ಬೆಂಗಳೂರು,ಮೇ-26: ರಾಜ್ಯದಲ್ಲಿ ಕೋವಿಡ್ ಇಂದು ಶತಕ ಬಾರಿಸಿದ್ದು 101 ಜನರಿಗೆ ಹೊಸದಾಗಿ ಸೋಂಕು ದೃಢವಾಗುವ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2283 ಕ್ಕೆ ತಲುಪಿದೆ.
ಇಂದು ಕೋವಿಡ್ ಹಿನ್ನಲೆಯಲ್ಲಿ ಇಬ್ಬರು ಮೃತರಾಗಿದ್ದು ಅಸುನೀಗಿದವರ ಸಂಖ್ಯೆ 44 ಆಗಿದೆ. ಇಂದು 43 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು ಗುಣಮುಖರಾದವರ ಸಂಖ್ಯೆ 748 ಆಗಿದೆ.
ಇಂದಿನ ಪಾಸಿಟಿವ್ ಪ್ರಕರಣದಲ್ಲಿ ಮಹಾರಾಷ್ಟ್ರ, ತಮಿಳುನಾಡು,ಜಾರ್ಖಂಡ್ ರಾಜ್ಯಗಳಿಂದ ಬಂದವರದ್ದೇ ದೊಡ್ಡ ಸಂಖ್ಯೆಯಾಗಿದೆ.ವಲಸೆ ಕಾರ್ಮಿಕರೇ ಹೆಚ್ಚಾಗಿ ಇರುವ ಕಾರಣ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.










