ಬೆಂಗಳೂರು: ಬಳ್ಳಾರಿ ಲೋಕಸಭಾ ಕ್ಷೇತ್ರದ ಉಪ ಚುನಾವಣಾ ಪ್ರಚಾರದ ವೇಳೆ ನಾನು ಬಾಂಬ್ ಹಾಕ್ತೀನಿ ಎಂದು ಪ್ರಚಾರ ಆಯ್ತು ಆದರೆ ಬಳ್ಳಾರಿ ಅಭಿವೃದ್ದಿಯೇ ನನ್ನ ಬಾಂಬ್ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್,ಶ್ರೀರಾಮುಲು ಅಣ್ಣಗೆ ಅಭಿನಂದನೆ ಬಹಳ ಶಾಂತ ರೀತಿಯಿಂದ ರಾಮುಲು ಚುನಾವಣೆ ಎದುರಿಸಿದ್ದಾರೆ
ಅವರು ಸೋತಿರಬಹುದು. ಆದರೆ ಅದು ಮುಖ್ಯ ಅಲ್ಲ ಎಂದು ಕುಟುಕಿದ್ರು.
ಕಾರ್ಯಕರ್ತರು, ಜನರಿಗೆ ತೊಂದರೆಯಾಗದ ರೀತಿಯಲ್ಲಿ ಚುನಾವಣೆ ನಡೆದಿದೆಪಕ್ಷ, ಜಾತಿ, ಧರ್ಮ ಬಿಟ್ಟು ಮತದಾರರು ಬೆಂಬಲಿಸಿದ್ದಾರೆ, ನಾವು ಗೆದ್ದಿದ್ದೇವು ಎಂದು ಹಿಗ್ಗಲ್ಲ ಇದು ಐದು ತಿಂಗಳಿಗಾಗಿ ನಡೆದ ಚುನಾವಣೆ ಆದರೆ ಐದು ವರ್ಷದ ಗುರಿಯಿಟ್ಟೇ ಚುನಾವಣೆ ನಡೆಸಿದ್ವಿ ನಾನು ಬಾಂಬ್ ಹಾಕ್ತೀನಿ ಎಂದು ಪ್ರಚಾರ ಆಯ್ತು ಅಭಿವೃದ್ದಿಯೇ ನನ್ನ ಬಾಂಬ್ ಬಳ್ಳಾರಿ ದೂಳು ಮುಕ್ತ ಆಗಬೇಕು ಉದ್ಯೋಗ, ನೀರು ಕೊಡುವುದು ನಮ್ಮ ಮುಂದಿರೋ ಸವಾಲು ಎಂದ್ರು.
ಚುನಾವಣೆ ಗೆಲುವು ರಾಹುಲ್ ಗೆ ಸಮರ್ಪಣೆ ಮಾಡುತ್ತೇನೆ,
ಎಲ್ಲಾ ಶಾಸಕರು, ಸಿದ್ದರಾಮಯ್ಯ, ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷರು ನನಗೆ ಜವಾಬ್ದಾರಿ ನೀಡಿದ್ದರು. ಅವರೆಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದ್ರು.









