ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಕೈ ನಾಯಕರ ಪ್ರತಿಭಟನೆ

0
1

ಬೆಂಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಸರ್ಕಾರದ ವಿರುದ್ದ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು. ವಿಧಾನ ಸೌಧ, ವಿಕಾಸ ಸೌಧದ ಮದ್ಯದಲ್ಲಿರೋ ಗಾಂಧಿ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ದೇಶದ ಜನರಿಗೆ ನರೇಂದ್ರ ಮೋದಿ ಸರ್ಕಾರ ವಂಚಿಸುತ್ತಿದೆ,  ಕಾರ್ಮಿಕರಿಗೆ, ರೈತರಿಗೆ ವಂಚಿಸುತ್ತಿದೆ. ಬಿಜೆಪಿ, ನರೇಂದ್ರ ಮೋದಿ ಹಠಾವೋ,  ಭಾರತ್ ಬಚಾವೋ ಎಂದು ಘೋಷಣೆ ಘೋಷಣೆ ಕೂಗಿದ್ರು.

ಪ್ರತಿಭಟನೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಧಾನ ಮಂತ್ರಿಗಳು 20 ಲಕ್ಷ ಕೋಟಿ ಘೋಷಣೆ ‌ಮಾಡಿದ್ದಾರೆ. ಇದನ್ನ ಆರ್ಥಿಕ ತಜ್ಞ ರು ಬೊಗಸ್ ಪ್ಯಾಕೇಜ್ ಘೋಷಣೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಬ್ಯಾಂಕ್ ನಲ್ಲಿ ಸಾಲ ಕೊಡಲು ಇವರೇ ಬೇಕಾಗಿಲ್ಲ. ವಿದ್ಯುತ್ ಕಂಪನಿಗಳಿಗೆ ಗ್ರಾಂಟ್ ಕೊಟ್ಟಿದ್ದಾರಾ..? ಯಾವುದೇ ರೀತಿಯಲ್ಲಿ ಸಹಾಯ ಮಾಡದೆ ಎಲ್ಲಾವನ್ನು ತಿರುಚಿದ್ದಾರೆ. ಇಂದು ಕೇಂದ್ರ, ರಾಜ್ಯ ಸರ್ಕಾರ ವಿಫಲಗೊಂಡಿವೆ. ಕಾರ್ಮಿಕರು, ಕಟ್ಟಡ ಕಾರ್ಮಿಕ , ರೈತರು ಬೀದಿಪಾಲಗಿದ್ದಾರೆ. ರಾಜ್ಯದಲ್ಲಿ ಪಂಚಾಯಿತಿ ಎಲೆಕ್ಷನ್ ಮಾಡಲ್ವಂತೆ. ಅವರ ಪಕ್ಷದ ಕಾರ್ಯಕರ್ತರನ್ನ ಮುನ್ನಡೆಸಲು ಇವರು ಹುನ್ನಾರ ಮಾಡುತ್ತಿದ್ದಾರೆ‌. ಕಾರ್ಮಿಕರನ್ನ ಸರಿಯಾಗಿ ನೋಡಿಕೊಂಡಿದ್ರೆ ಯಾವ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗುತ್ತಿರಲಿಲ್ಲ. ಕೊರೊನಾ ರೋಗ ನಿಯಂತ್ರಿಸುವಲ್ಲಿ  ರಾಜ್ಯ ಸರ್ಕಾರ ವಿಫಲವಾಗಿದೆ ಅಂತಾ ವಾಗ್ದಾಳಿ ನಡೆಸಿದ್ರು.

ಇದೇ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನ ಕೇಂದ್ರ ಸರ್ಕಾರವೇ ಕಳುಹಿಸಿದೆ. ಸುಗ್ರೀವಾಜ್ಞೆ ಹೊರಡಿಸಿ ವರದಿ ಕೊಡಿ ಅಂತಾ ಕೇಳಿದೆ. ಇವನ್ನ ರಾಜ್ಯ ಸರ್ಕಾರ ಮಾಡಬೇಕು. ಸಂವಿಧಾನಕ್ಕೆ ವಿರೋಧವಾಗಿ ಕೇಂದ್ರ ಸರ್ಕಾರ ನಡೆದುಕೊಳ್ತಿದೆ. ಇದು ಬಂಡವಾಳ ಶಾಹಿಗಳಿಗೆ ಮಣೆ ಹಾಕಿ ರೈತರ ಮಾರುಕಟ್ಟೆಗಳನ್ನ ನಾಶ ಮಾಡುತ್ತಿದೆ.. ಇದನ್ನ ನಾವು ವಿರೋಧ ಮಾಡುತ್ತೇವೆ. ಕಾಯ್ದೆ ತಿದ್ದುಪಡಿ ವಿಚಾರವಾಗಿ ಸಾರ್ವಜನಿಕವಾಗಿ ಚರ್ಚೆ ಮಾಡಬೇಕಿತ್ತು. ಇದು ಪ್ರಜಾಪ್ರಭುತ್ವ ಆದ್ರೆ ಯಾವುದೇ ಚರ್ಚೆ ಮಾಡಿಲ್ಲ. ವಿರೋಧ ಪಕ್ಷವನ್ನ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಿರ್ಮಾನ ಮಾಡಿದ್ದಾರೆ ಅಂತಾ ಕಿಡಿ ಕಾರಿದ್ರು.

- Call for authors -

LEAVE A REPLY

Please enter your comment!
Please enter your name here