ಅತಿಥಿ ಉಪನ್ಯಾಸಕರ ಕುಟುಂಬಕ್ಕೆ ಡಿಸಿಎಂ 3 ಲಕ್ಷ ನೆರವು

0
5

ಬೆಂಗಳೂರು;ನ್ಯೂಮೋನಿಯಾಕ್ಕೆ ತುತ್ತಾಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಅಸುನೀಗಿದ ಅತಿಥಿ ಉಪನ್ಯಾಸಕರೊಬ್ಬರ ಪತ್ನಿಯ ಸಾವಿಗೆ ಕಂಬನಿ ಮಿಡಿದಿರುವ ಉಪ ಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು ಮೃತರ ಕುಟುಂಬಕ್ಕೆ ಸಹಾಯಹಸ್ತ ಚಾಚಿದ್ದಾರೆ.

ಗಂಗಾವತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾದ ಮಂಜಣ್ಣ ಅವರ ಪತ್ನಿ ಲತಾ ಅವರು ತೀವ್ರ ನ್ಯೂಮೋನಿಯಾಕ್ಕೆ ತುತ್ತಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಕುಟುಂಬವು ತೀವ್ರ ಹಣಕಾಸು ಸಂಕಷ್ಟ ಎದುರಿಸುತ್ತಿತ್ತು. ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿ ಕುಟುಂಬವು ದಾನಿಗಳ ಮೊರೆ ಹೋಗಿತ್ತು.

ಮಾಧ್ಯಮಗಳ ಮೂಲಕ ಈ ವಿಷಯ ಗಮನಕ್ಕೆ ಬಂದಕೂಡಲೇ ವೈಯಕ್ತಿಕವಾಗಿ 3 ಲಕ್ಷ ರೂಪಾಯಿ ನೆರವು ನೀಡುವುದಾಗಿ ಡಿಸಿಎಂ ಘೋಷಿಸಿದ್ದಾರೆ

ಸಾವಿನ ಸುದ್ದಿ ತಿಳಿದು ತೀವ್ರ ಆಘಾತ ವ್ಯಕ್ತಪಡಿಸಿರುವ ಡಿಸಿಎಂ, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ.

- Call for authors -

LEAVE A REPLY

Please enter your comment!
Please enter your name here