ಬೆಂಗಳೂರು: ಇತ್ತೀಚೆಗೆ ಮಾನ್ಯವರ್ ನ ‘ಎಥ್ನಿಕ್ ವೀಕ್ ‘ಅಭಿಯಾನವನ್ನು ಬಿಡುಗಡೆ ಮಾಡಿದ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ದೀಪಾವಳಿ ಹಬ್ಬ ಹಾಗೂ ಅದರ ಸಂಭ್ರಮ ಜತೆಗೆ ತನ್ನ ನೆಚ್ಚಿನ ಎಥ್ನಿಕ್ ವೇರ್ ಕುರಿತು ಮಾತು ಹಂಚಿಕೊಂಡರು.
ಹಬ್ಬದ ಸಂಭ್ರಮ ಹಾಗೂ ಅದರ ಉತ್ಸವದ ಕುರಿತು ಮಾತನಾಡಿದ ವಿರಾಟ್ ಕೊಹ್ಲಿ ‘ದೀಪಾವಳಿ ಸಮಯದಲ್ಲಿ ಧನ್ತರಸ್ ನಿಂದ ಹಿಡಿದು ಭಾಯಿ ದೂಜ್ ನವರೆಗೆ ಸ್ನೇಹಿತರು ಹಾಗೂ ಕುಟುಂಬದವರ ಜತೆ ಸಂತಸದಿಂದ ಕಳೆದ ಕ್ಷಣ ಈಗಲೂ ನೆನಪಿನಲ್ಲಿದೆ. ಹಾಗೇ ಈ ಹಬ್ಬದ ಸಮಯದಲ್ಲಿ ನಾನು ಎಥ್ನಿಕ್ ಉಡುಗೆಯನ್ನೇ ಧರಿಸುತ್ತಿದ್ದೆ. ಎಥ್ನಿಕ್ ಉಡುಪು ಧರಿಸುವುದರಿಂದ ಹಬ್ಬದ ಕಳೆ ಬಂದ ಹಾಗೇ ಆಗುತ್ತದೆ. ಹಾಗೇ ಇದು ಖುಷಿಯನ್ನು ನೀಡುತ್ತದೆ. ಇನ್ನು ಈ ಅಭಿಯಾನದ ಶೂಟಿಂಗ್ ವೇಳೆ ನನಗೆ ವೈಯಕ್ತಿಕವಾಗಿ ಇಷ್ಟವಾದದ್ದು ಗೋಲ್ಡನ್ ವರ್ಕ್ ಇರುವ ರಾಯಲ್ ಬ್ಲೂ ಕುರ್ತಾ ಜಾಕೆಟ್ ‘ ಎಂದು ದೀಪಾವಳಿ ಹಬ್ಬ ಹಾಗೇ ಎಥ್ನಿಕ್ ವೇರ್ ನ ಕುರಿತು ವಿರಾಟ್ ಹೇಳಿಕೊಂಡರು.
ಸಾಮಾಜಿಕ ಜಾಲತಾಣದಲ್ಲಿ ವಿರಾಟ್ ಈ ಪ್ರಚಾರದ ಕುರಿತು ಹೇಳಿದ್ದಾರೆ. ದನ್ತರಸ್, ಚೋಟಿ ದೀಪಾವಳಿ, ದೀಪಾವಳಿ, ಮಿನಿ ಹಾಗೂ ಭಾಯಿ ದೂಜ್ ದೀಪಾವಳಿಯ ಈ ಐದು ವಿಶೇಷ ದಿನಗಳಲ್ಲಿ ಎಥ್ನಿಕ್ ವೇರ್ ಧರಿಸಿ ಎಂದು ಅವರು ಎಲ್ಲರಿಗೂ ಹೇಳಿದರು.
ಈ ಎಥ್ನಿಕ್ ವೀಕ್ ವಿಚಾರದ ಕುರಿತು ನನ್ನ ಬಳಿ ಹೇಳಿದಾಗ ನನಗೆ ತುಂಬಾ ಖುಷಿಯಾಯಿತು. ದೀಪಾವಳಿಯ ಆ ವಾರವಿಡೀ ಎಥ್ನಿಕ್ ಧಿರಿಸುಗಳನ್ನು ಧರಿಸುವುದು ಒಂದು ಒಳ್ಳೆಯ ಸಂಗತಿ ಹಾಗಾಗಿ ನಾನು ತಕ್ಷಣವೇ ಒಪ್ಪಿಕೊಂಡೆ. ಈ ಎಥ್ನಿಕ್ ವೀಕ್ ಯಶಸ್ವಿಯಾಗಲು ಎಲ್ಲಾ ಯುವಕರು ಕೂಡ ಕೈಜೋಡಿಸಬೇಕು ಎಂದಿದ್ದಾರೆ ವಿರಾಟ್.
ದೀಪಾವಳಿ ಇದು ಒಂದು ದಿನಕ್ಕೆ ಸಂಬಂಧಪಟ್ಟಿದ್ದಲ್ಲ. ಈ ಹಬ್ಬ ಶುರುವಾಗುವ ಮೊದಲೇ ಇದರ ತಯಾರಿ ನಡೆಸಲಾಗುತ್ತದೆ. ದನ್ತರಸ್ ನಿಂದ ದೀಪವಾಳಿ ನಂತರ ಭಾಯಿ ದೂಜ್ ವರೆಗೆ ಈ ಹಬ್ಬದ ಸಂಭ್ರಮವಿದೆ. ಪ್ರತಿ ದಿನವೂ ಅದರದ್ದೇ ಆದ ಸಂಪ್ರದಾಯ ಧಾರ್ಮಿಕ ಆಚರಣೆ, ಸಾಮಾಜಿಕ ಸಂಪ್ರದಯ, ಸಂಭ್ರಮವನ್ನು ಹೊಂದಿದೆ. ಹಾಗಾಗಿ ಎಥ್ನಿಕ್ ಉಡುಪುಗಳನ್ನು ಧರಿಸುವ ಮೂಲಕ ಈ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಬಹುದು.ಪ್ರಚಾರದ ವೇಳೆ ‘ದೀಪಾವಳಿಯ ನಿಜವಾದ ಮಜಾ ಇರುವುದು ಎಥ್ನಿಕ್ ವೇರ್ ನಿಂದ ಬರುತ್ತದೆ’ ಎಂದು ವಿರಾಟ್ ಹೇಳುತ್ತಾರೆ.









