ಮಿನಿ ಸಮರದಲ್ಲಿ ಮೈತ್ರಿ ಸರ್ಕಾರಕ್ಕೆ ಮತದಾರರ ಮನ್ನಣೆ:ಮುದುಡಿದ ಕಮಲ

0
212

ಬೆಂಗಳೂರು: ರಾಜ್ಯದ ಐದು ಕ್ಷೇತ್ರಗಳಲ್ಲಿ ನಡೆದ ಮಿನಿ ಸಮರದಲ್ಲಿ ಮೈತ್ರಿ ಸರ್ಕಾರಕ್ಕೆ ಫಲಿತಾಂಶದ ಮೂಲಕ ಜನ ಬೆಂಬಲ ನೀಡಿದ್ದು ನಾಲ್ಕು‌ ಕ್ಷೇತ್ರಗಳು ಮೈತ್ರಿ ತೆಕ್ಕೆಗೆ ಬಂದಿದ್ದು ಯಡಿಯೂರಪ್ಪ ತವರಲ್ಲಿ ಮಾತ್ರ ಪ್ರಯಾಸದಿಂದ ಕಮಲ ಅರಳಿದೆ.

ನಿರೀಕ್ಷೆಯಂತೆ ಮಂಡ್ಯ ಲೋಕಸಭೆ ಹಾಗು ರಾಮನಗರ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯ ಪ್ರತಿರೋಧ ಇಲ್ಲದೆಯೇ ಮೈತ್ರಿ ಸರ್ಕಾರದ ಒಮ್ಮತದ ಅಭ್ಯರ್ಥಿಯಾಗಿ ಮಂಡ್ಯದಿಂದ ಸ್ಪರ್ಧಿಸಿದ್ದ ಶಿವರಾಮೇಗೌಡ ಮತ್ತು ರಾಮನಗರದಲ್ಲಿ ಜೆಡಿಎಸ್ ನಿಂದ ಕಣಕ್ಕಿಳಿದಿದ್ದ ಅನಿತಾ ಕುಮಾರಸ್ವಾಮಿ ಭರ್ಜರಿ ಜಯಭೇರಿ ಬಾರಿಸಿದ್ದಾರೆ.

ಬಳ್ಳಾರಿಯಲ್ಲಿ ಮೈತ್ರಿ ಅಭ್ಯರ್ಥಿ ಕಾಂಗ್ರೆಸ್ ನ ವಿ.ಎಸ್.ಉಗ್ರಪ್ಪ ದಾಖಲೆಯ ಗೆಲಿವಿನ ನಗೆ ಬೀರಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ್ದು ಶ್ರೀರಾಮುಲು ರೆಡ್ಡಿಕೋಟೆ ಬೇಧಿಸಿ ಅಧಿಪತ್ಯ ಸಾಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಜಮಖಂಡಿಯನ್ನು ಕಾಂಗ್ರೆಸ್ ಉಳಿಸಿಕೊಂಡಿದೆ ಸಿದ್ದುನ್ಯಾಮಗೌಡ ಪುತ್ರ ಆನಂದ್ ನ್ಯಾಮಗೌಡ ಹೆಚ್ಚಿನ ಅಂತರದಿಂದ ಗೆದ್ದಿದ್ದು ಬಿಜೆಪಿ ತೀವ್ರ ಮುಖಭಂಗವಾಗುವಂತೆ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾತ್ರ ಕಮಲ ಅರಳಿದೆ, ಅದೂ ಕೂಡ ಜೆಡಿಎಸ್ ನ ಮಧು ಬಂಗಾರಪ್ಪ ತೀವ್ರ ಪೈಪೋಟಿ ನೀಡಿದ್ದು ಮತಗಳ ಅಂತರವನ್ನು ಬಿಜೆಪಿ ಕಳೆದುಕೊಳ್ಲಕುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಬಿಜೆಪಿ ಗೆದ್ದರೂ ಕೂಡ ಕೊನೆ ಕ್ಷಣದವರೆಗೂ ಆತಂಕದಿಂದಲೇ ಕಾಯುವಂತೆ ಮಾಡಿ ಒಂದು ಕ್ಷಣ ಬಿಜೆಪಿ ಪಾಳಯವನ್ನು ಅಲ್ಲಾಡಿಸಿದ್ದಂತು ಸುಳ್ಳಲ್ಲ.

- Call for authors -

LEAVE A REPLY

Please enter your comment!
Please enter your name here