ಬೆಂಗಳೂರು,18: ಕೈಗಾರಿಕೆ, ಐಟಿ ಹಾಗೂ ಸ್ಟಾರ್ಟ್ಅಪ್ಗಳ ಬೆಳವಣಿಗೆಗೆ ರಾಜ್ಯ ಸರಕಾರ ಪ್ರತ್ಯೇಕ ಪಾಲಿಸಿ ತರುವ ಮೂಲಕ ಪ್ರೋತ್ಸಾಹ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಐಟಿಬಿಟಿ ಸಚಿವ ಡಾ.ಜಿ. ಪರಮೇಶ್ವರ ಹೇಳಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ವತಿಯಿಂದ ಶಾಂಗ್ರಿಲಾ ಹೋಟೆಲ್ನಲ್ಲಿ ಆಯೋಜಿಸಿದ್ದ ಚೀನಾ ಮಾದರಿಯಲ್ಲಿ ಕೈಗಾರಿಕಾ ಕ್ಲಸ್ಟರ್ ಅಭಿವೃದ್ಧಿ, ಕೊಪ್ಪಳ ಟಾಯ್ ಕ್ಲಸ್ಟರ್ ಮತ್ತು ಬಳ್ಳಾರಿ ಕ್ಲಸ್ಟರ್ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಸ್ಟಾರ್ಟ್ಅಪ್ನಲ್ಲಿ ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಬೆಂಗಳೂರು ಸಿಟಿ ಎರಡನೇ ಸ್ಥಾನದಲ್ಲಿದೆ. ದೇಶದಲ್ಲಿನ 13 ಸಾವಿರ ಸ್ಟಾರ್ಟ್ಅಪ್ಸ್ನಲ್ಲಿ 8 ಸ್ಟಾರ್ಟ್ಅಪ್ಸ್ ಬೆಂಗಳೂರಿನಲ್ಲಿಯೇ ಇವೆ. ಸ್ಟಾರ್ಟ್ಅಪ್ ಪಾಲಿಸಿದ ತಂದ ಮೊದಲ ಸರಕಾರ ಕೂಡ ನಮ್ಮದೇ ಎಂದು ಹೇಳಿದರು.
ಕರ್ನಾಟಕ ಸರಕಾರ ಉತ್ತಮಆಡಳಿತದ ಜೊತೆಗೆ ಅಭಿವೃದ್ಧಿಯ ಗುರಿ ಹೊಂದಿದ್ದೇವೆ. ಸ್ಟಾರ್ಟ್ಅಪ್, ಕೈಗಾರಿಕೆ, ಐಟಿ-ಬಿಟಿಗಳ ಬೆಳವಣಿಗೆಗೆ ನಮ್ಮಸರಕಾರ ಎಲ್ಲರೀತಿಯ ಸೌಕರ್ಯ ನೀಡಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಯುವಜನತೆಗೆ ಉದ್ಯೋಗ ಸೃಷ್ಟಿಸುವ ಕೆಲಸವಾಗಬೇಕು ಎಂದರು.
20 ವರ್ಷಗಳಲ್ಲಿ ಬೆಂಗಳೂರು ಐಟಿ ರಾಜಧಾನಿಯಾಗಿ ಬೆಳೆದು ನಿಂತಿದೆ. ಇದಕ್ಕೆ ಸರಕಾರದ ಹಾಗೂ ರಾಜಕೀಯದ ಬೆಂಬಲ ಇಲ್ಲದಿದ್ದರೆ ಐಟಿ ರಾಜಧಾನಿಯಾಗಲು ಸಾಧ್ಯವಿರುತ್ತಿರಲಿಲ್ಲ ಎಂದರು.
ಕೈಗಾರಿಕಾ ಕ್ಷೇತ್ರದಲ್ಲಿ ಕರ್ನಾಟಕ ಶೇ.17 ರಷ್ಟು ಜಿಡಿಪಿ ಹೊಂದಿದ್ದು,. 4ನೇ ಅತಿದೊಡ್ಡ ಕ್ಲಸ್ಟರ್ ಆಗಿದೆ. 2010-11 ರಲ್ಲಿ ವಿದೇಶಿ ಹೂಡಿಕೆ ಪ್ರಮಾಣ 8.2 ಬಿಲಿಯನ್ ಡಾಲರ್ಸ್ ಇದದ್ದು, ಪ್ರಸಕ್ತ ಸಾಲಿನಲ್ಲಿ 32.7 ಬಿಲಿಯನ್ ಡಾಲರ್ಸ್ಗೆ ಏರಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇದ್ದರು.









