ ಪ್ರದೇಶದಲ್ಲಿ ಸಭೆ ಮಾಡ್ತಿದ್ದಾರೆ ರಾಹುಲ್ ಆ ಜಾಗದಲ್ಲಿ ಸಭೆ ನಡೆಸಲು ಆಗಲ್ಲ ಅದು ನಿಷೇದಿತ ಜಾಗ ಆದರೂ ಸಭೆ ನಡೆಸಿ ಕಾನೂನು ಮುರಿಯಲು ಹೊರಟಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ರು.
ವಿಧಾನಸೌಧದಲ್ಲಿ ಆರಂಭವಾದ ಮಹಾಘಟಬಂಧನ ವಿಧಾನಸೌಧಲ್ಲೆ ಅಂತ್ಯ ಆಗಿದೆ.ಯಾಕೆ ಎನ್ ಮಹೇಶ್ ರಾಜೀನಾಮೆ ಕೊಟ್ಟಿದ್ದಾರೆ ನಿಮಗೆ ಜನರ ಬೆಂಬಲ ಇಲ್ಲ
ಇದು ಅಪವಿತ್ರ ಮೈತ್ರಿ ಮಹಾಘಟಬಂಧನ ಮುಳುಗಿದೆ
ದೇಶದಲ್ಲಿ ಘಟಬಂಧನ ಅಂತ್ಯ ಆಗಿದೆ ನೂರು ದಿನದಲ್ಲಿ ಅರವತ್ತು ದಿನವನ್ನು ಕುಮಾರಸ್ವಾಮಿ ದೇವಸ್ಥಾನದಲ್ಲಿ ಕಳೆದಿದ್ದಾರೆ.ಕರ್ನಾಟಕದಲ್ಲಿ ಎಚ್ ಒನ್ ಎನ್ ವನ್ ದಿಂದ ಏಳು ಜನ ಸತ್ತಿದ್ದಾರೆ.ರಾಜ್ಯ ಸರ್ಕಾರ ಎಲ್ಲಿದೆ ಯಾವ ಖಾತೆಯನ್ನು ಯಾವ ಮಂತ್ರಿ ನಿರ್ವಹಿಸುತ್ತಿದ್ದಾರೆ ಗೊತ್ತಿಲ್ಲ. ಸಿಎಂ ತಮ್ಮ ತಪ್ಪು ಮುಚ್ಚಿಟ್ಟುಕೊಳ್ಳಲು ದಿನಕ್ಕೊಂದು ವಿಚಾರ ಹೇಳ್ತಿದ್ದಾರೆ ಅಣೆಕಟ್ಟಿಗೆ ಡೈನಾಮೇಟ್ ಇಡ್ತೀನಿ ಅಂತಾ ಹೇಳುವ ಶಾಸಕರನ್ನು ಇನ್ನೂ ಬಂಧಿಸಿಲ್ಲ ದಲೈಲಾಮಾ ಹತ್ಯೆ ಸಂಚು ಪ್ರಕರಣದಲ್ಲಿ ಬಂಧಿತರ ಪರವಾಗಿ ಸಿಎಂ ಕುಮಾರಸ್ವಾಮಿ ಮಾತಾಡ್ತಿದ್ದಾರೆ ಸಿಎಂ ರಾಜ್ಯದಲ್ಲಿ ಏನು ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.
ಕಾಂಗ್ರೆಸ್ ಗೊಂದಲ ನಿರ್ಮಾಣ ಮಾಡುವ ಕೆಲಸ ಮಾಡ್ತಿದ್ದಾರೆ
ರಾಹುಲ್ ಗಾಂಧಿ ಹೆಚ್ ಎಎಲ್ ನ ನಿವೃತ್ತ ಅಧಿಕಾರಿಗಳು ಮತ್ತು ಕಾಂಗ್ರೆಸ್ ಚೇಲಾಗಳ ಜೊತೆ ಮಾತಾಡುವ ಬದಲು ರಾಜ್ಯದಲ್ಲಿ ಏನು ಪ್ರಗತಿ ಆಗಿದೆ ಅಂತಾ ನೋಡಲಿ ಕಾಂಗ್ರೆಸ್ ಪಕ್ಷ ಹೆಚ್ ಎಂಟಿ ಸೇರಿ ಎಷ್ಟು ಕಂಪನಿಗಳನ್ನು ಮುಚ್ಚಿ ಹಾಕಿಲ್ಲ
ಇವತ್ತಿನ ರಾಹುಲ್ ಗಾಂಧಿ ಕಾರ್ಯಕ್ರಮ ಕೇವಲ ಅಪಪ್ರಚಾರ ಎಂದ್ರು.









