ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಸರಳವಾಗಿ ವಿವಾಹವಾದ ಗೌಡರ ಕುಟುಂಬದ ಕುಡಿ ನಿಖಿಲ್ ಕುಮಾರಸ್ವಾಮಿ ತನ್ನ ಮಡದಿಯ ಹುಟ್ಟುಹಬ್ಬವನ್ನು ಸರಳವಾಗಿ ಕಲರ್ ಫುಲ್ ಆಗಿ ಆಚರಿಸುವ ಮೂಲಕ ನೆಟ್ಟಿಗರ ಗಮನಸೆಳೆದಿದ್ದಾರೆ.
ಮದುವೆಯ ನಂತರದ ಪತ್ನಿ ರೇವತಿಯ ಮೊದಲ ಹುಟ್ಟುಹಬ್ಬವನ್ನು ನಟ ಜಾಗ್ವಾರ್ ಖ್ಯಾತಿಯ ನಿಖಿಲ್ ಕುಮಾರಸ್ವಾಮಿ ಆಚರಿಸಿದ್ದಾರೆ.ಸಮಾರಂಭದಂತಹ ಕಾರ್ಯಕ್ರಮ ಮಾಡದೆ ಸಿಂಪಲ್ ಆಗಿ ಮ್ಯಾಚಿಂಗ್ ಡ್ರೆಸ್ ತೊಟ್ಟು ಪತ್ನಿ ರೇವತಿ ಕೈಯಿಂದ ಕೇಕ್ ಕತ್ತರಿಸಿ ಫೋಟೋವನ್ನು ಇನ್ ಸ್ಟಾಗ್ರಾಂ ನಲ್ಲಿ ಶೇರ್ ಮಾಡಿದ್ದಾರೆ.
ಹುಟ್ಟು ಹಬ್ಬದ ಶುಭಾಶಯಗಳು ಚಿನ್ನ ಎಂದು ಪತ್ನಿಗೆ ಶುಭಾಷಯ ತಿಳಿಸಿದ್ದಾರೆ. ಇದು ನಿಖಿಲ್ ಅಭಿಮಾನಿಗಳು ಹಾಗೂ ನೆಟ್ಟಿಗರ ಮನಗೆದ್ದಿದ್ದು ಪತ್ನಿಗೆ ಚಿನ್ನ ಎಂದು ಕರೆದು ಹಂಚಿಕೊಂಡ ಬರ್ತ್ ಡೇ ಕಲರ್ ಫುಲ್ ಫೋಟೋಗೆ ಐವತ್ತು ಸಾವಿರಕ್ಕೂ ಹೆಚ್ಚಿನ ಜನ ಕೆಲವೇ ಗಂಟೆಗಳಲ್ಲಿ ಲೈಕ್ ಮಾಡಿ ನೂರಾರು ಕಮೆಂಟ್ ಮಾಡಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವ ನಿಖಿಲ್ ಇದೀಗ ಪತ್ನಿಯ ಬರ್ತ್ ಡೇ ಸಂಭ್ರಮದಲ್ಲೂ ಸುದ್ದಿಯಲ್ಲಿದ್ದಾರೆ.









