ಬೆಂಗಳೂರು: ಒಂದೇ ರಾತ್ರಿ ನಾಲ್ಕು ಕಡೆ ಅಂಗಡಿಗಳ ಶೆಟರ್ ಮುರಿದು ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅನ್ನಪೂರ್ಣೇಶ್ವರಿ ನಗರದ ಶ್ರೀಗಂಧ ಕಾವಲ್’ನ ಡಿ ಬ್ಲಾಕ್ ನಲ್ಲಿ ಜೂನ್ 2 ರ ತಡರಾತ್ರಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೊದಲು ಮೆಡಿಕಲ್ ಸ್ಟೋರ್ ಒಂದರ ಶೆಟರ್ ಮುರಿದು ಕಳ್ಳರು ಒಳ ನುಗ್ಗುತ್ತಾರೆ. ನಂತರ ಮೆಡಿಕಲ್ ಸ್ಟೋರ್’ನ ಒಳಗೆ ಹಣ ಸಿಗದಿದ್ದಾಗ ಕಳ್ಳರು ಔಷಧಿಗಳನ್ನು ಬಿಸಾಡಿದ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿವೆ.
ನಂತರ ಮೆಡಿಕಲ್ ಸ್ಟೊರ್ ಪಕ್ಕದ ಎಂ.ಆರ್.ಡಿಜಿಟಲ್ ಸ್ಟುಡಿಯೋ ಶೆಟರ್ ಮುರಿದು ಒಳನುಗ್ಗುತ್ತಾರೆ.
ಸ್ಟುಡಿಯೋದಲ್ಲಿ ಬೆಲೆಬಾಳುವ ನಿಕಾನ್ ಹಾಗೂ ಕ್ಯಾನನ್ ಎರಡು ಕ್ಯಾಮೆರಾ, ಲೆನ್ಸ್ ಗಳನ್ನು ಹೊತ್ತೊಯ್ದಿದ್ದಾರೆ.
ಘಟನೆ ಸಂಬಂಧ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಸ್ಟುಡಿಯೋ ಮಾಲೀಕ ದೂರು ದಾಖಲಿದ್ದು,
ಮೆಡಿಕಲ್ ಸ್ಟೋರ್ ನಲ್ಲಿ ಯಾವುದೇ ವಸ್ತು, ಹಣ ಕಳುವಾಗದ ಹಿನ್ನಲೆ ಮೆಡಿಕಲ್ ಸ್ಟೋರ್ ಮಾಲೀಕ ಯಾವುದೇ ದೂರು ದಾಖಲು ಮಾಡಿಲ್ಲ.
ಸದ್ಯ ಆರೋಪಿಗಳ ಪತ್ತೆಗಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.









