ರಾಜ್ಯಪಾಲ ವಜುಭಾಯ್ ವಾಲಾ,ದೇವೇಗೌಡರಿಂದ ಯೋಗಾಸನ ಪ್ರದರ್ಶನ

0
3

ಬೆಂಗಳೂರು: ಭಾರತೀಯ ಸಂಸ್ಕೃತಿ ಪರಂಪರೆಯ ಯೋಗ ದಿನಾಚರಣೆಯನ್ನು ಉದ್ಯಾನನಗರಿ ಬೆಂಗಳೂರಿನಲ್ಲಿ ಆಚರಿಸಲಾಯಿತು. ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲಾ, ಮಾಜಿ ಪ್ರಧಾನಿ‌ ಎಚ್.ಡಿ ದೇವೇಗೌಡ,ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಯೋಗಾಸನದ ಮಾಡಿ ಗಮನ ಸೆಳೆದರು.

ಪದ್ಮನಾಭ ನಗರ ನಿವಾಸದಲ್ಲಿ ಯೋಗ ಶಿಕ್ಷಕರ ಸಹಕಾರದೊಂದಿಗೆ ಇಳಿ ವಯಸ್ಸಿನಲ್ಲಿಯೂ ಅತ್ಯುತ್ಸಾಹದಿಂದ ದೇವೇಗೌಡರು ಯೋಗಾಸನ ಮಾಡಿದರು.ವಿವಿಧ ಆಸನಗಳನ್ನು ಮಾಡಿ ಗಮನ ಸೆಳೆದರು.ನಂತರ ನಾಡಿನ ಜನತೆಗೆ ವಿಶ್ವ ಯೋಗ ದಿನದ ಶುಭಾಶಯಗಳನ್ನು ಕೋರತ್ತಾ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಯೋಗ ಒಂದು ಸಮಗ್ರ ವಿಧಾನ ಎಂದು ಯೋಗಾಭ್ಯಾಸದಲ್ಲಿ ತೊಡಗುವಂತೆ ಜನತೆಗೆ ಕರೆ ನೀಡಿದರು.

ರಾಜ್ಯದ ಪ್ರಥಮ ಪ್ರಜೆ ರಾಜ್ಯಪಾಲ ವಜುಭಾಯ್ ರೂಢಾಭಾಯ್ ವಾಲ್ ಕೂಡ ಯೋಗಾಸನ ಮಾಡಿದರು.ರಾಜ ಭವನದಲ್ಲಿ ಯೋಗಾಸನ ಮಾಡಿ ಯೋಗ ದಿನದ ಶುಭ ಕೋರಿದರು.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಯೋಗಾಸನ ಮಾಡಿದರು.ಯೋಗ ಒಂದು ದಿನದ ಪ್ರದರ್ಶನ ಆಗಬಾರದು. ನಿರಂತರ ಅಭ್ಯಾಸ ಮಾಡಲು ಪ್ರಯತ್ನಿಸ ಬೇಕು. ಯೋಗಾಭ್ಯಾಸ ವೈಯಕ್ತಿಕವಾಗಿ ನನ್ನ ಆರೋಗ್ಯಕ್ಕೆ ನೆರವಾಗಿದೆ. ನೀವೂ ನಿಮಗಾಗಿ ಯೋಗಾಭ್ಯಾಸ ಮಾಡಿ ಎಂದು ಕರೆ ನೀಡಿದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯೋಗ ಮಾಡಿದೇ ಯೋಗ ದಿನದ ಶುಭಾಷಯ ಕೋರಿದರು. ನಾಡಿನ ಸಮಸ್ತ ಜನತೆಗೆ ಅಂತಾರಾಷ್ಟ್ರೀಯ ಯೋಗ ದಿನದ ಹಾರ್ದಿಕ ಶುಭಾಶಯಗಳು. ವಿಶ್ವಕ್ಕೆ ಭಾರತದ ಕೊಡುಗೆಯಾಗಿರುವ “ಯೋಗ” ನಮ್ಮ ಹಿರಿಯರು ನಮಗೆ ನೀಡಿದ ಹೆಮ್ಮೆಯ ಬಳುವಳಿ. ಇದನ್ನು ಉಳಿಸಿಕೊಳ್ಳುವ ಹಾಗು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸದೃಢ, ಆರೋಗ್ಯಪೂರ್ಣ ಜೀವನವನ್ನು ಸಂಭ್ರಮಿಸೋಣ, ಸಾರ್ಥಕ ಬದುಕನ್ನು ಬಾಳೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು, ರಾಜ್ಯ ಸಂಘಟನಾ ಪ್ರಧಾನಕಾರ್ಯದರ್ಶಿ ಅರುಣ್ ಕುಮಾರ್ ರವರು, ವಿಧಾನಪರಿಷತ್ ಸದಸ್ಯರು ಹಾಗೂ ರಾಜ್ಯ ಪ್ರಧಾನಕಾರ್ಯದರ್ಶಿ ಎನ್. ರವಿಕುಮಾರ್ ರವರು ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿಯವರು ಮತ್ತು ರಾಜ್ಯ ಕಾರ್ಯಾಲಯ ಕಾರ್ಯದರ್ಶಿ ಲೋಕೇಶ್ ಅಂಬೇಕಲ್ಲುರವರು ಸೇರಿದಂತೆ ವಿವಿಧ ಪದಾಧಿಕಾರಿಗಳು ಭಾಗವಹಿಸಿ ಯೋಗಾಸನ ಮಾಡಿದರು.

- Call for authors -

LEAVE A REPLY

Please enter your comment!
Please enter your name here