ಬೆಂಗಳೂರು: ಸೂರ್ಯ ಗ್ರಹಣದ ದಿನದಂದೇ ವ್ಹೀಲಿಂಗ್ ಮಾಡಲು ಹೋಗಿದ್ದ ಮೂವರು ಅಪಘಾತದಿಂದ ಧಾರುಣವಾಗಿ ಸಾವನ್ನಪ್ಪಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ಜರುಗಿದೆ.
ಯಲಹಂಕದ ಜಿಕೆವಿಕೆ ಬಳಿ ಭೀಕರ ಅಪಘಾತ ಸಂಭವಿಸಿದ್ದು ಮೂವರು ಸಾವಿಗೀಡಾಗಿದ್ದಾರೆ. ಬೆಳಿಗ್ಗೆ 6.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ವ್ಹೀಲಿಂಗ್ ಮಾಡುತ್ತಿದ್ದ ಯುವಕರು ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ನಾಗವಾರ ಗೋವಿಂದಪುರದ ಮಹ್ಮದ್ ಹದಿ, ಅಹಮದ್ ಖಾನ್ ಹಾಗೂ ಸೈಯದ್ ರಿಯಾಜ್ ಮೃತ ಯುವಕರು ಎನ್ನಲಾಗಿದೆ.
ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.









