ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಶನಿವಾರ ತಮ್ಮ 43ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಬಾರಿ ಹುಟ್ಟುಹಬ್ಬದ ವಿಶೇಷ ಏನಂದ್ರೆ, ಶಿಲ್ಪಾ ಪತಿ ರಾಜ್ ಕುಂದ್ರಾ ಅತ್ಯಂತ ಸುಂದರ ಕೇಕ್ವೊಂದರ ಮೂಲಕ ಶಿಲ್ಪಾರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಶಿಲ್ಪಾ ಹುಟ್ಟುಹಬ್ಬಕ್ಕೆ ರಾಜ್ ಕುಂದ್ರಾ ನೀಡಿರುವ ಕೇಕ್ ವಿಶೇಷ ಏನಂದ್ರೆ, ಆಕರ್ಷಕ ಕೇಕ್ ಮೇಲೆ ಶಿಲ್ಪಾ ಅವರ ಪುಟ್ಟ ಪ್ರತಿಮೆಯನ್ನು ನಿಲ್ಲಿಸಲಾಗಿದೆ. ಜೊತೆಗೆ “ಟು ದ ಸೂಪರ್ ಸೆ ಊಪರ್, ಡಾಟರ್, ಸಿಸ್ಟರ್, ವೈಫ್ ಆ್ಯಂಡ್ ಮಮ್’ ಎಂದು ಬರೆಯಲಾಗಿದೆ.
ಶಿಲ್ಪಾ ರಿಯಾಲಿಟಿ ಶೋ ಒಂದರ ತೀರ್ಪುಗಾರರಾಗಿದ್ದು ಉತ್ತಮ ಪ್ರದರ್ಶನಗಳನ್ನು ನೋಡಿದ ತಕ್ಷಣ “ಸೂಪರ್ ಸೆ ಊಪರ್’ ಎಂದು ಪ್ರಶಂಸಿಸುತ್ತಾರೆ. ಅವರ ಈ ಮಾತು ಭಾರೀ ಜನಪ್ರಿಯತೆ ಪಡೆದಿದ್ದು, ಈ ಪದದ ಮೂಲಕವೇ ಪತ್ನಿಗೆ ವಿಶೇಷ ಗಿಫ್ಟ್ ನೀಡಿರುವುದು ಈ ಬಾರಿ ಹುಟ್ಟು ಹಬ್ಬದ ಸ್ಪೆಷಲ್.









