ಬೆಂಗಳೂರು: ಬಿಜೆಪಿ ನಾಯಕರು ಇನ್ನೂ ಆಪರೇಷನ್ ಕಮಲದ ಯತ್ನವನ್ನು ಬಿಟ್ಟಿನಲ್ಲಿ ಕೋಟಿ ಕೋಟಿ ರೂ.ಗಳ ಆಮಿಷ ಒಡ್ಡಿ ನಮ್ಮ ಶಾಸಕರನ್ನು ಸೆಳೆಯುವ ವ್ಯರ್ಥ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಬಗ್ಗೆ ಆಗಲೇ ತೀರ್ಮಾನಿಸಿದ್ದೇವೆ ಎರಡೂ ಪಕ್ಷದ ನಾಯಕರು ಚರ್ಚಿಸಿ ಸೀಟು ಹಂಚಿಕೆ ಮಾಡುತ್ತಾರೆ ೨೮ ಸ್ಥಾನ ಗೆಲ್ಲುವುದು ನಮ್ಮ ಗುರಿ ಎರಡು ಸ್ಥಾನ ಗೆದ್ದಿದ್ದೇವೆ ಅಂತ ಮೈಮರೆಯಲ್ಲ ನಮ್ಮ ಜವಬ್ದಾರಿಯನ್ನ ಜನ ಹೆಚ್ಚಿಸಿದ್ದಾರೆ ಜವಬ್ದಾರಿಯಿಂದ ನಾವು ಮತ್ತಷ್ಟು ಪ್ರಬಲಗೊಳಿಸುತ್ತೇವೆ ಸರ್ಕಾರ ಇನ್ನಷ್ಟು ಜನಪರ ಯೋಜನೆ ತರುತ್ತೇವೆ ಎಂದ್ರು.
ಮಂಡ್ಯ ಹಾಗೂ ಬಳ್ಳಾರಿಯಲ್ಲಿ ದಾಖಲೆಯ ಜಯ ಸಿಕ್ಕಿದೆ
ಶಿವಮೊಗ್ಗದಲ್ಲಿ ಕೊನೆಯ ಹಂತದಲ್ಲಿ ಜೆಡಿಎಸ್ ಅಭ್ಯರ್ಥಿ ತೀರ್ಮಾನ ಆಯ್ತು ಕೊನೆಯ ಹಂತದಲ್ಲಿ ಚುನಾವಣೆ ಸಿದ್ದತೆ ಮಾಡಿಕೊಂಡಿದ್ದೆವು.ಶಿವಮೊಗ್ಗದಲ್ಲಿಸೋತಿರಬಹುದು ಆದ್ರೆ ನೈತಿಕವಾಗಿ ಗೆದ್ದಿದ್ದೇವೆ,ಮೊದಲೇ ಅಭ್ಯರ್ಥಿ ತೀರ್ಮಾನ ಆಗಿದಿದ್ರೆ ಶಿವಮೊಗ್ಗದಲ್ಲೂ ಗೆಲ್ಲುತ್ತಿದ್ದೆವು,ಶಿವಮೊಗ್ಗ, ಜಮಖಂಡಿ ಹಾಗೂ ರಾಮನಗರದ ಜನತೆಗೆ ಎರಡೂ ಪಕ್ಷದ ವತಿಯಿಂದ ಅಭಿನಂಧನೆ ಸಲ್ಲಿಸುತ್ತೇನೆ ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ, ಡಿಸಿಎಂ ಪರಮೇಶ್ವರ್, ಡಿಕೆಶಿ, ದಿನೇಶ್ ಗುಂಡೂರಾವ್ ಸೇರಿ ಎಲ್ಲರೂ ಗೆಲುವಿಗೆ ಕಾರಣರಾಗಿದ್ದಾರೆವೈಯಕ್ತಿಕವಾಗಿ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಅಭಿನಂಧನೆ ಸಲ್ಲಿಸುತ್ತೇನೆ ಎಂದ್ರು.
ಮೈತ್ರಿ ಸರ್ಕಾರದ ಬಗ್ಗೆ ಬಿಜೆಪಿ ನಾಯಕರು ಅಪವಿತ್ರ ಮೈತ್ರಿ ಅಂತಿದ್ರು ಅಧಿಕಾರಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಅಂತ ಬಿಜೆಪಿ ನಾಯಕರು ಮಾತನಾಡ್ತಿದ್ರು ನಾಲ್ಕು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಸಮ್ಮಿಶ್ರ ಸರ್ಕಾರಕ್ಕೆ ಜನ ಆಶೀರ್ವಾದ ಮಾಡಿದ್ದಾರೆ ಎಂದು ತಿರುಗೇಟು ನೀಡಿದ್ರು.
ಲೋಕಸಭೆಯಲ್ಲಿ ಸೀಟು ಹೊಂದಾಣಿಕೆ ಪ್ರಾಮಾಣಿಕವಾಗಿ ೯ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಹಾಕಲು ಈಗಾಗಲೇ ತೀರ್ಮಾನ ಆಗಿದೆ ೨೮ ಕ್ಕೆ ೨೮ ಕ್ಷೇತ್ರಗಳನ್ನ ಗೆಲ್ಲಲು ಪ್ರಾಮಾಣಿಕ ಪ್ರಯತ್ನ ಮಾಡ್ತೀವಿ ಸೋಲು ಗೆಲುವು ಸಹಜ ನಮ್ಮ ಜವಾಬ್ದಾರಿಯನ್ನ ಇನ್ನೂ ಸಮರ್ಪಕವಾಗಿ ನಿರ್ವಹಣೆ ಮಾಡಲಿ ಅಂತ ಜನ ಆಶೀರ್ವಾದ ಮಾಡಿದ್ದಾರೆ ಎಂದ್ರು.
ಸಮ್ಮಿಶ್ರ ಸರ್ಕಾರದ ಯೋಜನೆಗಳ ಫಲ ಇನ್ನೂ ಜನರಿಗೆ ತಲುಪಿಲ್ಲ ಸಮಯವಕಾಶದ ಕೊರತೆಯಿಂದ ಯೋಜನೆಗಳು ತಲುಪಿಲ್ಲ ರೈತರ ಸಾಲ ಮನ್ನಾ, ಬಡವರ ಬಂಧು ಯೋಜನೆಗಳಿಗೆ ಚಾಲನೆ ನೀಡಿದ್ದೇವೆ ಇದೇ ತಿಂಗಳಿಂದ ಯೋಜನೆಗಳು ಕಾರ್ಯಾರಂಭ ಮಾಡುತ್ತೇವೆ ಗೆಲುವು ಸಿಕ್ಕಿದೆ ಅಂತ ಮೈಮರೆತು ಹೋಗಲ್ಲ ಎಂದ್ರು.
ಆಕ್ಸಿಸ್ ಬ್ಯಾಂಕ್ ನಿಂದ ರೈತರಿಗೆ ನೋಟೀಸ್ ನೀಡಿರುವ ಅಂಶ ಗಮನಕ್ಕೆ ಬಂದಿದೆ ಅವರೊಂದಿಗೆ ಮಾತನಾಡಿದ್ದೇವೆ ನೋಟೀಸ್ ಹಿಂಪಡೆದುಕೊಳ್ಳಲು ಬ್ಯಾಂಕ್ ನವರು ಒಪ್ಪಿದ್ದಾರೆ ಒಂದೇ ಕಂತಿನಲ್ಲಿ ಹಣ ಪಾವತಿಗೆ ಒಪ್ಪಿದ್ದಾರೆ. ೪೪ ಲಕ್ಷ ರೈತ ಕುಟುಂಬಗಳಿಗೆ ಸಾಲ ಮನ್ನಾ ಸೌಲಭ್ಯ ಸಿಗಲಿದೆ. ಬೆಳೆ ಸಾಲ ಹೊರತು ಪಡಿಸಿ, ಬೇರೆ ರೀತಿಯ ಸಾಲ ಪಡೆದು ಮರುಪಾವತಿ ಮಾಡದಿದ್ದಾಗ ಕ್ರಿಮಿನಲ್ ಕೇಸ್ ಹಾಕಲು ಸಾಧ್ಯವಿಲ್ಲ ಯಾವುದೇ ಬ್ಯಾಂಕ್ ಉದ್ದಟತನದಿಂದ ನಡೆದುಕೊಂಡ್ರೆ ಸರಕಾರ ಕ್ರಮ ಕೈಗೊಳ್ಳುತ್ತೆ ಈ ನಿಟ್ಟಿನಲ್ಲಿ ಮೂವತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದ್ರು.
ಟಿಪ್ಪು ಜಯಂತಿ ವಿರುದ್ದ ವಿರೋಧವಾಗಿ ನಾನು ಮಾತಮಾಡೇ ಇಲ್ಲ ಹಿಂದೆ ಬಿಜೆಪಿ ನಾಯಕರಿಗೆ ಯಾಕೆ ವಿರೋಧ ಮಾಡ್ತೀರಿ ಅಂದಿದ್ದೆ ಸಮಾಜಕ್ಕೆ ಕೊಡುಗೆ ಕೊಟ್ಟವರಿಗೆ ಜಯಂತಿ ಮಾಡಿದ್ರೆ ತಪ್ಪೇನು ಇಲ್ಲ ಇದಕ್ಕೆ ಯಾಕೆ ವಿರೋಧ ಮಾಡ್ತೀರಾ ಅಂತ ಬಿಜೆಪಿ ನಾಯಕರಿಗೆ ಹೇಳಿದ್ದೆ ಜೆಡಿಎಸ್ ಕಚೇರಿಯಲ್ಲಿ ಎಷ್ಟೋ ಭಾರಿ ಟಿಪ್ಪು ಜಯಂತಿ ಆಚರಣೆ ಮಾಡಿದ್ದೇವೆ ಟಿಪ್ಪು ಜಯಂತಿ ಆಚರಣೆ ಮಾಡಿಲ್ಲ ಅಂದ್ರೆ ನೀವು ಮನೆಯಲ್ಲಿರಿ ಟಿಪ್ಪು ಜಯಂತಿ ವೇಳೆ ಸಾರ್ವಜನಿಕ ಆಸ್ತಿ ಪಾಸ್ತಿಗೆ ನಷ್ಟ ಉಂಟು ಮಾಡಿದ್ರೆ ಕಠಿಣ ಕ್ರಮ ಶಾಂತಿಯುತವಾಗಿ ಯಾರು ಬೇಕಾದ್ರು ಪ್ರತಿಭಟನೆ ಮಾಡಿಕೊಳ್ಳಲಿ ಎಂದು ಎಚ್ಚರಿಕೆ ನೀಡಿದ್ರು.
ಸರ್ಕಾರ ರಚನೆ ಆದಾಗಿನಿಂದ ಗಡುವು ಕೊಡ್ತಿದ್ದಾರೆ.ಅಂತಹ ಗಡುವಿಗೆ ಮನ್ನಣೆ ಕೊಡಲ್ಲ ಬಿಜೆಪಿಯವರು ವ್ಯರ್ಥ ಕಸರತ್ತು ಪ್ರತೀದಿನ ಮಾಡ್ತಿದ್ದಾರೆ ನೆನ್ನೆ ಕೂಡ ನಮ್ಮ ಶಾಕರನ್ನ ಸಂಪರ್ಕ ಮಾಡಿದ್ದಾರೆ ಅವರು ನನಗೆ ಎಲ್ಲಾ ಮಾಹಿತಿ ನೀಡಿದ್ದಾರೆ
ಜೆಡಿಎಸ್ ಪಕ್ಷದ ನಿಷ್ಠಾವಂತ ಶಾಸಕರಿಗೆ ಆಮೀಷ ಕೊಡ್ತಿದ್ದಾರೆ
ಬಿಜೆಪಿಯವರಿಗೆ ಕೋಟಿಗಳಂದ್ರೆ ಲೆಕ್ಕ ಇಲ್ಲ ಎಂದು ಆರೋಪಿಸಿದ್ರು.









