ಬೆಂಗಳೂರು: ರಾಜ್ಯದ ರೆಡ್ ಜೋನ್ ಹಾಗು ಕಂಟೈನ್ ಜೋನ್ ಹೊರತುಪಡಿಸಿ ನಾಳೆಯಿಂದ ಮಾಲ್,ಸಿನಿಮಾ,ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ಮುಂಗಟ್ಟು ತೆರೆಯಲಿದ್ದು ಜಿಲ್ಲೆಯೊಳಗೆ ಸಾರ್ವಜನಿಕ ಸಮೂಹ ಸಾರಿಗೆ ಸಂಚಾರಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ವಿಧಾನಸೌಧದಲ್ಲಿ ಸಂಪುಟ ಸಹೋದ್ಯೋಗಿಗಳ ಜೊತೆ ಸಭೆ ನಡೆಸಿದ ನಂತರ ಮಾಧ್ಯಮ ಗೋಷ್ಟಿ ನಡೆಸಿದ ಸಿಎಂ ಲಾಕ್ ಡೌನ್ ಮೇ 31 ರವರೆಗೆ ಮುಂದುವರಿಕೆ ಮಾಡುತ್ತಿದ್ದು ಯಾವುದಕ್ಕೆಲ್ಲಾ ಅವಕಾಶ ನೀಡಬೇಕು ಎಂದು ವಿವರ ನೀಡಿದರು.
ಯಾವುದಕ್ಕೆಲ್ಲಾ ಅವಕಾಶ:
ಕಂಟೈನ್ ಮೆಂಟ್ ಜೀನ್ ಬಿಗಿ ಭದ್ರತೆ,ಕಾನೂನು ಬಾಹಿರ ವರ್ತನೆಗೆ ಕ್ರಿಮಿನಲ್ ಕೇಸ್ ದಾಖಲು
ಜನರ ಸಂಚಾರಕ್ಕೆ ಅನುಕೂಲವಾಗಲು ಬಿಎಂಟಿಸಿ ಕೆಎಸ್ಆರ್‌ಟಿಸಿ, ಈಶಾನ್ಯ,ವಾಯುವ್ಯ ನಿಗಮ ಬಸ್ ಗಳ ಸಂಚಾರಕ್ಕೆ ಅವಕಾಶ
ರೆಡ್ ಜೋನ್, ಕಂಟೈನ್ ಮೆಂಟ್ ಜೋನ್ ಬಿಟ್ಟು ಉಳಿದ ಕಡೆ ನಾಳೆ ಬೆಳೆಗ್ಗೆಯಿಂದ ಬಸ್ ಸಂಚಾರ ಆರಂಭ.
ಖಾಸಗಿ ಬಸ್ ಗಳ ಸಂಚಾರಕ್ಕೂ ಅವಕಾಶ, ಬಸ್ ನಲ್ಲಿ 30 ಪ್ರಯಾಣಿಕರು ಸೀಮಿತ
ಎಲ್ಲಾ ಕಡೆ ಮಾಸ್ಕ್ ಕಡ್ಡಾಯ, ಉಲ್ಲಂಘಿಸಿದರೆ ದಂಡ
ಹೊರರಾಜ್ಯದಿಂದ ಬರುವವರಿಗೆ ಹಂತ ಹಂತವಾಗಿ ಸಾಂಸ್ಥಿಕ ಕ್ವಾರಂಟೈನ್ ಮುಂದುವರಿಕೆ.
ಆಟೋ,ಟ್ಯಾಕ್ಸಿ ಗಳಲ್ಲಿ ಒನ್ ಪ್ಲಸ್ ಟು, ಕ್ಯಾಬ್ ಒನ್ ಪ್ಲಸ್ ತ್ರೀಯಂತೆ ನಾಳೆಯಿಂದ ಸೇವೆಗೆ ಅನುಮತಿ.
ನಾಳೆಯಿಂದ ಮಾಲ್,ಸಿನಿಮಾ,ಹೋಟೆಲ್ ಬಿಟ್ಟು ಎಲ್ಲಾ ಅಂಗಡಿ ತೆರೆಯಬಹುದು.
ರೈಲು ರಾಜ್ಯದ ಒಳಗೆ ಸಂಚಾರ ಮಾಡಬಹುದು, ಹೊರ ರಾಜ್ಯದ ರೈಲಿಗೆ ಅವಕಾಶ ನೀಡಲ್ಲ.
ಸಲೂನ್ ಶಾಪ್ ತೆರೆಯಬಹುದು.
ಪ್ರತಿ ಭಾನುವಾರ ಕಂಪ್ಲೀಟ್ ಲಾಕ್ ಡೌನ್, ಯಾವುದೇ ಅಂಗಡಿ ತೆಗೆಯುವಂತಿಲ್ಲ,ಸಂಚಾರವೂ ನಿರ್ಬಂಧ
ಬೆಳಗ್ಗೆ 7-9 ಸಂಜೆ 5-7 ರವರೆಗೆ ಎಲ್ಲಾ ಪಾರ್ಕ್ ಗಳಲ್ಲಿ ಜನರ ಸಂಚಾರಕ್ಕೆ ಅವಕಾಶ.
ಪಾನಿಪೂರಿ ಸೇರಿ ಬೀದಿಬದಿ ವ್ಯಾಪಾರಕ್ಕೂ ಸಮ್ಮತಿ
ಬಸ್ ಪ್ರಯಾಣದರ ಜಾಸ್ತಿ ಮಾಡಲ್ಲ, ನಷ್ಟವನ್ನು ಸರ್ಕಾರ ಭರಿಸಲಿದೆ.








